
ತುಮಕೂರು: ರಾಜ್ಯಾದ್ಯಂತ ಇಂದು ಪ್ರಕಟಗೊಂಡ ಹತ್ತನೇ ತರಗತಿ ಫಲಿತಾಂಶದಲ್ಲಿ ನಗರದ ಏಕೇಶ್ ಪತ್ರಿಕೆಯ ವರದಿಗಾರರ ಶಿವಕುಮಾರ್ ಟಿ.ಜಿ ಅವರ ಪುತ್ರಿ ಕುಸುಮ 625ಕ್ಕೆ 572 ಅಂಕಗಳನ್ನು ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ನಗರದ ಶ್ರೀ ಸಿದ್ದಗಂಗಾ ಎಲಿಮೆಂಟರಿ ಸಿಲ್ವರ್ ಜ್ಯುಬಿಲಿ ಶಾಲೆಯಲ್ಲಿ ಹತ್ತನೇ ತರಗತಿಯನ್ನು ಇಂಗ್ಲಿಷ್ ಮಾಧ್ಯಮದಲ್ಲಿ ವ್ಯಾಸಾಂಗ ಮಾಡಿದ ಕುಸುಮ ಅವರು, ಕನ್ನಡದಲ್ಲಿ 125ಕ್ಕೆ 124, ಇಂಗ್ಲಿಷ್ ನಲ್ಲಿ 94, ಸಂಸ್ಕೃತದಲ್ಲಿ 100, ಗಣಿತದಲ್ಲಿ 85, ವಿಜ್ಞಾನದಲ್ಲಿ 92, ಸಮಾಜ ವಿಜ್ಞಾನದಲ್ಲಿ 77 ಅಂಕಗಳನ್ನು ಪಡೆದಿದ್ದಾರೆ, ಆಕೆಯ ಪೋಷಕರಿಗೆ ಮತ್ತು ಕುಟುಂಬ ವರ್ಗಕ್ಕೆ ಕೀರ್ತಿಯನ್ನು ತಂದುಕೊಟ್ಟಿರುತ್ತಾಳೆ.
