ಅಕ್ರಮ ಖಾತೆ ವರ್ಗಾವಣೆ ಗ್ರಾಮಲೆಕ್ಕಿಗ ಸುನಿಲ್ ಕುಮಾರ್ ಗೆ ನೀರುಕುಡಿದಷ್ಟು ಸಲೀಸು…..!?

ತುಮಕೂರು : ಕಂದಾಯ ಸಚಿವರ ತವರು ಕ್ಷೇತ್ರದಲ್ಲಿ ಭೂ ಅಕ್ರಮಗಳು ಬಗೆದಷ್ಟು ಬಯಲಾಗುತ್ತಿವೆ,ಹತ್ತಾರು ವರ್ಷಗಳಿಂದ ಕೋರ ನಾಡಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆಲ ಗ್ರಾಮಲೆಕ್ಕಿಗರು ನಡೆಸಿರುವ ಭೂ ಅಕ್ರಮಗಳಿಂದ ನೊಂದ ರೈತರು ನ್ಯಾಯಾಲಯಗಳಿಗೆ ಅಲೆಯುವ ಸ್ತಿತಿ ನಿರ್ಮಾಣವಾಗಿದೆ.

 

ಕೋರ ಹೋಬಳಿ ಹೊಟ್ಟೆಮಲ್ಲನಪಾಳ್ಯ ಗ್ರಾಮದಲ್ಲಿ ನಡೆದಿರುವ ಭೂ ಅಕ್ರಮ ಬೆಳಕಿಗೆ ಬಂದಿದ್ದೇ ಸದರಿ ವ್ಯಾಪ್ತಿಯ ಗ್ರಾಮಲೆಕ್ಕಿಗ ಬೇರೆ ಬೇರೆ ವೃತ್ತಗಳಲ್ಲಿ ಕರ್ತವ್ಯ ನಿರ್ವಹಿಸುವಾಗ ನಡೆದಿರುವ ಭೂ ಅಕ್ರಮಗಳು,ಅಕ್ರಮ ಖಾತೆ ವರ್ಗಾವಣೆ,ತಿದ್ದುಪಡಿ ಲೋಪ,ಸೇರಿದಂತೆ ಸಾಕಷ್ಟು ಅಕ್ರಮಗಳು ಬೆಳಕಿಗೆ ಬರುತ್ತಿದ್ದು ಇದರಿಂದ ನೊಂದ ರೈತರು ಹಿಡಿಶಾಪ ಹಾಕುತ್ತಿದ್ದಾರೆ.

18 ವರ್ಷದಿಂದ ಕೋರಾ ನಾಡ ಕಚೇರಿಯಲ್ಲೇ ಠಿಕಾಣಿ……

ಹಾಲಿ ದೇವಲಾಪುರ ವೃತ್ತದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುನಿಲ್ ಕುಮಾರ್ 16-17 ವರ್ಷಗಳಿಂದ ಕೋರ ನಾಡಕಚೇರಿ ವ್ಯಾಪ್ತಿಯಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ, ಬ್ರಹ್ಮಸಂದ್ರ, ಕೆಂಪನದೊಡ್ಡೇರಿ, ಸಿ.ಟಿ.ಕೆರೆ, ಹಿರೇಗುಂಡಗಲ್, ದೇವಲಾಪುರ ಗ್ರಾಮವೃತ್ತಗಳಲ್ಲೇ ಗಿರಕಿಹೊಡೆಯುತ್ತಿದ್ದು,ಈ ನಾಡಕಚೇರಿ ಬಿಟ್ಟು ಬೇರೆ ಕಡೆ ವರ್ಗಾವಣೆಯೇ ಆಗಿಲ್ಲ,ಇವರ ಅಕ್ರಮಗಳ ವಿರುದ್ದ ಯಾರಾದರೂ ದೂರು ನೀಡಿದರೂ ಸಹ ಅವರನ್ನು ಸಂಪರ್ಕಿಸಿ ನನ್ನಿಂದ ತಪ್ಪಾಗಿದೆ ಸರಿಪಡಿಸಿಕೊಡುತ್ತೇನೆ ಎಂದು ಕ್ಷಮಾಪಣೆ ಪತ್ರ ಬರೆದುಕೊಟ್ಟು ಜಾರಿಕೊಂಡಿರುವ ಪ್ರಕರಣಗಳೂ ಸಾಕಷ್ಟಿವೆ ಎಂಬ ಮಾಹಿತಿಯೂ ಸಹ ಹೋಬಳಿ ವ್ಯಾಪ್ತಿಯ ರೈತರ ಬಾಯಲ್ಲಿ ಹರಿದಾಡುತ್ತಿವೆ.

