ಕಾರ್ಗಿಲ್‌ ವಿಜಯ್‌ ದಿವಸ್‌ ಅಂಗವಾಗಿ ತುಮಕೂರು ಲೇಕ್‌ ರನ್‌ 2026

ತುಮಕೂರು:ತುಮಕೂರು ರನ್ನರ್ ಕ್ಲಬ್ ಟ್ರಸ್ಟ್(ರಿ), ವತಿಯಿಂದ ಕಾರ್ಗಿಲ್ ವಿಜಯೋತ್ಸವ ಓಟದ ಅಂಗವಾಗಿ ತುಮಕೂರು ಲೇಕ್ ರನ್ -2026 ನ್ನು ಜುಲೈ 26 ರ ಭಾನುವಾರ ನಗರದ ಅಮಾನೀಕೆರೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತುಮಕೂರು ರನ್ನರ್ ಕ್ಲಬ್ ನ ಪ್ರೊ.ರವಿ ತಿಳಿಸಿದ್ದಾರೆ.

 

 

 

ಇಂದು ನಗರದ ಖಾಸಗಿ ಹೊಟೇಲ್ ನಲ್ಲಿ ಹಮ್ಮಿಕೊಂಡಿದ್ದ ಕಾರ್ಗಿಲ್ ವಿಜಯೋತ್ಸವ ಓಟ,ತುಮಕೂರು ಲೇಕ್ ರನ್ -2026 ರ ಟೀ ಶರ್ಟ್, ಪೀನಿಷರ್ ಮೇಡಲ್ ಮತ್ತು ಕ್ಯಾಪ್ ಗಳ ಅನಾವರಣ ಸಮಾರಂಭದಲ್ಲಿ ಮಾತನಾಡಿದ ಅವರು, ಸ್ವತಹಃ ಕ್ರೀಡಾಪಟುವಾಗಿರುವ ಡಿ ಸಿ ಎಂ ಡಾ.ಜಿ.ಪರಮೇಶ್ವರ
ತುಮಕೂರನ್ನು ಶೈಕ್ಷಣಿಕ ನಗರಿಯ ಜೊತೆಗೆ, ಕ್ರೀಡಾ ನಗರಿಯನ್ನಾಗಿಸಲು ನಿರಂತರ ಪ್ರಯತ್ನಿಸುತ್ತಿರುವುದು ಅತ್ಯಂತ ಸಂತಸದ ವಿಷಯ ಎಂದು ತಿಳಿಸಿದರು.
ಅದರ ಒಂದು ಭಾಗವಾಗಿಯೇ ತುಮಕೂರು ರನ್ನರ್ ಕ್ಲಬ್ ಆಯೋಜಿಸುತ್ತಿರುವ ನಾಲ್ಕನೇ ಓಟ ಇದಾಗಿದ್ದು, ಕಾರ್ಗೀಲ್ ಯುದ್ದದಲ್ಲಿ ಮಡಿದ ಯೋಧರನ್ನು ಸ್ಮರಿಸುವುದು ಹಾಗು ಜನರಲ್ಲಿ ರಾಷ್ಟ್ರ ಪ್ರೇಮ ಬೆಳೆಸುವ ನಿಟ್ಟಿನಲ್ಲಿ ಈ ಕಾರ್ಗೀಲ್ ವಿಜಯೋತ್ಸವ ಓಟ ವನ್ನು ಆಯೋಜಿಸಲಾಗಿದೆ ಎಂದರು.

 

 

 

 

ತುಮಕೂರು ಅಮಾನಿಕೆರೆಯ ಸುತ್ತಲು ನಿರ್ಮಿಸಿರುವ ವಾಕೀಂಗ್ ಪಾಥ್ ನಲ್ಲಿ ಈ ತುಮಕೂರು ಲೇಕ್ ರನ್ -2026 ನಡೆಯಲಿದ್ದು, ಎಂಟು ನೂರು ಜನರು ಈ ಓಟದಲ್ಲಿ ಪಾಲ್ಗೊಳ್ಳಲು ಈಗಾಗಲೇ ಹೆಸರು ನೊಂದಾಯಿಸಿದ್ದು ಈ ಗಾಗಲೇ ನೊಂದಣಿ ಮುಕ್ತಾಯ ಗೊಂಡಿರುತ್ತದೆ. ಈ ಓಟದಲ್ಲಿ 5.50 ಕಿ ಮೀ ಮತ್ತು 11 ಕಿ ಮೀ ಎಂಬ ಎರೆಡು ವಿಭಾಗಗಲಳಿದ್ದು 11 ಕಿ ಮೀ ಓಡುವವರಿಗೆ ಜೂಲೈ 26 ರ ಬೆಳಿಗ್ಗೆ 6 ಗಂಟೆಗೆ ಓಟ ಆರಂಭ ವಾಗುತ್ತದೆ. ಹಾಗೆಯೇ 5.50 ಕಿ ಮೀ ಓಟವು ಬೆಳಿಗ್ಗೆ 7:0 ಆರಂಭ ವಾಗುತ್ತದೆ.

