ಕಂದಾಯ ಸಚಿವರ ತವರಲ್ಲಿ ಎರಡನೇ ದಿನಕ್ಕೆ ಕಾಲಿಟ್ಟ ದಯಾ ಮರಣ ಹೋರಾಟ

ತುಮಕೂರು ; ನಕಲಿ ದಾಖಲೆ ಸೃಷ್ಟಿಸಿ ಬಡ ರೈತರ ಜಮೀನು ಕಬಳಿಸಿರುವ ಕಂದಾಯ ಇಲಾಖೆ ಅಧಿಕಾರಿಗಳ ಅಮಾನತ್ತಿಗೆ ಒತ್ತಾಯಿಸಿ ಭೂ ಮಾಫಿಯಾದಿಂದ ಜಮೀನು ಕಳೆದುಕೊಂಡಿರುವ ಬಡ ಕುಟುಂಬ ದಯಾ ಮರಣ ಕೋರಿ ಹಮ್ಮಿಕೊಂಡಿರುವ ಉಪವಾಸ ಸತ್ಯಾಗ್ರಹ ಎರಡನೇ ದಿನಕ್ಕೆ ಕಾಲಿಟ್ಟಿದೆ.

 

 

ತುಮಕೂರು ತಾಲ್ಲೂಕು ಕೋರ ಹೋಬಳಿ ಹೊಟ್ಟೆಮಲ್ಲನಪಾಳ್ಯ ಗ್ರಾಮದಲ್ಲಿ ಭೂ ಮಾಫಿಯಾದಿಂದ ಬಡ ರೈತ ಕುಟುಂಬವೊಂದು ಭೂಮಿಯನ್ನೇ ಕಳೆದುಕೊಂಡಿದ್ದು ನ್ಯಾಯಕ್ಕಾಗಿ ಪ್ರತಿಭಟನೆ ಆರಂಭಿಸಿ ದಯಾಮರಣಕ್ಕೆ ಆಗ್ರಹಿಸಿ ಹಮ್ಮಿಕೊಂಡಿರುವ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದ್ದು ನ್ಯಾಯ ಸಿಗುವವರೆಗೂ ಜಾಗ ಬಿಟ್ಟು ಕದಲುವುದಿಲ್ಲ ಎಂದು ಬಿಗಿ ಪಟ್ಟು ಹಿಡಿದಿದೆ.

 

 

 

ಜಮೀನು ಕಬಳಿಸಿದ ಬೇನಾಮಿ ವ್ಯಕ್ತಿಗಳು……

ಮರಣ ಪ್ರಮಾಣ ಪತ್ರವನ್ನು ತಪ್ಪಾಗಿ ನಮೂದಿಸಿದ ಕಂದಾಯ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿತನದಿಂದ ದೊಡ್ಡಬಳ್ಳಾಪುರ ಮೂಲದ ಬೇನಾಮಿ ವ್ಯಕ್ತಿಗಳು ಸುಳ್ಳು ವಂಶ ವೃಕ್ಷ ಸೃಷ್ಟಿಸಿ ಹೊಟ್ಟೆ ಮಲ್ಲಯ್ಯನಪಾಳ್ಯದ ಸ.ನಂ.16/4 ರ ಜಮೀನು ಲಪಟಾಯಿಸಿದ್ದಾರೆ ಎಂದು ಜಮೀನಿನ ಮಾಲೀಕ ಗಂಗಣ್ಣ ಹಾಗೂ ಸುಕನ್ಯ ಆರೋಪಿಸಿದ್ದಾರೆ, ನಾವು ಈ ಜಮೀನಿನ ಅನುಭವದಲ್ಲಿದ್ದೇವೆ,ಬೇನಾಮಿ ವ್ಯಕ್ತಿಗಳು ನಕಲಿ ವಂಶ ವೃಕ್ಷ ಸೃಷ್ಟಿಸಿ ನಮಗೆ ಯಾವುದೇ ನೋಟೀಸ್ ನೀಡದೆ ನ್ಯಾಯಾಲಯದಲ್ಲಿ ಸುಳ್ಳು ದಾವೆ ಹೂಡಿ ಡಿಕ್ರಿ ಮಾಡಿಸಿಕೊಂಡು ಜಮೀನು ಕಬಳಿಸಲು ಬಂದಿದ್ದಾರೆ,ಕಂದಾಯ ಇಲಾಖೆ ಅಧಿಕಾರಿಗಳೂ ಸಹ 21 ಪಾರಂ ತಯಾರಿಸುವಾಗ ಸ್ತಳೀಯರ ಹೇಳಿಕೆ ಪಡೆದಿಲ್ಲ ,ನಮ್ಮ ಗಮನಕ್ಕೂ ತರದೆ ದಾಖಲೆ ಸೃಷ್ಟಿಸಿದ್ದಾರೆ ಎಂದು ಸುಕನ್ಯ ಆರೋಪಿಸಿದ್ದಾರೆ,ಕೋರ ಪೊಲೀಸ್ ಠಾಣೆಯಲ್ಲಿಯೂ ಸಹ ನಮಗೆ ನ್ಯಾಯ ಸಿಗುತಿಲ್ಲ ಅಲ್ಲಿರುವ ಕೆಲ ಅಧಿಕಾರಿಗಳು ಸಹ ನಮ್ಮ ಆಸ್ತಿ ಕಬಳಿಸುವವರ ಪರ ನಿಂತಿದ್ದಾರೆ ಎಂದು ಆರೋಪಿಸಿದ್ದಾರೆ.

 

ಕಂದಾಯ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿ…..

ಮರಣ ಪ್ರಮಾಣ ಪತ್ರ ತಿದ್ದುಪಡಿಮಾಡಲು ಸುಕನ್ಯ ಅವರನ್ನು ಕಂದಾಯ ಇಲಾಕೆ ಅಧಿಕಾರಿಗಳು 8 ತಿಂಗಳು ಕಚೇರಿಗೆ ಅಲೆಸಿದ್ದಾರೆ,ತಹಶೀಲ್ದಾರ್ ಆದೇಶ ಮಾಡಿರುವ ಪ್ರತಿಯನ್ನು ನಮೂದಿಸುವಾಗ ಮಾಡುವ ಪ್ರಮಾದದಿಂದ ಸಾಕಷ್ಟು ಅವಾಂತರ ಸೃಷ್ಟಿಸಿದೆ,ದೊಡ್ಡಬಳ್ಳಾಪುರ ಮೂಲದವರಿಗೆ ಇಲ್ಲಿನ ವಂಶವೃಕ್ಷ ಸೃಷ್ಟಿಸಲು ಅವಕಾಶವಿದೆಯೇ,ಈ ಮಾಪಿಯಾ ಹಿಂದೆ ಸ್ತಳೀಯ ಗ್ರಾಮಲೆಕ್ಕಿಗರು ಹಾಗೂ ಕಂದಾಯ ನಿರೀಕ್ಷಕರು,ತಹಶೀಲ್ದಾರರವರೆಗೂ ಉನ್ನತ ಅಧಿಕಾರಿಗಳ ಕೈವಾಡವಿದೆ ಎಂದು ಕುಟುಂಬ ಶಂಕಿಸಿದೆ.

 

 

ಕಂದಾಯ ಸಚಿವರ ತವರು ಜಿಲ್ಲೆಯಲ್ಲೇ ಈ ರೀತಿ ಅಕ್ರಮ ನಡೆದಿರುವುದು ತಾಲ್ಲೂಕು ಆಡಳಿತ ಹಾಗೂ ಜಿಲ್ಲಾಡಳಿತ ತಲೆ ತಗ್ಗಿಸುವಂತಾಗಿದೆ,ಸಮಸ್ಯೆ ಬಗೆಹರಿದು ಸಂಬಂದ ಪಟ್ಟ ಅಧಿಕಾರಿಗಳ ಮೇಲೆ ಶಿಸ್ತುಕ್ರಮ ಜರುಗಿಸುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಕುಟುಂಬ ಬಿಗಿ ಪಟ್ಟು ಹಿಡಿದಿದೆ.

 

 

ದೊಡ್ಡಬಳ್ಳಾಪುರ ಮೂಲದ ಬೇನಾಮಿ ವ್ಯಕ್ತಿಗಳು ಸುಳ್ಳು ವಂಶ ವೃಕ್ಷ ಸೃಷ್ಟಿಸಿ ಹೊಟ್ಟೆ ಮಲ್ಲಯ್ಯನಪಾಳ್ಯದ ಸ.ನಂ.16/4 ರ ಜಮೀನು ಲಪಟಾಯಿಸಿದ್ದಾರೆ ಎಂದು ಜಮೀನಿನ ಮಾಲೀಕ ಗಂಗಣ್ಣ ಹಾಗೂ ಸುಕನ್ಯ ಆರೋಪಿಸಿದ್ದಾರೆ, ನಾವು ಈ ಜಮೀನಿನ ಅನುಭವದಲ್ಲಿದ್ದೇವೆ,ಬೇನಾಮಿ ವ್ಯಕ್ತಿಗಳು ನಕಲಿ ವಂಶ ವೃಕ್ಷ ಸೃಷ್ಟಿಸಿ ನಮಗೆ ಯಾವುದೇ ನೋಟೀಸ್ ನೀಡದೆ ನ್ಯಾಯಾಲಯದಲ್ಲಿ ಸುಳ್ಳು ದಾವೆ ಹೂಡಿ ಡಿಕ್ರಿ ಮಾಡಿಸಿಕೊಂಡು ಜಮೀನು ಕಬಳಿಸಲು ಎಂದು ಆರೋಪಿಸಿದ್ದಾರೆ.

 

 

ಕಂದಾಯ ಇಲಾಖೆ ಅಧಿಕಾರಿಗಳು ಜಮೀನಿನ ಖಾತೆಯಾದ ಬಳಿಕ 21 ಪಾರಂ ಜಾರಿ ಮಾಡಿರುವ ಆರೋಪ ಕೇಳಿ ಬಂದಿದೆ, ಗ್ರಾಮ ಲೆಕ್ಕಿಗ ಹಾಗೂ ಕಂದಾಯ ನಿರೀಕ್ಷಕರ ಈ ಅಕ್ರಮ ಖಾತೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ,ಖಾತೆಯಾದ ಬಳಿಕ 21 ಪಾರಂ ಜಾರಿ ಮಾಡಿ ಬೇರೆ ಗ್ರಾಮದಲ್ಲಿ ಸಹಿ ಪಡೆದಿರುವ ಆರೋಪ ಕೇಳಿ ಬಂದಿದೆ,ಗ್ರಾಮ ಲೆಕ್ಕಿಗರು ಹಾಗೂ ಕಂದಾಯ ನಿರೀಕ್ಷಕರು ತಾವು ಬಚಾವ್ ಆಗಲು ಗ್ರಾಮ ಸಹಾಯಕನ್ನು ಬಲಿ ಕೊಡಲು ಮುಂದಾಗಿದ್ದಾರೆ ಎಂಬ ಆರೋಪಗಳೂ ಕೇಳಿ ಬರುತ್ತಿವೆ.

 

 

ತಹಶೀಲ್ದಾರ್ ಮಾತಿಗೂ ಬಗ್ಗದ ಪ್ರತಿಭಟನಾಕಾರರು…..

ಪ್ರತಿಭಟನಾ ಸ್ತಳಕ್ಕೆ ತೆರಳಿದ ತಹಶೀಲ್ದಾರ್ ರಾಜೇಶ್ವರಿ ಅವರು 2 ಗಂಟೆ ಕಾಲ ಮಾತುಕತೆ ನಡೆಸಿದರೂ ಪ್ರಯೋಜನವಾಗಿಲ್ಲ, ಅಕ್ರಮ ಖಾತೆ ಮಾಡಿರುವವರ ವಿರುದ್ದ ಕ್ರಮ ಜರುಗಿಸಿ,ಅಕ್ರಮ ಖಾತೆ ರದ್ದು ಮಾಡಿಕೊಡಿ,ಅಕ್ರಮ ಖಾತೆ ಮಾಡಿಸಿಕೊಂಡಿರುವವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಎಂದು ಒತ್ತಾಯ ಮಾಡಿದರು,ಇದು ಕೋರ್ಟ್ ಡಿಕ್ರಿಯಾಗಿದೆ ನ್ಯಾಯಾಲಯದ ಮೂಲಕವೇ ಈ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ತಹಶೀಲ್ದಾರ್ ಮನವರಿಕೆ ಮಾಡಿದರೂ ಪ್ರತಿಭಟನಾಕಾರರು ಜಗ್ಗದೆ ಸತ್ಯಾಗ್ರಹ ಮುಂದುವರೆಸಿ ಮಂಗಳವಾರ ರಾತ್ರಿಯಿಡೀ ಟೆಂಟ್ ನಲ್ಲಿ ಮಲಗಿ ವ್ಯವಸ್ತೆ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.
ಕಂದಾಯ ಸಚಿವರ ತವರು ಜಿಲ್ಲೆಯಲ್ಲೇ ಈ ರೀತಿ ಅಕ್ರಮ ನಡೆದಿರುವುದು ತಾಲ್ಲೂಕು ಆಡಳಿತ ಹಾಗೂ ಜಿಲ್ಲಾಡಳಿತ ತಲೆ ತಗ್ಗಿಸುವಂತಾಗಿದೆ,ಸಮಸ್ಯೆ ಬಗೆಹರಿದು ಸಂಬಂದ ಪಟ್ಟ ಅಧಿಕಾರಿಗಳ ಮೇಲೆ ಶಿಸ್ತುಕ್ರಮ ಜರುಗಿಸುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಕುಟುಂಬ ಬಿಗಿ ಪಟ್ಟು ಹಿಡಿದು ಪ್ರತಿಭಟನೆ ಮುಂದುವರೆಸಿದೆ.

Leave a Reply

Your email address will not be published. Required fields are marked *