 

 

 

 

2017 ರಲ್ಲೇ ಅಕ್ರಮ ಖಾತೆ ವರ್ಗಾಯಿಸಿದ ಗ್ರಾಮ ಲೆಕ್ಕಿಗ ಸುನಿಲ್ ಕುಮಾರ್ ವಿರುದ್ದ ಜಿಲ್ಲಾಧಿಕಾರಿಗೆ ದೂರು………

ಸದರಿ ಗ್ರಾಮ ಲೆಕ್ಕಿಗ ಸಿ.ಟಿ.ಕೆರೆ ವೃತ್ತದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಕಲ್ಸಟ್ ಕುಂಟೆ ಗ್ರಾಮದ ಸ.ನಂ.36/1 ರ ಜಮೀನು ಆಂಜಿನಪ್ಪ,ಹನುಮಂತಯ್ಯ,ಬೀಮಯ್ಯ ಬಿನ್ ಪುಟ್ಟನಾಯ್ಕ ಹೆಸರಿಗೆ ಜಂಟಿ ಖಾತೆಯಲ್ಲಿದ್ದ ಜಮೀನನ್ನು ಯಾವುದೇ ನೋಟೀಸ್ ನೀಡದೆ,ಮಾಹಿತಿ ನೀಡದೆ ಅಕ್ರಮವಾಗಿ ಕರ್ತವ್ಯ ವರ್ಗಾವಣೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ ಸದರಿ ಜಮೀನಿನಲ್ಲಿ ಲೇಟ್ ಅಂಜೀನಪ್ಪನವರ ಹೆಂಡತಿ ಪುಟ್ಟಮ್ಮನಿಗೆ 1-21 ಎಕರೆ/ಗುಂಟೆ ಜಮೀನಿನಲ್ಲಿ ಅರ್ಧ ಭಾಗಾಂಶ ಬರಬೇಕಾಗಿರುತ್ತದೆ ಆದರೆ ಕಾನೂನು ಬಾಹಿರವಾಗಿ ಬಿ.ಜೆ ಗುರುಪ್ರಸದ್ ಬಿನ್ ಗೋಪಾಲಯ್ಯ ರವರ ಹೆಸರಿಗೆ 1-21 ಎಕರೆ/ ಗುಂಟೆ ಜಮೀನನ್ನು ಖಾತೆ ಮಾಡಿರುತ್ತಾರೆ. ಇದರಲ್ಲಿ 4-23 ಏಕರೆ ಜಮೀನಿದೆ,ಸದರಿ ಜಮೀನಿನಲ್ಲಿ ಸಮನಾಗಿ ಮೇಲ್ಕಂಡ ಪುಟ್ಟಮ್ಮ ಮತ್ತು ಭೀಮನಾಯಕನ ಮಕ್ಕಳು 2-11 ಎಕರೆ , 2-11 ಎಕರೆ ಜಮೀನನ್ನು ಹಂಚಿಕೊಳ್ಳಬೇಕಾಗಿತ್ತು. ಕಾನೂನು ಬಾಹಿರವಾಹಿರವಾಗಿ ಖಾತೆ ಮತ್ತು ಪಹಣೆ ಮಾಡಿರುವ ಗ್ರಾಮ ಲೆಕ್ಕಿಗರಾದ ಸುನೀಲ್ ಅವರನ್ನು ತಕ್ಷಣ ಅಮಾನತ್ತಿನಲ್ಲಿಡಬೇಕು ಸುಮಾರು 10 ವರ್ಷಗಳಿಂದ ಒಂದೇ ಗ್ರಾಮದಲ್ಲಿ ಬೀಡುಬಿಟ್ಟಿದ್ದು ಪವತಿ ವಾರಸ್ಸು ಖಾತೆ, ಮುಂತಾದ ಸಾರ್ವಜನಿಕರ ಕೆಲಸಗಳಿಗೆ ಜನಗಳಿಂದ ಹಣವನ್ನು ಸುಲಿಗೆ ಮಾಡುತ್ತಿರುತ್ತಾರೆ ಆದ್ದರಿಂದ ಸದರಿಯವರನ್ನು ಬೇರೆ ಕಡೆಗೆ ವರ್ಗಾವಣೆ ಮಾಡಬೇಕೆಂದು ಸದರಿ ಜಮೀನಿನ ವಾರಸುದಾರ ವಿರೂಪಾಕ್ಷಯ್ಯ 2017 ರಲ್ಲಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿ ಕ್ರಮಕ್ಕೆ ಒತ್ತಾಯಿಸಿದ್ದರು.