 

 

ಈಗಾಗಲೇ ಆನ್ ಲೈನ್ ಮೂಲಕ ಹೆಸರು ನೊಂದಾಯಿಸಿರುವ ಓಟಗಾರರಿಗೆ ಜುಲೈ 25 ರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ ಟೀ ಶರ್ಟ್, ಬಿಬ್ ನಂಬರ್, ಗುಡಿ ಬ್ಯಾಗ್ ಮತ್ತು ಓಟದ ನಿಯಮಗಳನ್ಬು ತಿಳಿಸಲಾಗುವುದು, ಭಾನುವಾರ ಬೆಳಗ್ಗೆ 5:45 ಕ್ಕೆ ಎಲ್ಲರೂ ಸೇರಿಕೊಂಡು 6:00ಗಂಟೆಗೆ ವೀರ ಯೋಧರಿಗೆ ಗೌರವ ನಮನ ಸಲ್ಲಿಸಿ 6:15 ಕ್ಕೆ ವಾರ್ಮಿoಗ್ ಅಪ್ ನಂತರ ತುಮಕೂರು ಲೇಕ್ ರನ್ -2026 ರ ಓಟದ ಆರಂಭವಾಗಲಿದೆ ಎಂದು ಪ್ರೊ.ರವಿ ವಿವರ ನೀಡಿದರು.

 

 

 

ತುಮಕೂರು ರನ್ನರ್ ಕ್ಲಬ್ ಆಯೋಜಿಸಿರುವ ಕಾರ್ಗಿಲ್ ವಿಜಯೋತ್ಸವ ಓಟ,ತುಮಕೂರು ಲೇಕ್ ರನ್ -2026 ನ್ನು ಶಿಸ್ತು ಬದ್ದವಾಗಿ ಆಯೋಜಿಸಲು ಹಲವಾರು ದಾನಿಗಳು ಕೈಜೋಡಿಸಿದ್ದಾರೆ. ತುಮಕೂರು ಮರ್ಜೆಂಟ್ಸ್ ಕ್ರೆಡಿಟ್ ಕೋ ಅಪರೇಟಿವ್ ಬ್ಯಾಂಕ್ ನ ಅಧ್ಯಕ್ಷರು ಡಾ.ಎನ್.ಎಸ್. ಜಯಕುಮಾರ್, ತುಮಕೂರು ನಾಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಶ್ರೀ ಉಮೇಶ್ ಚಂದ್ರ ಶ್ರೀಆಟೋ, ಟಾಟಾ ಮೋಟರ್ಸ್ ನ ಶ್ರೀನಿವಾಸ್ ದಿವಾಕರ್, ದೀಕ್ಷಾ ಬಿಲ್ಡರ್ಸ್ ಅಂಡ್ ಡೆವಲಪರ್ ನ ಶ್ರೀ ಎ.ಎಸ್.ಕಾಂತರಾಜು, ಯಶವಂತಪುರದ ಫೋರ್ಟಿಸ್ ಹಾಸ್ಪಿಟಲ್ ನ ಶ್ರೀ ಮಂಜುನಾಥ್, ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಶ್ರೀ ಸತೀಶ್ ಕೆ.ಮಲ್ಲಣ್ಣ, ಎನ್ವಿರೋ ಎಲೆಕ್ಟ್ರಿಕಲ್ ನ ಶ್ರೀ ಅನಿಲ್ ಪೋರ್ವಾಲ್, ಶ್ರೀ ಕಾರ್ತಿಕ್ ಸಿಂಗ್ ಫೋಟೊಗ್ರಫಿ, ತುಮಕೂರು ಜಿಲ್ಲಾಡಳಿತ, ತುಮಕೂರು ನಗರಭಿವೃದ್ಧಿ ಪ್ರಾಧಿಕಾರ ಮತ್ತು ತುಮಕೂರು ಮಹಾಗಾರ ಪಾಲಿಕೆ ಸೇರಿದಂತೆ ಹಲರು ಕೈಜೋಡಿಸಿದ್ದಾರೆ.

 

 

 

 

ತುಮಕೂರು ಲೇಖ್ ರನ್ -2026 ರ ಪ್ರಮುಖ ಪ್ರಯೋಜಕರಾದ ಟಿ.ಎಂ.ಸಿ.ಸಿ ಅಧ್ಯಕ್ಷರಾದ ಎನ್.ಎಸ್.ಜಯಕುಮಾರ್ ಮಾತನಾಡಿ,26 ವರ್ಷಗಳ ಹಿಂದೆ ನಡೆದ ಕಾರ್ಗಿಲ್ ಯುದ್ದದ ವಿಜಯೋತ್ಸವವನ್ನು ಕೇವಲ ಒಂದು ದಿನಕ್ಕೆ ಸಿಮೀತ ಗೊಳಿಸದೆ,ಯುದ್ದದಲ್ಲಿ ಪ್ರಾಣ ಕಳೆದುಕೊಂಡ ಕುಟುಂಬಗಳ ನೆರವಿಗೆ ಬರುವ ಕೆಲಸ ಆಗಬೇಕಿದೆ.ಈ ನಿಟ್ಟಿನಲ್ಲಿ ಮಾಜಿ ಸೈನಿಕರು,ಹಾಗೂ ಯುದ್ದದಲ್ಲಿ ತಮ್ಮ ಕುಟುಂಬದವರನ್ನು ಕಳೆದುಕೊಂಡವರ ವಿವರ ನೀಡಿದರೆ, ಅಂತಹ ಕುಟುಂಬಗಳ ಅರ್ಥಿಕ ನೆರವಿಗೆ ಟಿ.ಎಂ.ಸಿಸಿ ಸದಾ ನಿಲ್ಲಲಿದೆ.ಯುದ್ದದಲ್ಲಿ ಮಡಿದ ಯೋಧರನ್ನು ಸ್ಮರಿಸುವುದು ಒಂದೆಡೆಯಾದರೆ, ಯುದ್ದದಲ್ಲಿ ತಮ್ಮ ಕುಟುಂಬದ ಆಧಾರಸ್ತಂಭಗಳನ್ನು ಕಳೆದುಕೊಂಡಿರುವ ಕುಟುಂಬಗಳ ನೆರವಿಗೂ ನಿಲ್ಲುವ ಕೆಲಸವು ಆಗಬೇಕಿದೆ.ಅಂತಹ ಕುಟುಂಬದೊಂದಿಗೆ ನಾವಿದ್ದೇವೆ ಎಂಬುದನ್ನು ಜಗತ್ತಿಗೆ ತೋರಿಸಬೇಕಿದೆ ಎಂದರು.

 

 

 

 

 

ಸುದ್ದಿಗೋಷ್ಠಿಯಲ್ಲಿ ದೀಕ್ಷಾ ಬಿಲ್ಡರ್ಸ್ ಅಂಡ್ ಡೆವಲಪರ್ಸ್ ಎ.ಎಸ್.ಕಾಂತರಾಜು, ಶ್ರೀಆಟೋ ಮಾಲೀಕರಾದ ಶ್ರೀನಿವಾಸ್ ದಿವಾಕರ್, ಪೂರ್ವೆಲ್ ಎಲೆಟ್ರಿಕ್‌ನ ಅನಿಲ್ ಪೂರ್ವೆಲ್, ಪೋರ್ಟಿಸ್ ಆಸ್ಪತ್ರೆಯ ಮಂಜುನಾಥ್,ಕೆ.ಪಿ.ಸಿ.ಸಿ. ಮಾಜಿ ಪ್ರದಾನ ಕಾರ್ಯದರ್ಶಿ ಸತೀಶ್ ಕೆ.ಮಲ್ಲಣ್ಣ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *