ಚಿನ್ನ ಕದ್ದ ಇಲಿಯ ಮೇಲೆ ಬೀಳುತ್ತದೆಯೇ ಎಫ್‌ ಐ ಆರ್‌ ?

ಸಿನಿಮಾ ಕಥೆಯನ್ನೂ ಮೀರಿಸುವಂತಿದೆ ಈ ಕಹಾನಿ..

 

ತುಮಕೂರಿನ ಪ್ರತಿಷ್ಠಿತ ಜ್ಯುವೆಲರಿ ಶಾಪ್ ನಲ್ಲಿ ನಡೆದ ಕೃತ್ಯಕ್ಕೆ ಎಲ್ಲರೂ ಶಾಕ್.. ಆಗಿರುವುದಂತೂ ಸತ್ಯ, ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಜ್ಯುವೆಲರಿ ಶಾಪ್ ನಲ್ಲಿ ಮಾಯವಾಗಿತ್ತು ವಜ್ರ ಖಚಿತ ಚಿನ್ನದ  ಆಭರಣಗಳು..

 

 

 


ತುಮಕೂರು ನಗರದ ವಿಶ್ವಾಸ್ ಜ್ಯುವೆಲರಿ ಶಾಪ್ ನಲ್ಲಿ ಸರಿಸುಮಾರು 50 ಗ್ರಾಂ ಗೂ ಅಧಿಕ ವಜ್ರ ಹಾಗೂ ಚಿನ್ನಾಭರಣ ನಾಪತ್ತೆಯಾಗಿತ್ತು ಎಂದು ಹೇಳಲಾಗಿದೆ ಇದು ನಡೆದಿರುವುದು ತುಮಕೂರು ನಗರದ ಕಾಲ್ ಟೆಕ್ಸ್ ಸರ್ಕಲ್ ಬಳಿಯ ವಿಶ್ವಾಸ್ ಜ್ಯುವೆಲರಿ ಶಾಪ್ ನಲ್ಲಿ. ಆದರೆ ಇಲ್ಲಿ ಆಶ್ಚರ್ಯಕರ ಸಂಗತಿ ಎಂದರೆ ಯಾವುದೇ ರೀತಿಯಲ್ಲೂ  ಶಟರ್ ಮುರಿದಿಲ್ಲಾ.. ಶಾಪ್ ಒಳಗೆ ಯಾರ ಪ್ರವೇಶವೂ ಇಲ್ಲ..

 

ಆದರೆ ಚಿನ್ನ ಕಳುವಾಗಿದ್ದಾರೂ ಹೇಗೆ?

 

ಅದೂ ಸಹ ಶಾಪ್ ನಲ್ಲಿ  10 ಲಕ್ಷ ಮೌಲ್ಯದ ಸರಗಳು, ಉಂಗುರಗಳು.. ಮಂಗಮಾಯ ಅದನ್ನು ಮಾಯ ಮಾಡಿರುವುದಾದರೂ ಯಾರೂ ಗೊತ್ತ?

 

ಈ ಘಟನೆ ಕಂಡು ಕಂಗಲಾದ ಸಿಬ್ಬಂದಿಗಳು ಹಾಗೂ ಮಾಲೀಕರು..

 

ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡುವ ಮುನ್ನ ಸಿಸಿಟಿವಿ ಪರಿಶೀಲಿಸಿದಾಗ ಮಾಲೀಕ ಸಹಿತ ಸಿಬ್ಬಂದಿಗಳು ಶಾಕ್ ಆದಂತೂ ಸತ್ಯ ಇದು ಒಂದು ವಿಚಿತ್ರ ಹಾಗೂ ಆಹ್ಲಾದಕರ ಸತ್ಯವೊಂದು ಬಹಿರಂಗವಾಯಿತು. ಇಲಿಯೊಂದರ ಕೃತ್ಯಕ್ಕೆ ಥಂಡ ಹೊಡೆದ ಜ್ಯುವೆಲರಿ ಶಾಪ್ ಸಿಬ್ಬಂದಿ ಹಾಗೂ ಮಾಲೀಕ..
ಸೈಲೆಂಟಾಗಿ ಎಂಟ್ರಿ ಕೊಟ್ಟು ೧೦ ಲಕ್ಷ ಮೌಲ್ಯದ ಆಭರಣಗಳ ಮಾಯ ಮಾಡಿತ್ತು ಅದೊಂದು ಇಲಿ.. 10 ಲಕ್ಷ ಮೌಲ್ಯದ ವಜ್ರಾಭರಣ ಎಗರಿಸಿ ತನ್ನ ಬಿಲದಲ್ಲಿಟ್ಟಿದ್ದ ಇಲಿ.. ಇಲಿಯ ಕೃತ್ಯ ಸಂಪೂರ್ಣ ಸಿಸಿಟಿವಿಯಲ್ಲಿ ಸೆರೆಯಾಗಿದೆ.

 

ಇಲಿ ಕೃತ್ಯದ ಬಳಿಕ ಅದರ ಜಾಡು ಹಿಡಿದ ಜ್ಯುವೆಲರಿ ಶಾಪ್ ನ ಸಿಬ್ಬಂದಿಗಳು,  ನಂತರ ಇಲಿ ಬಿಲ ತೋಡಿದಾಗ ಪತ್ತೆಯಾದ ವಜ್ರ ಖಚಿತ ಚಿನ್ನಾಭರಣ, ಒಂದಲ್ಲಾ.. ಎರಡಲ್ಲಾ.. ಬರೊಬ್ಬರಿ 10 ರಿಂಗ್, 3 ಸರ ಎತ್ತಿದ್ದ ಇಲಿ.. ಕೊನೆಗೂ ಆಭರಣ ಸಿಕ್ಕ ಬಳಿಕ ನಿಟ್ಟುಸಿರು ಬಿಟ್ಟ ಜ್ಯುವೆಲರಿ ಶಾಪ್ ಮಾಲೀಕ ಹಾಗೂ ಸಿಬ್ಬಂದಿಗಳು.

 

 

ಈ ಪ್ರಕರಣವನ್ನು ಪೊಲೀಸ್‌ ಇಲಾಖೆಗೆ ದೂರು ನೀಡುತ್ತಾರೋ ನೋಡಬೇಕಿದೆ; ಇಲಿಯ ಮೇಲೆ ಎಫ್‌ ಐ ಆರ್‌ ಬೀಳುತ್ತದೋ ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *