ಇಡಗೂರು ಪಂಚಾಯಿತಿ ಅಧಿಕಾರಿಗಳು ಕಣ್ಮುಚ್ಚಿ ಕುಳಿತರೇ?

ತುಮಕೂರು : ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕು ಸಿ.ಎಸ್.ಪುರ ಹೋಬಳಿ ಇಡಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವ ಹಾಗೆ ಕಾಣುತ್ತಿದೆ.

 

ಏಕೆಂದರೆ ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಹೊಂದಿಕೊಂಡಂತೆ ಇರುವ ಚರಂಡಿ ಗುಂಡಿಯೊಳಗೆ ಯಾವುದೇ ರೀತಿಯಾದ ಸುರಕ್ಷತಾ ಕವಚ (ಮಾಸ್ಕ್‌, ಗ್ಲೌಸ್‌ ಮತ್ತು ಶೂ) ಗಳನ್ನು ಹಾಕಿಕೊಳ್ಳದೇ ಚರಂಡಿಯನ್ನು ಸ್ವಚ್ಛಗೊಳಿಸುತ್ತಿದ್ದು ಇದು ಸಾರ್ವಜನಿಕ ವಲಯದಲ್ಲಿ ಬಹಳಷ್ಟು ಚರ್ಚೆಗೆ ಎಡೆ ಮಾಡಿಕೊಟ್ಟಿದೇ.

 

 

ಪ್ರಜ್ಞಾವಂತ ಸರ್ಕಾರಿ ನೌಕರರ ಕಛೇರಿಯ ಪ್ರಾಂಗಣದಲ್ಲಿಯೇ ಈ ರೀತಿಯಾದರೆ ಇನ್ನು ಬೇರೆ ಜಾಗಗಳಲ್ಲಿ ಇವರುಗಳು ಯಾವ ರೀತಿಯಾಗಿ ಕೆಲಸ ಮಾಡಿಸಿರಬಹುದು ಎಂಬುದು ಬಹಳ ಗಂಭೀರ ವಿಷಯವಾಗಿದೆ.

 

 

ಇತ್ತೀಚೆಗೆ ತುಮಕೂರು ನಗರದ ಕೆ.ಇ.ಬಿ. ಅಸೋಸಿಯೇಷನ್‌ ಕಟ್ಟಡದಲ್ಲಿ ಯುಜಿಡಿ ಗುಂಡಿ ಪ್ರಕರಣವು ಮಾಸುವ ಮೊದಲೇ ತುಮಕೂರು ಜಿಲ್ಲಾ ವಾಪ್ತಿಯಲ್ಲಿ ಈ ರೀತಿಯಾದ ಸುದ್ದಿ ಮತ್ತೊಮ್ಮೆ ಸುದ್ದಿಯಾಗುತ್ತಿರುವುದು ಶೋಚನೀಯ ಸಂಗತಿ.

 

 

ಚರಂಡಿ ಸ್ವಚ್ಛಗೊಳಿಸುವ ವ್ಯಕ್ತಿಗಳಿಗೆ ಮಾರಕವಾದ ರೋಗಗಳು ಬಂದರೆ ಅದಕ್ಕೆ ಹೊಣೆ ಯಾರು? ಎಂಬುದು ಇಲ್ಲಿ ಗಂಭೀರ ಪ್ರಶ್ನೆಯಾಗಿದ್ದು, ಸಾರ್ವಜನಿಕರು ಏನಾದರೂ ಈ ರೀತಿಯಾಗಿ ಮಾಡಿಸಿದ್ದರೆ ಎಷ್ಟು ಗಂಭೀರ ಸ್ವರೂಪಕ್ಕೆ ತಾಳುತ್ತದೆ ಎಂಬುದಾಗಿದೆ.

Leave a Reply

Your email address will not be published. Required fields are marked *