ಜಗತ್ತಿನಲ್ಲಿ ಬೆಲೆಕಟ್ಟಲಾಗದ ವಸ್ತು ತಾಯಿ,ವಿಶ್ವದ ಶ್ರೇಷ್ಠ ವ್ಯಕ್ತಿ ತಾಯಿ-ನಟರಾಜಶೆಟ್ಟಿ

ತುಮಕೂರು:ತಂದೆ-ತಾಯಿ ವಿಶ್ವದ ಶ್ರೇಷ್ಠ ವಸ್ತುಗಳು,ತಾಯಿಗಿಂತ ಬಂಧುವಿಲ್ಲ,ಉಪ್ಪಿಗಿಂತ ರುಚಿಯಿಲ್ಲ,ತಾಯಿಗೆ ಯಾರೂ ಸಹ ಸಮಾನರಲ್ಲ,ಅಂತಹ ತಾಯಂದಿರನ್ನು ನೆನಪಿಸಿಕೊಳ್ಳುವ ಇಂತಹ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು,ತಾಯಿ ಅಂದರೆ ತ್ಯಾಗ,ಹತ್ತು ಜನ ಮಕ್ಕಳನ್ನು ಒಬ್ಬ ತಾಯಿ ಕೂಲಿ ಮಾಡಿ ಭಿಕ್ಷೆ ಬೇಡಿ ಸಾಕುತ್ತಾಳೆ,ಸಲಹುತ್ತಾಳೆ ಆದರೆ ಅದೇ ಹತ್ತು ಮಕ್ಕಳು ಸೇರಿ ಒಬ್ಬ ತಾಯಿಯನ್ನು ಸಾಕದೇ ಇರುವುದು ಇಂದಿನ ದುರಾದೃಷ್ಠಕರ,ಮಕ್ಕಳು ದಯಮಾಡಿ ಎಲ್ಲ ತಾಯಂದಿರನ್ನು ಬೀದಿಗೆ ಬಿಡದೆ ವಯಸ್ಸಾದ ಕಾಲದಲ್ಲಿ ಸಾಕಿ ಆಕೆಯ ಋಣವನ್ನು ತೀರಿಸಿ ಎಂದು ಸಂಕಲ್ಪ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಘದ ಗೌರವಾಧ್ಯಕ್ಷರಾದ ನಟರಾಜಶೆಟ್ಟಿರವರು ಹೇಳಿದರು.
ಅವರು ಇಂದು ನಗರದ 31ನೇ ವಾರ್ಡ್ನ ಜಯನಗರ ಪಶ್ಚಿಮಬಡಾವಣೆಯಲ್ಲಿರುವ ಬನಶಂಕರಿ ದೇವಾಲಯದ ಆವರಣದಲ್ಲಿ ನಿರ್ಭಯ ಜಾಗೃತಿ ವೇದಿಕೆ ಮತ್ತು ಸಂಕಲ್ಪ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ ತಾಯಂದಿರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಮತನಾಡಿದ ಶ್ರೀಮತಿ ಸುನಂದಮ್ಮನವರು ಈ ಜಗತ್ತಿನಲ್ಲಿ ಸೃಷ್ಟಿಸುವ ಶಕ್ತಿ ಇರುವುದು ಭೂಮಿ ಮತ್ತು ತಾಯಿಗೆ ಮಾತ್ರ,ತಾಯಿಯನ್ನು ಪ್ರತಿಕ್ಷಣ ಆರಾಧಿಸಬೇಕು,ತಾಯಿಯೇ ಎಲ್ಲರಿಗೂ ಮೊದಲ ಗುರು ಆಕೆ ಹೇಳಿಕೊಟ್ಟ ಮಾರ್ಗ,ಸಂಸ್ಕಾರದಿಂದ ಮಕ್ಕಳು ಉತ್ತಮ ಮಾರ್ಗದರ್ಶನದಲ್ಲಿ ನಡೆದಾಗ ಜೀವನ ಸುಂದರ ಎಂದು ತಿಳಿಸಿದರು.
ನಿರ್ಭಯ ಜಾಗೃತಿ ವೇದಿಕೆ ಅಧ್ಯಕ್ಷರು ಮತ್ತು ಸಂಕಲ್ಪ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಘದ ಕಾರ್ಯದರ್ಶಿಗಳಾದ ಶ್ರೀಮತಿ ಗೀತಾ ನಾಗೇಶ್ ರವರು ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ ನಿರ್ಭಯ ಜಾಗೃತಿ ವೇದಿಕೆಯಿಂದ ಹೆಣ್ಣುಮಕ್ಕಳಿಗೆ ಅವರ ಕಷ್ಟಗಳನ್ನು ಆಲಿಸಿ ಅವರಿಗೆ ಧೈರ್ಯವನ್ನು ತುಂಬುವ ಕೆಲಸವನ್ನು ಮಾಡುತ್ತಿದ್ದೇವೆ,ಸಂಕಲ್ಪ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಘದಿಂದ ಸಮಾಜದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ,ಉದ್ಯಾನವನಗಳ ಸ್ವಚ್ಛತೆ,ಕ್ಯಾನ್ಸರ್ ತಪಾಸಣಾ ಶಿಬಿರಿ ಹೀಗೆ ಹತ್ತು ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದೇವೆ ಎಲ್ಲರೂ ನಮ್ಮ ಸಂಘವನ್ನು ಉಪಯೋಗಿಸಿಕೊಳ್ಳಬೇಕು,ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕಾಗಿ ನಮ್ಮೊಂದಿಗೆ ಕೈಜೋಡಿಸಬೇಕೆಂದು ಮನವಿ ಮಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ವೈಷ್ಣವ ಸಭಾದ ಅಧ್ಯಕ್ಷರಾದ ಮೋಹನ್ ರವರು ಮಾತನಾಡುತ್ತಾ ತಾಯಿ ಅಂದರೆ ಕ್ಷಮಯಾಧರಿತ್ರಿ,ಎಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡಿದಾಗ ಸಮಾಜ ಸುಂದರವಾಗಿರುತ್ತದೆ,ತುಮಕೂರು ನಗರದಲ್ಲಿ ಹಿರಿಯ ನಾಗರೀಕರಿಗೆ ಒಂದು ಆಶ್ರಮ ಮಾಡಲು ಸಂಕಲ್ಪ ಮಾಡಿದ್ದೇವೆ,ಮಕ್ಕಳು ದೂರದ ದೇಶಗಳಿಗೆ ಕೆಲಸಕ್ಕಾಗಿ ಹೋಗುತ್ತಿದ್ದಾರೆ,ಅವರ ಪೋಷಕರನ್ನು ಒಬ್ಬಂಟಿಯಾಗಿ ಇಲ್ಲಿಯೇ ಬಿಟ್ಟು ಹೋಗುತ್ತಿರುವುದು ದುರದೃಷ್ಟಕರ,ಎಲ್ಲ ಮಕ್ಕಳು ಪೋಷಕರನ್ನು ನೋಡಿಕೊಳ್ಳಿ ಎಂದು ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಕಲ್ಪ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಘದ ಅಧ್ಯಕ್ಷರಾದ ಡಿ.ಎಸ್.ರಮೇಶ್ ರವರು ತಾಯಿಗೆ ಬೆಲೆಕೊಡದವರು ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಲು ಸಾಧ್ಯವಿಲ್ಲ,ಜಗತ್ತಿನಲ್ಲಿ ಯಾವ ವಸ್ತುಗೆ ಬೇಕಾದರೂ ಬೆಲೆ ಕಟ್ಟಬಹುದು ಆದರೆ ತಾಯಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ,ವೃದ್ಧ ತಂದೆ-ತಾಯಿಗಳನ್ನು ಚೆನ್ನಾಗಿ ನೋಡಿಕೊಳ್ಳಿ ಬದುಕು ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಶ್ರೀಮತಿ ನಂದಿನಿ,ಶ್ರೀಮತಿಚಂದನ,ಶ್ರೀಮತಿ ಜ್ಯೋತಿಆಚಾರ್ಯ,ಲತಾನಾರಾಯಣ್ ಇತರರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ವೃದ್ಧ ತಾಯಂದಿರನ್ನು ಸಂಘದಿಂದ ಸನ್ಮಾನಿಸಿ ಗೌರವಿಸಲಾಯಿತು.ಶ್ರೀಮತಿ ಲತಾನಾರಾಯಣ್ ನಿರೂಪಿಸಿದರು,ಚೇತನ್ ಸ್ವಾಗತಿಸಿದರು.ರುದ್ರಮೂರ್ತಿ ಎಲೆರಾಂಪುರ ತಂಡದವರು ತಾಯಿಯ ಬಗ್ಗೆ ವಿಶೇಷ ಹಾಡುಗಳನ್ನು ಪ್ರಸ್ತುತಪಡಿಸಿದರು.

Leave a Reply

Your email address will not be published. Required fields are marked *