 

 

 

 

ತಪ್ಪು ಮಾಡಿ ಕ್ಷಮೆ ಕೇಳಿ ಜಾರಿಕೊಳ್ಳುತ್ತಿದ್ದ ಸುನಿಲ್ ಕುಮಾರ್…….

ಕಲ್ಸಟ್ ಕುಂಟೆ ಗ್ರಾಮದ ಸ.ನಂ.36/1 ರ ಜಮೀನನ್ನು ಅಕ್ರಮವಾಗಿ ಖಾತೆ ವರ್ಗಾವಣೆ ಮಾಡಿದನ್ನು ಪ್ರಶ್ನಿಸಿ ಸದರಿ ಜಮೀನಿನ ವಾರಸುದಾರ ಜಿಲ್ಲಾಧಿಕಾರಿಗಳಿಗೆ 2017 ರಲ್ಲೇ ದೂರು ನೀಡಿ ಕ್ರಮಕ್ಕೆ ಒತ್ತಾಯಿಸಿದ್ದರು,ಆಗ ಸುನಿಲ್ ಕುಮಾರ್ ತನ್ನಿಂದಾಗಿರುವ ತಪ್ಪಿಗೆ ಕ್ಷಮಾಪಣೆ ಕೇಳಿ ನಾನೇ ವಕೀಲರನ್ನು ನೇಮಿಸಿ ಖಾತೆ ಬದಲಾಯಿಸಿಕೊಡುತ್ತೇನೆ ಎಂದು ಒಪ್ಪಿಕೊಂಡಿದ್ದರು,ಎಂಟು ವರ್ಷಗಳಾದರೂ ಸಹ ಈ ಬಗ್ಗೆ ಚಕಾರ ಎತ್ತುತ್ತಿಲ್ಲ,ಇದರಿಂದ ಬಹಳ ನೊಂದಿದ್ದೇನೆ ನಾನು ಸಹ ಮತ್ತೊಮ್ಮೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿ ರೈತರಿಗೆ ನಂಬಿಸಿ ಮೋಸಮಾಡುವ ಇಂತಹ ಅಧಿಕಾರಿಗಳನ್ನು ಕಡ್ಡಾಯ ನಿವೃತ್ತಿ ಮಾಡಿ ಮನೆಗೆ ಕಳುಹಿಸುವಂತೆ ಒತ್ತಾಯಿಸುವುದಾಗಿ ವಿರೂಪಾಕ್ಷಯ್ಯ ಹೇಳಿದ್ದಾರೆ.

 

 

 

 

ಹೊಟ್ಟೆಮಲ್ಲನಪಾಳ್ಯ ಪ್ರಕರಣದಿಂದ ಗ್ರಾಮಲೆಕ್ಕಿಗ ಸುನಿಲ್ ಕುಮಾರ್ ಹಗರಣಗಳು ಒಂದೊಂದೇ ಬೀದಿಗೆ ಬರುತ್ತಿವೆ,ಇಂತಹ ಗ್ರಾಮಲೆಕ್ಕಿಗರಿಂದ ಬಡ ರೈತರಿಗೆ ನ್ಯಾಯ ದೊರಕಿಸಲು ಸಾಧ್ಯವೇ? ಇಂತಹ ಗ್ರಾಮಲೆಕ್ಕಿಗರಿಗೆ ಯಾವುದೇ ಪದೋನ್ನತಿ ನೀಡದೆ ಕಡ್ಡಾಯ ನಿವೃತ್ತಿಗೊಳಿಸಿ ಮನೆಗೆ ಕಳಿಸಬೇಕೆಂದು ಪ್ರಜ್ಙಾವಂತ ರೈತರ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *