ತುಮಕೂರು:ಮಹಿಳೆಯರು ಸ್ವಯಂ ಉದ್ಯೋಗ ಕೈಗೊಳ್ಳಲು ಟೈಲರಿಂಗ್ ಮತ್ತು ಫ್ಯಾಷನ್ ಡಿಸೈನಿಂಗ್ ಅತ್ಯಂತ ಉಪಯುಕ್ತವಾಗಿದೆ,ಮಹಿಳೆಯರು ಅಬಲೆಯಲ್ಲ ಎಲ್ಲ ರಂಗಗಳಲ್ಲಿ ತನ್ನ ಶಕ್ತಿ ಸಾಮರ್ಥ್ಯಗಳನ್ನು ತೋರಿದ್ದಾಳೆ,ಭೂಮಿಯಿಂದ ಚಂದ್ರಯಾನದವರೆಗೆ ಸಾಧಿಸಿ ತೋರಿಸಿದ್ದಾಳೆ,ಟೈಲರಿಂಗ್ ಮತ್ತು ಫ್ಯಾಷನ್ ಡಿಸೈನಿಂಗ್ ಕಲಿತರೆ ನಾವೇ ಹತ್ತಾರು ಜನರಿಗೆ ಕೆಲಸ ಕೊಡಬಹುದು,ಈ ಮೂಲಕ ರಾಷ್ಟ್ರದ ಜಿಡಿಪಿಯಲ್ಲಿ ಸಹ ಮಹಿಳೆಯರ ಪಾತ್ರ ಅತ್ಯಂತ ಹಿರಿದು ಎಂದು ಗೀತಾ ಫ್ಯಾಷನ್ ಅಕಾಡೆಮಿಯ ಹಳೆಯ ವಿದ್ಯಾರ್ಥಿ ಹಾಲಿ ಬೂಟೆಕ್ ನಡೆಸುತ್ತಿರುವ ಉದ್ಯಮಿ ತೇಜಸ್ವಿನಿರವರು ತಿಳಿಸಿದರು.

ಅವರು ಇಂದು ನಗರದ ಪಾಲಿಕೆ ಆವರಣದಲ್ಲಿರುವ ತುಮಕೂರು ಕ್ಲಬ್ ನಲ್ಲಿ ಗೀತಾ ಫ್ಯಾಷನ್ ಅಕಾಡೆಮಿಯಿಂದ ಆಯೋಜಿಸಿದ್ದ ಫ್ಯಾಷನ್ ಡಿಸೈನ್ ರ್ಯಾಂಪ್ ವಾಕ್,ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಶ್ರೀಮತಿಬಿಂದುರವರು ಕಡಿಮೆ ದರದಲ್ಲಿ ಉತ್ತಮ ಬಟ್ಟೆಗಳನ್ನು ಹೊಲಿಸಿ ಹಾಕಿಕೊಳ್ಳಬೇಕೆಂಬ ಕನಸೇ ನಮ್ಮನ್ನು ಈ ಎತ್ತರಕ್ಕೆ ಹೊತ್ತೋಯ್ದಿದೆ,ಸಾಮಾನ್ಯ ಮಹಿಳೆಯಾದ ನಾನು ಇಂದು ಉತ್ತಮ ಫ್ಯಾಷನ್ ಡಿಸೈನರ್ ಆಗಿ ನಾನೇ ಸ್ವತಃ ಬೂಟೆಕ್ ನಡೆಸುತ್ತಿದ್ದೇನೆ ಇದಕ್ಕೆ ಕಾರಣ ಗೀತಾ ಫ್ಯಾಷನ್ ಅಕಾಡೆಮಿ ಮತ್ತು ಅದರ ಮುಖ್ಯಸ್ಥರಾದ ಶ್ರೀಮತಿಗೀತಾ ಮೇಡಂರವರು,ಮಹಿಳೆಯರಿಗೆ ಕುಳಿತಲ್ಲಿಯೇ ಕೆಲಸ ಮಾಡಿ ದುಡಿಯಬಹುದಾದ ಕೆಲಸ ಅಂದರೆ ಅದು ಟೈಲರಿಂಗ್ ಮತ್ತು ಫ್ಯಾಷನ್ ಡಿಸೈನಿಂಗ್,ಉತ್ತಮ ಫ್ಯಾಷನ್ ಡಿಸೈನರ್ ಆದರೆ ಲಕ್ಷಾಂತರ ರೂಗಳನ್ನು ತಿಂಗಳಲ್ಲಿ ಸಂಪಾದಿಸಬಹುದು,ಇಂದು ಉತ್ತಮ ಫ್ಯಾಷನ್ ಡಿಸೈನರ್ ಆದರೆ ನಾವೇ ಉತ್ತಮ ಬಟ್ಟೆಗಳನ್ನು ಹೊಲಿದು ರಫ್ತು ಕೂಡ ಮಾಡಬಹುದು ಜಾಗತಿಕ ಮಾರುಕಟ್ಟೆಯಲ್ಲಿ ಭಾರತೀಯ ಫ್ಯಾಷನ್ ಗೆ ಬೇಡಿಕೆಯಿದೆ ಎಲ್ಲ ಮಹಿಳೆಯರು ಟೈಲರಿಂಗ್ ಕಲಿತು ಸ್ವಯಂಉದ್ಯೋಗ ಕೈಗೊಳ್ಳಿ ಎಂದು ಮನವಿ ಮಾಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಗೀತಾ ಫ್ಯಾಷನ್ ಅಕಾಡೆಮಿಯ ಮುಖ್ಯಸ್ಥರಾದ ಶ್ರೀಮತಿ ಗೀತಾರವರು ಹೆಣ್ಣು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಲ್ಲಳು ಎಂಬುದಕ್ಕೆ ಇಲ್ಲಿ ಕುಳಿತಿರುವ ನೂರಾರು ಜನ ಸಾಕ್ಷಿ,ಮಹಿಳೆಯರಿಗೆ ಟೈಲರಿಂಗ್ ಉದ್ಯೋಗದಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದೆ,ನವ-ನವೀನ ಡ್ರೆಸ್ ಗಳನ್ನು ಹೊಲಿದು ವಿದೇಶಗಳಿಗೆ ರಫ್ತು ಮಾಡಬಹುದು,ಒಂದು ಡ್ರೆಸ್ ಹೊಲಿದರೆ ಕನಿಷ್ಠ 500ರೂನಿಂದ ಸಾವಿರಾರು ರೂಪಾಯಿ ದುಡಿಯಬಹುದು,ಒಂದು ಡ್ರೆಸ್ ಹೊಲಿದರೆ ಸಹ ಸಾವಿರಾರು ರೂ ದುಡಿಯಬಹುದು ಜೊತೆಗೆ ಹತ್ತಾರು ಮಹಿಳೆಯರಿಗೂ ಸಹ ಉದ್ಯೋಗ ನೀಡಬಹುದು,ನಾವು ನಮ್ಮ ಸಂಸ್ಥೆಯಿಂದ ಒಂದೇ ದಿನದಲ್ಲಿ ಬ್ಲೌಸ್ ಹೊಲಿಯುವುದನ್ನು ಹೇಳಿಕೊಡುತ್ತೇವೆ,ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳಿಗೆ ವಾರದಲ್ಲಿ ಒಂದು ದಿನ ಉಚಿತ ತರಬೇತಿ ನೀಡುತ್ತೇವೆ,ಯಾರೂ ಬೇಕಾದರೂ ನಮ್ಮ ಸಂಸ್ಥೆಯಲ್ಲಿ ಪ್ರವೇಶ ಪಡೆಯಬಹುದು,ಕಟಿಂಗ್,ಡಿಸೈನ್,ಹೊಲಿಯುವುದನ್ನು ಹೇಳಿಕೊಡುತ್ತೇವೆ ಎಲ್ಲರೂ ಇದನ್ನು ಉಪಯೋಗಿಸಿಕೊಳ್ಳಬೇಕೆಂದು ಮನವಿ ಮಾಡಿದರು.

ಶ್ರೀಮತಿಕುಸುಮ ಮತ್ತಿತರರು ಉಪಸ್ಥಿತರಿದ್ದರು,ಇಂದು ನಡೆದ ಫ್ಯಾಷನ್ ಡಿಸೈನ್ ರ್ಯಾಂಪ್ ವಾಕ್ ಸ್ಪರ್ಧೆಗಳಲ್ಲಿ ಶ್ರೀಮತಿ ತೇಜಸ್ವಿನಿ,ಬಿಂದು,ಕುಸುಮರವರು ತೀರ್ಪುಗಾರರಾಗಿದ್ದರು,ವರ್ಷ ಮತ್ತು ಕಾವ್ಯರವರು ಕಾರ್ಯಕ್ರಮವನ್ನು ನಿರೂಪಿಸಿದರು.ನೂರಾರು ಮಹಿಳೆಯರು,ಹೆಣ್ಣುಮಕ್ಕಳು ನೂತನ ವಸ್ತ್ರಗಳನ್ನು ಧರಿಸಿ ರ್ಯಾಂಪ್ ವಾಕ್ ಮಾಡಿ ಪ್ರೇಕ್ಷಕರ ಕಣ್ಮನ ಸೆಳೆದರು.
