ತುಮಕೂರು:ದಿನಾಂಕ:6-6-2022ರಂದು ನಗರದ ಮರಳೂರು ದಿಣ್ಣೆ, ಅಂಕಿತ ಶಾಲೆ ಬಳಿ ಟಾಟಾ ಸಫಾರಿ ವಾಹನದಲ್ಲಿ 10ಕೆ.ಜಿ 669 ಗ್ರಾಂ ಗಾಂಜಾ ಸೊಪ್ಪು ಮತ್ತು ಎಂ.ಡಿ.ಎಂ.ಎ ನಿಷೇಧಿತ ಕ್ರಿಸ್ಟಲ್ 4.05ಗ್ರಾಂ ಮಾರುತ್ತಿದ್ದ ಅಸಾದುಲ್ಲಾ ಷರೀಫ್ ಮತ್ತು ಅಯೂಬ್ ಪಾಷಾ ಎಂಬುವವರನ್ನು ಸಿಇ.ಎನ್.ಪೋಲೀಸರು ದಾಳಿ ಮಾಡಿ ಅವರನ್ನು ಅಂದು ದಸ್ತಗಿರಿ ಮಾಡಿ, ಎನ್.ಡಿ.ಪಿ.ಎಸ್.ಕಾಯ್ದೆ 1985ರ ಸೆಕ್ಷನ್ 20(ಬಿ)(2)(ಬಿ)ಅಡಿಯಲ್ಲಿ ಕೇಸು ದಾಖಲಿಸಿದ್ದರು.

ಸದರಿ ಪ್ರಕರಣ ತುಮಕೂರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ಪ್ರಕರಣದ ಸಂಖ್ಯೆ ಸ್ಪೆಷಲ್ ಕೇಸ್ 468/2022 ದಾಖಲಾಗಿ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಧೀಶರು ಸರ್ಕಾರದ ಪರ ಸರ್ಕಾರಿ ಅಭಿಯೋಜಕರಾದ ಶ್ರೀಮತಿ ಅರುಣರವರು ಸರ್ಕಾರದ ಪರ ಕೇಸು ನಡೆಸಿದ್ದರು, ಆರೋಪಿಗಳ ವಿರುದ್ಧ ಎಲ್ಲಾ ಸಾಕ್ಷಿಗಳನ್ನು ಮತ್ತು ದಾಖಲಾತಿಗಳನ್ನು ಮಂಡಿಸಿ ಅಂತಿಮವಾಗಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಜಯಂತಕುಮಾರ್ ಸಾಹೇಬರು ದಂಡಪ್ರಕ್ರಿಯಾ ಸಂಹಿತೆ(ಸಿ.ಆರ್.ಪಿ.ಸಿ)235(2) ಅಡಿಯಲ್ಲಿ ಮತ್ತು ಮಾದಕ ವಸ್ತುಗಳು ಮತ್ತು ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ 1985ರ ಅಡಿ ಸೆಕ್ಷನ್ 20(ಬಿ)(2)(ಬಿ)ಅಡಿಯಲ್ಲಿ ಆರೋಪಿ ಸಂಖ್ಯೆ 1 ಮತ್ತು 2ರವರಿಗೆ 1985 ರ ಮಾದಕ ದ್ರವ್ಯಗಳು ಮತ್ತು ಮನೋವಿಕೃತ ವಸ್ತುಗಳ ಕಾಯ್ದೆಯ 22(ಬಿ)(2)(ಬಿ) ಅಡಿಯಲ್ಲಿ ಶಿಕ್ಷಾರ್ಹ ಅಪರಾಧಕ್ಕಾಗಿ ತಲಾ ನಾಲ್ಕು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ತಲಾ ರೂ.20,000/- (ಇಪ್ಪತ್ತು ಸಾವಿರ ರೂಪಾಯಿಗಳು ಮಾತ್ರ) ದಂಡವನ್ನು ಪಾವತಿಸಬೇಕು ಮತ್ತು ದಂಡವನ್ನು ಪಾವತಿಸಲು ವಿಫಲವಾದರೆ, ಆರು ತಿಂಗಳ ಕಠಿಣ ಜೈಲು ಶಿಕ್ಷೆಯನ್ನು ಅನುಭವಿಸಬೇಕು ಎಂದು ದಿನಾಂಕ:25-6-2026ರಂದು ತೀರ್ಪು ನೀಡಿದ್ದಾರೆ.

