ತುಮಕೂರು:ಹೇಮಾವತಿ ನಮ್ಮ ನೀರು ನಮ್ಮ ಹಕ್ಕು,ತುಮಕೂರು ಜಿಲ್ಲೆಗೆ ಈವರೆವಿಗೂ 24 ಟಿಎಂಸಿ ನೀರು ಹರಿದಿಲ್ಲ,ಆದರೆ ಮಾಗಡಿ ರಾಮನಗರಕ್ಕೆ ತೆಗೆದುಕೊಂಡು ಹೋಗಲು ಡಿ.ಕೆ.ಶಿವಕುಮಾರ್ ಸಂಚು ರೂಪಿಸಿ ಜಿಲ್ಲೆಯ ರೈತರಿಗೆ ವಂಚಿಸುತ್ತಿದ್ದಾರೆ,ನಮಗೆ ನೀರಿಗೆ ಭರವಿದೆ,ಹೇಮಾವತಿ ಕೆನಾಲ್ ಉದ್ಘಾಟನೆ ಆದ್ದರಿಂದ ಈವರೆವಿಗೂ ಗೋರೂರು ಡ್ಯಾಂನಿಂದ ೨೪ ಟಿಎಂಸಿ ನೀರು ತುಮಕೂರಿಗೆ ಯಾವತ್ತೂ ಹರಿದಿಲ್ಲ ಅಂತಹುದರಲ್ಲಿ ಡಿ.ಕೆ.ಶಿವಕುಮಾರ್ ರವರು ಮಾಗಡಿ,ರಾಮನಗರಕ್ಕೆ ಪೈಪ್ ಲೈನ್ ಮುಖಾಂತರ ನೀರು ತೆಗೆದುಕೊಂಡು ಹೋಗುತ್ತಿದ್ದಾರೆ ಸುಮಾರು ೧ಸಾವಿರ ಕೋಟಿ ವೆಚ್ಚದಲ್ಲಿ ಈ ಕಾಮಗಾರಿ ನಡೆಯುತ್ತಿದೆ,ಇವತ್ತಿನ ತನಕ ರೈತನ ಜಮೀನು ಸರ್ಕಾರದ ವಶವಾಗಿಲ್ಲ ೪/೧ ಆಗಲಿ ೬/೧ಆಗಲೀ ಆಗಿಲ್ಲ ಇವರು ಇದೇ ರೀತಿ ರೈತರಿಗೆ ಜಿಲ್ಲೆಯ ಜನರಿಗೆ ವಂಚಿಸಿದರೆ ಲಕ್ಷಾಂತರ ಜನ ಸಾರ್ವಜನಿಕರು,ರೈತಪರ ಹೋರಾಟಗಾರರು ಸೇರಿದಂತೆ ರೈತರನ್ನು ಒಗ್ಗೂಡಿಸಿ ಬೃಹತ್ ಮಟ್ಟದಲ್ಲಿ ಹೋರಾಟ ಮಾಡಲು ರೂಪುರೇಷೆ ರೂಪಿಸಲಾಗುವುದು ಎಂದು ತಿಪಟೂರು ಜೆಡಿಎಸ್ ಮುಖಂಡ ಕೆ.ಟಿ.ಶಾಂತಕುಮಾರ್ ತಿಳಿಸಿದರು.
ಅವರು ಇಂದು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಸಿರಾ ಜೆಡಿಎಸ್ ಮುಖಂಡ ಉಗ್ರೇಶ್ ಮಾತನಾಡುತ್ತಾ ಜಿಲ್ಲೆಯ ಜೀವನಾಡಿ ಹೇಮಾವತಿ ಅದನ್ನು ನಮ್ಮ ಜಿಲ್ಲೆ ಬಿಟ್ಟು ಬೇರೆ ಜಿಲ್ಲೆಗೆ ಕೊಂಡೊಯ್ದರೆ ಸಿರಾ ರೈತರು,ಪ್ರಗತಿಪರ ಹೋರಾಟಗಾರರು ಸೇರಿದಂತೆ ಪಕ್ಷಾತೀತವಾಗಿ ಎಲ್ಲರನ್ನೂ ಜೊತೆಗೆ ಕರೆದುಕೊಂಡು ಬಂದು ಕಾಮಗಾರಿ ನಡೆವ ಸ್ಥಳದಲ್ಲಿ ಪ್ರತಿಭಟಿಸುವುದಾಗಿ ಸರ್ಕಾರಕ್ಕೆ ಎಚ್ಚರಿಗೆ ನೀಡಿದರು.

ತುರುವೇಕೆರೆ ಶಾಸಕರಾದ ಎಂ.ಟಿ.ಕೃಷ್ಣಪ್ಪನವರು ಮಾತನಾಡುತ್ತಾ ಉಪಮುಖ್ಯಮಂತ್ರಿ ಡಾ||ಜಿ.ಪರಮೇಶ್ವರ್ ರವರು ಮುಖ್ಯಮಂತ್ರಿಗಳ ಆಜ್ಞೆಯಂತೆ ಮಾಡನಾಡುತ್ತಿರುವುದು ಜಿಲ್ಲೆಗೆ ಶೋಭೆ ತರುವಂತಹುದಲ್ಲ,ಈ ಹಿಂದೆ ಇವರೇ ಹೋರಾಟ ಮಾಡಿ ಹೇಮಾವತಿ ಲಿಂಕ್ ಕೆನಾಲ್ ವಿರೋಧಿಸಿ ಹೋರಾಟಕ್ಕೆ ಬೆಂಬಲ ಸೂಚಿಸಿ ಅಂದು ಜಿಲ್ಲಾ ಮಂತ್ರಿಯಾಗಿ ನಮ್ಮ ರೈತರಲ್ಲಿ ಆತ್ಮವಿಶ್ವಾಸ ತುಂಬಿದ್ದರು,ಆದರೆ ಇಂದು ಇವರೇ ಕಾಮಗಾರಿ ಮುಗಿಸಿ ರಾಮನಗರ,ಮಾಗಡಿಗೆ ಹೇಮಾವತಿ ನೀರು ಕೊಡುತ್ತೇವೆ ಅನ್ನುತ್ತಿರುವುದು ನಮ್ಮ ದುರ್ಧೈವ,ಪರಮೇಶ್ವರ್ ರವರು ಜಿಲ್ಲೆಗೆ ರೈತರ ಪರ ಮತನಾಡಬೇಕು,ಜಿಲ್ಲೆಗೆ ಕುಡಿಯುವ ನೀರನ್ನು ಬೇರೆ ಜಿಲ್ಲೆಗೆ ಹರಿಯಲು ಬಿಡಬಾರದು 24 ಟಿಎಂಸಿ ನೀರು ನಮ್ಮ ಹಕ್ಕು,ಕುಣಿಗಲ್ ಕೆರೆಗೆ ಹೇಮಾವತಿ ನೀರು ಬಿಡಲು ಯಾರದ್ದೂ ತಕರಾರಿಲ್ಲ ಆದರೆ ಬೇರೆ ಜಿಲ್ಲೆಗೆ ತೆಗೆದುಕೊಂಡು ಹೋಗಲು ಎಲ್ಲ ರೈತರ ವಿರೋಧವಿದೆ,ಈ ಹಿಂದೆ ತಾಂತ್ರಿಕ ಸಮಿತಿ ಸಹ ಮಾಡಿದ್ದರು ಅವರೂ ಸಹ ನಮ್ಮ ಜಿಲ್ಲೆಯ ರೈತರ ವಿರುದ್ಧವಾಗಿ ತಮ್ಮ ವರದಿ ನೀಡಿ ಸರ್ಕಾರದ ಅಧಿಕಾರಿಗಳು,ರಾಜಕಾರಣಿಗಳಿಗೆ ದುಡ್ಡುಹೊಡೆಯಲು ದಾರಿ ಮಾಡಿಕೊಟ್ಟಿದ್ದಾರೆ,ರೈತರಿಗೆ ಇದು ಮರಣಶಾಸನವಾಗಲಿದೆ,ಕುಣಿಗಲ್ ಶಾಸಕ ರಂಗನಾಥ್ ಅಂದು ನನ್ನ ಪ್ರಾಣ ಕೊಡುತ್ತೇನೆ ರಕ್ತ ಕೊಡುತ್ತೇನೆ ಅಂದಿದ್ದರು ನಿನ್ನ ಪ್ರಾಣ,ರಕ್ತ ಬೇಡಿ ಕಾಮಗಾರಿ ನಿಲ್ಲಿಸಿ ರಂಗನಾಥ್ ರವರೇ, ಕಲ್ಪತರು ನಾಡಿನ ತೆಂಗು ಒಣಗುತ್ತಿದೆ,ಗುಬ್ಬಿ ಶಾಸಕ ವಾಸು ಸಹ ವಿರೋಧಿಸುತ್ತಿದ್ದಾರೆ,ಕಣ್ಣೀರು ಸುರಿಸಿದರೆ ಸಾಲದು ಮುಖ್ಯಮಂತ್ರಿಗಳಿಗೆ ವಾಸು ಮನವೊಲಿಸಿ ಕಾಮಗಾರಿ ನಿಲ್ಲಿಸಿ ಎಂದು ಮನವಿ ಮಾಡಿದರು,ಒಂದು ವೇಳೆ ಸರ್ಕಾರ ಇದನ್ನು ಮುಂದುವರೆಸಿದರೆ ಲಕ್ಷ ಲಕ್ಷ ರೈತರೊಂದಿಗೆ ಧರಣಿ ನಡೆಸಲಿದ್ದೇವೆ,ಹಠಮಾರಿ ಧೋರಣೆ ಸರಿಯಲ್ಲ,ಗೋಲೀಬಾರ್ ಮಾಡಿದರೂ ಸರಿಯೇ ಇದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ಜಿಲ್ಲ ಬಿಜೆಪಿ ಅಧ್ಯಕ್ಷ ಹೆಬ್ಬಾಕ ರವಿಶಂಕರ್ ಮಾತನಾಡಿ ತುಮಕೂರು ನಗರಕ್ಕೆ ಹೇಮಾವತಿಯೇ ಮುಖ್ಯ ೫ ಲಕ್ಷ ಜನರಿಗೆ ಕುಡಿಯುವ ನೀರಿಗಾಗಿ ನಾವುಗಳು ಹೇಮಾವತಿ ಅವಲಂಬಿಸಿದ್ದೇವೆ,ಒಂದು ವೇಳೆ ಹೇಮಾವತಿ ಲಿಂಕ್ ಕೆನಾಲ್ ಮಾಡಿದರೆ ತುಮಕೂರು ನಗರದ ಜನ ಗುಳೆ ಹೋಗುವ ಪರಿಸ್ಥಿತಿ ಬರುತ್ತದೆ,ಜೊತೆಗೆ ಜನ-ಜಾನುವಾರುಗಳು,ರೈತರ ಪರಿಸ್ಥಿತಿ ಹೇಳತೀರದು,ಇದು ಪೈಪ್ ಲೈನ್ ಮಾಡಿ ದುಡ್ಡುಹೊಡೆಯುವ ಪ್ಲಾನ್ ತಕ್ಷಣವೇ ಸರ್ಕಾರ ತನ್ನ ಹಠಮಾರಿ ಧೋರಣೆಯಿಂದ ಹಿಂದೆ ಸರಿದು ಜಿಲ್ಲೆಯ ರೈತರನ್ನು ಉಳಿಸಬೇಕು,ಉಪಮುಖ್ಯಮಂತ್ರಿಗಳು ಸಹ ಜಿಲ್ಲೆಯ ರೈತರ ಧ್ವನಿಯಾಗಬೇಕೆಂದು ಮನವಿ ಮಾಡಿದರು.
