ತುಮಕೂರು : ತುಮಕೂರು ತಾಲ್ಲೂಕು ಗಂಗನಾಲ ಗ್ರಾಮದಲ್ಲಿ ಕಾರ್ಖಾನೆಗಳ ಕಲುಶಿತ ಆಯಿಲ್ ಗುಂಡಿ ತೋಡಿ ಭೂಮಿಗೆ ಸುರಿಯುತ್ತಿದ್ದು ಕಾರ್ಖಾನೆ ವಿಷ ಭೂಮಿಯ ಒಡಲು ಸೇರಿ ಸುತ್ತಮುತ್ತಲ ಪರಿಸರ ಕಲುಶಿತವಾಗುತ್ತಿದ್ದು ಜಿಲ್ಲಾಡಳಿತ ಹಾಗೂ ಕಂದಾಯ ಇಲಾಖೆ ನಿದ್ದೆಗೆ ಜಾರಿದೆ ಕಳೆದ ಹಲವಾರು ದಿನಗಳಿಂದ ಸ್ತಳೀಯ ಪ್ರಭಾವಿಗಳು ವಸಂತ ನರಸಾಪುರ ಕೈಗಾರಿಕಾ ಪ್ರದೇಶಗಳಿಂದ ಲೋಡ್ ಗಟ್ಟಲೆ ವೇಸ್ಟ್ ಆಯಿಲ್ ತರಿಸಿ ಸರ್ಕಾರಿ ಒಡೆತನದ ಖರಾಬು ಜಮೀನಿನಲ್ಲಿ ಮುಚ್ಚಿ ಜೇಬುಭರ್ತಿ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿದೆ.

ಮಳೆಗಾಲದಲ್ಲಿ ಈ ಕಲುಷಿತ ಕೆಮಿಕಲ್ ನೀರಿನೊಂದಿಗೆ ಮಿಶ್ರವಾಗಿ ಕೆರೆ ಕಟ್ಟೆ ಸೇರಿದರೆ ದೊಡ್ಡ ಅನಾಹುತವೇ ಸಂಭವಿಸುತ್ತದೆ ಎಂದು ಸ್ತಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಸ್ತಳೀಯ ಗ್ರಾಮಪಂಚಾಯ್ತಿಯಾಗಲೀ ಅಥವಾ ಗ್ರಾಮಲೆಕ್ಕಿಗರು,ಕಂದಾಯ ನಿರೀಕ್ಷಕರು ಆಯಿಲ್ ಮಾಫಿಯಾ ದಂಧೆಗೆ ಕಡಿವಾಣ ಹಾಕುವಂತೆ ಹಲವು ಭಾರಿ ಮನವಿ ಮಾಡಿದರೂ ಸಹ ಗಮನ ಹರಿಸುತ್ತಿಲ್ಲ ಎಂದು ಸ್ತಳೀಯ ಪ್ರಜ್ಙಾವಂತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
