ಸ್ವಾಮಿಯ ಪವಾಡ ಕಂಡು ಬೆಚ್ಚಿ ಬಿದ್ದ ಗ್ರಾಮಸ್ಥರು !!!!!

ತಿಪಟೂರು: ಹೊನ್ನವಳ್ಳಿ ಹೋಬಳಿಯ ಪಾತಪನಹುಲಿ ಹಳ್ಳಿಯ ಕಾಲೋನಿಯ ಪಿರಿಯಾಪಟ್ಟಣದಮ್ಮ ದೇವಸ್ಥಾನದಲ್ಲಿ ನಡೆದ ಘಟನೆ ತಾಲೂಕಿನ ಜನ ಅಚ್ಚರಿ ಪಡುವಂತಾಗಿದೆ.

 

ಕಾಲೋನಿ ಜನರ ಗ್ರಾಮದ ದೇವರುಗಳಾಗಿರುವ ಪಿರಿಯಾಪಟ್ಟಣದಮ್ಮನ ಮತ್ತು ಅಣ್ಣಪ್ಪ ಸ್ವಾಮಿಯವರ ಕಟ್ಟಳೆ ಪೂಜೆಯನ್ನು ಭಾನುವಾರ ರಾತ್ರಿ ಗ್ರಾಮಸ್ಥರೆಲ್ಲರೂ ಸೇರಿ ನೆರವೇರಿಸಿದ್ದಾರೆ.ನಂತರ ದೇವರುಗಳನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಿ ಅರ್ಚಕರು ದೇವಸ್ಥಾನದ ಬೀಗವನ್ನು ಹಾಕಿಕೊಂಡು ಮನೆಗೆ ತೆರಳಿದ್ದಾರೆ.

 

 

 


ಎಂದಿನಂತೆ ಸೋಮವಾರ ಬೆಳಗ್ಗೆ 5:30ರ ವೇಳೆಗೆ ಬಂದು ದೇವಸ್ಥಾನದ ಅಂಗಳವನ್ನು ಸ್ವಚ್ಛಗೊಳಿಸಿ,ಪಡಸಾಲೆಯ ಬೀಗವನ್ನು ತೆಗೆಯಲು ಹೋದಾಗ ಅಚ್ಚರಿಯೊಂದು ಕಾದಿತ್ತು. ಗರ್ಭಗುಡಿಯಲ್ಲಿ ಕೂರಿಸಿದ್ದ ಅಣ್ಣಪ್ಪ ಸ್ವಾಮಿಯು ಸುಮಾರು 15 ಅಡಿಗಳಷ್ಟು ಸಾಗಿ ಬಂದು ದೇವಸ್ಥಾನದ ಮುಂಬಾಗಿಲು ತೆಗೆಯದಂತೆ ಬೆನ್ನು ಮಾಡಿ ಕುಂತಿರುವ ಘಟನೆ ನಡೆದಿದೆ.

 

 

ಗ್ರಾಮಸ್ಥರು ಹೇಳುವ ರೀತಿ ಕಳೆದ ತಿಂಗಳು ಕೂಡ ದೇವಸ್ಥಾನದ ಅಂಗಳದಲ್ಲಿ ಮಲಗಿದ್ದವರಿಗೆ ಅಚ್ಚರಿಗೊಂದು ಕಾದಿತ್ತು,ರಾತ್ರಿ ವೇಳೆಯಲ್ಲಿ ದೇವಸ್ಥಾನದ ಒಳಗೆ ಗೆಜ್ಜೆ ಕಟ್ಟಿ ನೃತ್ಯ ಮಾಡುತ್ತಿರುವ ಶಬ್ದ ಕೇಳಿ ಬಂದಿತ್ತಂತೆ, ನಂತರ ಏನೋ ಶಬ್ದವಾಗುತ್ತಿದೆ ಎಂದು ದೇವಾಲಯದ ಸುತ್ತ ನೋಡಿದಾಗ ಏನು ಕಂಡುಬಂದಿಲ್ಲ,ಆದರೆ ಗೆಜ್ಜೆ ಕಟ್ಟಿಕೊಂಡು ನೃತ್ಯ ಮಾಡುವ ಶಬ್ದ ಮಾತ್ರ ಕೇಳುತ್ತಿತ್ತು, ನಂತರ ದೇವಸ್ಥಾನದ ಒಳಗಿನ ಕರೆಂಟ್( ಲೈಟ್ ) ಹಾಕಿದಾಗ ಶಬ್ದ ನಿಂತು ಹೋಯಿತು ಎನ್ನುತ್ತಾರೆ ಗ್ರಾಮಸ್ಥರು.

 

 

 

ಅಣ್ಣಪ್ಪ ಸ್ವಾಮಿಯ ಪವಾಡವನ್ನು ಕಣ್ತುಂಬಿಕೊಳ್ಳಲು ಬೇರೆ ಬೇರೆ ಊರುಗಳಿಂದ ಸಾವಿರಾರು ಜನ ಆಗಮಿಸುತ್ತಿದ್ದು, ಸ್ವಾಮಿಯು ದೇವಸ್ಥಾನದ ಬಾಗಿಲು ತೆಗೆಯಲು ಬಿಡದೆ ಬೆನ್ನು ಮಾಡಿ ಕುಂತಿರುವ ಮರ್ಮವೆನೆಂಬುದೇ ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದೆ.

Leave a Reply

Your email address will not be published. Required fields are marked *