ವಾಸವಿ ಪ.ಪೂ. ಕಾಲೇಜಿಗೆ ಕೀರ್ತಿ ತಂದ 15 ವಿದ್ಯಾರ್ಥಿಗಳಿಗೆ ಸನ್ಮಾನ

ತುಮಕೂರು: ನಗರದ ಎಸ್ ಐ ಟಿ ಮುಖ್ಯ ರಸ್ತೆಯಲ್ಲಿರುವ ವಾಸವಿ ಪದವಿ ಪೂರ್ವ ಕಾಲೇಜಿನಲ್ಲಿ ಅಧ್ಯಯನ ಮಾಡಿ ದ್ವಿತೀಯ ಪಿ ಯು ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುನ್ನತ ಸ್ಥಾನ ಪಡೆದು ಕಾಲೇಜಿಗೆ ಕೀರ್ತಿ ತಂದು ಕೊಟ್ಟ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ 15 ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷರಾದ ಕೆ.ಅಮರನಾರಾಯಣ್ ಅಭಿನಂದಿಸಿದರು.

 

 

 

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಿಮ್ಮ ಪರಿಶ್ರಮದಿಂದ ಕಾಲೇಜು ಹಾಗೂ ಪೋಷಕರ ಗೌರವವನ್ನು ಹೆಚ್ಚಿಸಿದ್ದೀರಿ. ಇದು ಹೆಮ್ಮಯ ಸಂಗತಿ ಎಂದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸಿ.ಆರ್.ಮೋಹನ್ ಕುಮಾರ್ ಅವರು ಕಾಲೇಜಿಗೆ ಕೀರ್ತಿ ತಂದು ಕೊಟ್ಟ ಎಲ್ಲಾ ವಿದ್ಯಾರ್ಥಿ ಗಳಿಗೂ ಅಭಿನಂದನೆ ಸಲ್ಲಿಸುವುದಾಗಿ ಹೇಳಿ ನಮ್ಮ ಕಾಲೇಜಿನ ಹಿರಿಯ ಉಪನ್ಯಾಸಕರ ಮಾರ್ಗದರ್ಶನ ಪಡೆದು ಈಗಾಗಲೇ ವೈದ್ಯರು, ಇಂಜಿನಿಯರ್, ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರಂತೆ ನೀವು ಉನ್ನತ ಸ್ಥಾನ ಪಡೆಯಲು ನಮ್ಮ ಕಾಲೇಜಿನ ವಿಷಯ ಸಂಪನ್ಮೂಲ ಉಪನ್ಯಾಸಕರ ಸಹಕಾರ ಸದಾ ಇರುತ್ತದೆ ಎಂದರು.
ಸಂಸ್ಥೆಯ ಉಪಾಧ್ಯಕ್ಷರು ಜಿ ಕೃಷ್ಣಮೂರ್ತಿ ಹಾಗೂ ನಿರ್ದೇಶಕರು ಗೋವಿಂದರಾಜ ಗುಪ್ತ ಅವರು ಎಲ್ಲಾ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿ ಅಭಿನಂದನೆ ತಿಳಿಸಿದರು.

 

 

 

 

ಕಾಲೇಜಿನ ಪ್ರಾಚಾರ್ಯರಾದ ಚಂದ್ರಶೇಖರ ಆರಾಧ್ಯ ಎಚ್ ವಿ ಕನ್ನಡ ವಿಷಯದಲ್ಲಿ 100 ಅಂಕ ಪಡೆದ ದೇವಿಕಾ ಸಿ ವಿದ್ಯಾರ್ಥಿಗೆ ಅಭಿನಂದನೆ ಸಲ್ಲಿಸಿ,ಪ್ರಥಮ ಮಧ್ಯವಾರ್ಷಿಕ ಎರಡನೆ ಕಿರುಪರೀಕ್ಷೆ ಅಭ್ಯಾಸ ಪರೀಕ್ಷೆಗಳು ಸಿ ಇ ಟಿ ತರಗತಿಗಳು ನಮ್ಮ ಕಾಲೇಜಿನ ಉಪನ್ಯಾಸಕರ ಸಹಕಾರದಿಂದ ಚೆನ್ನಾಗಿ ನಡೆದವು,ವಿದ್ಯಾರ್ಥಿಗಳ ಪರಿಶ್ರಮ ಇಂದಿನ ಫಲಿತಾಂಶ ಸಂಸ್ಥೆಗೆ ಕಾಲೇಜಿಗೆ ಇಲಾಖೆಗೆ ಮತ್ತು ಪೋಷಕರಿಗೆ ಗೌರವ ತಂದು ಕೊಟ್ಟಿದೆ . ಇಲ್ಲಿಯ ಗ್ರಂಥಾಲಯ ಆಟದ ಮೈದಾನ ವಿಶಾಲವಾದ ಪ್ರಯೋಗಾಲಯ ಗಳು ನಿಮಗೆ ಪ್ರೇರಣೆ ಯನ್ನು ನೀಡಿದೆ ನೀವು 2026 -27 ನೇ ಸಾಲಿಗೆ ಪ್ರಥಮ ಪಿಯುಸಿ ಗೆ ದಾಖಲಾಗುವ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಬೇಕು ಎಂದು ಸನ್ಮಾನಿತ ವಿದ್ಯಾರ್ಥಿಗಳಿಗೆ ತಿಳಿಸಿದರು.

 

 

 

 

ಈ ಸಂದರ್ಭದಲ್ಲಿ ಹಿರಿಯ ಉಪನ್ಯಾಸಕರಾದ ಜಿ ಹನುಮಂತಯ್ಯ ಬೆಂಕಿ ವಸಂತಕುಮಾರ್ ಬಿ ಎಂ ಶಿವಣ್ಣ ನರೇಂದ್ರ ಬಾಬು ,ಸಂಧ್ಯಾ ಜೆ ವಿನೋದ್ ಕೆ ಎಂ.ಪ್ರತಿಭಾ ,ನಟರಾಜು ಚಂದ್ರಕಲಾ ಗೋವಿಂದರಾಜು ದೀಪಶ್ರೀ ಮಹಾಲಕ್ಷ್ಮಿ ಧನಂಜಯ,ಪೋಷಕರು ವಿದ್ಯಾರ್ಥಿ ಗಳು ಉಪಸ್ಥಿತರಿದ್ದರು.

One thought on “ವಾಸವಿ ಪ.ಪೂ. ಕಾಲೇಜಿಗೆ ಕೀರ್ತಿ ತಂದ 15 ವಿದ್ಯಾರ್ಥಿಗಳಿಗೆ ಸನ್ಮಾನ

Leave a Reply

Your email address will not be published. Required fields are marked *