ತುಮಕೂರಿನಲ್ಲಿ ಪಾಲಿಕೆ ವತಿಯಿಂದ ಫುಟ್ ಪಾತ್ ತೆರವು ಜನರಿಂದ ಮಿಶ್ರ ಪ್ರತಿಕ್ರಿಯೆ

ತುಮಕೂರು : ತುಮಕೂರು ನಗರದ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ಜೆಸಿಬಿ ಘರ್ಜನೆಯಿಂದ ಬೆಚ್ಚಿಬೀಳುತ್ತಿರುವ ಸಣ್ಣ, ಅತೀ ಸಣ್ಣ ವ್ಯಾಪಾರಸ್ಥರು. ಏಕೆಂದರೆ ತುಮಕೂರು ಮಹಾನಗರ ಪಾಲಿಕೆಯ ವತಿಯಿಂದ ಫುಟ್‌ ಪಾತ್‌ ಒತ್ತುವರಿ ಕಾರ್ಯವು ಕಳೆದ ಮೂರು ನಾಲ್ಕು ದಿನಗಳಿಂದ ಭರದಿಂದ ಸಾಗುತ್ತಿದೆ. ಆದರೆ ಇದಕ್ಕೆ ಸಾಕಷ್ಟು ಮಿಶ್ರಾ ಪ್ರಕ್ರಿಯೆಗಳು ಜನರಿಂದ ಬರುತ್ತಿವೆ. ಕಾರಣ ಯಾವುದೇ ಮುನ್ಸೂಚನೆ, ನೋಟೀಸ್‌, ಜಾಹೀರಾತು ಇತ್ಯಾದಿ ಮಾಹಿತಿ ನೀಡದೇ ಪಾಲಿಕೆ ಅಧಿಕಾರಿಗಳು ಏಕಾ ಏಕೀ ಫುಟ್‌ ಪಾತ್‌ ಗಳ ಮೇಲೆ ಕಳೆದ ಹಲವಾರು ದಶಕಗಳಿಂದ ವ್ಯಾಪಾರ ಮಾಡಿಕೊಂಡು ಬರುತ್ತಿದ್ದ ಸಣ್ಣ, ಅತೀ ಸಣ್ಣ ವರ್ಗದ ವ್ಯಾಪಾರದವರನ್ನು ತೆರವುಗೊಳಿಸಿದ್ದಾರೆ.

 

 

ಕೆಲವರು ಬೀದಿ ಬದಿ ವ್ಯಾಪಾರಿಗಳು ಎಂದು ಸರ್ಕಾರದ ವತಿಯಿಂದ ಅಂದರೆ ಇತ್ತೀಚೆಗೆ ಸರ್ಕಾರದಿಂದ ಯೋಜನೆಗಾಗಿ ನೋಂದಾಯಿಸಿಕೊಂಡವರಿಗೆ ವೆಂಡರ್‌ ಝೋನ್‌ ಗುರುತಿಸಿಕೊಟ್ಟಿದ್ದಾರೆ, ಆದರೆ ಮಾಹಿತಿ ಇಲ್ಲದೇ ನೋಂದಾಯಿಸಿಕೊಳ್ಳದ ಬಡವರಿಗೆ ಯಾವುದೇ ವೆಂಡರ್‌ ಝೋನ್‌ ಗುರುತಿಸಿಕೊಟ್ಟಿಲ್ಲ, ಜೊತೆಗೆ ಇವರುಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಲ್ಲ ಹಾಗಾಗಿ ನಾವುಗಳು ಬೀದಿಗೆ ಬಿದ್ದಿದ್ದೇವೆ ನಮ್ಮಗಳಿಗೆ ಪಾಲಿಕೆ ಅಥವಾ ಸರ್ಕಾರ ಕೆಲಸ ಕೊಟ್ಟರೆ ನಾವು ಜೀವನ ಮಾಡುತ್ತೇವೆ, ಇಲ್ಲಾ ಎಂದರೆ ನಮಗೆ ವಿಶ ಕೊಟ್ಟುಬಿಡಿ ಎಂದು ತಮ್ಮ ಅಳಲನ್ನು ತೋಡಿಕೊಂಡರಲ್ಲದೇ, ಕೆಲವರು ನಾವುಗಳು ಅಂಗಡಿಗಳಿಗೆ ಹೋಗಿ ಅಲ್ಲಿ ಮಾಲೀಕರು ಕೇಳುವಷ್ಟು ಅಡ್ವಾನ್ಸ್‌ ಮತ್ತು ಬಾಡಿಗೆ ಕಟ್ಟಲು ನಮಗೆ ಶಕ್ತಿ ಇಲ್ಲ, ನಾವುಗಳು ಪ್ರತಿ ನಿತ್ಯ ದುಡಿದ ಹಣದಿಂದ ಅವತ್ತಿನ ದಿನವನ್ನು ಸಾಗಿಸುತ್ತೇವೆ, ಅಂತಹದರಲ್ಲಿ ನಾವುಗಳು ಬಾಡಿಗೆ ಕಟ್ಟಿಕೊಂಡು ಅಡ್ವಾನ್ಸ್‌ ಕಟ್ಟಿಕೊಂಡು ಜೀವನ ನಡೆಸುವುದು ತುಂಬಾ ದುಸ್ಥರವಾಗಿದೆಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

 

 

 

 

ಉಳಿದಂತೆ ಫುಟ್‌ ಪಾತ್‌ ಒತ್ತುವರಿಯಿಂದ ನಗರದ ಸೌಂದರ್ಯ ಹೆಚ್ಚಾಗಿದೆ, ಜೊತೆಗೆ ಇದೇ ರೀತಿ ಸ್ವಚ್ಛವಾಗಿಟ್ಟು ಕೊಳ್ಳಲು ಪಾಲಿಕೆಯವರು ಮುಂದಾಗಬೇಕು ಜೊತೆಗೆ ಸೂಕ್ತ ಪಾರ್ಕಿಂಗ್‌ ಮಾರ್ಕ್‌ ಗಳನ್ನು ರಸ್ತೆಯಲ್ಲಿ ಮಾಡುವುದರಿಂದ ಸುಗಮವಾಗಿ ರಸ್ತೆ ಸಂಚಾರ ಆಗುತ್ತದೆ, ಎಲ್ಲೆಂದರಲ್ಲಿ ವಾಹನಗಳು ನಿಲ್ಲುವುದರಿಂದ ಜನರಿಗೆ ತುಂಬಾ ಕಿರಿಕಿರಿ ಉಂಟಾಗುತ್ತಿದೆ ಪ್ರಮುಖವಾಗಿ ಆಟೋ ಹಾಗೂ ಗೂಡ್ಸ್‌ ವಾಹನಗಳು ರಸ್ತೆಯಲ್ಲಿ ಎಲ್ಲೆಂದರಲ್ಲಿ ನಿಲ್ಲುವುದರಿಂದ ಜನರಿಗೆ ಹಾಗೂ ನಮ್ಮಂತಹ ವ್ಯಾಪಾರಸ್ಥರಿಗೆ ತೊಂದರೆಯಾಗುತ್ತಿದೆ ಈ ಕುರಿತು ಕ್ರಮ ವಹಿಸಬೇಕಾಗಿದೆ ಜೊತೆಗೆ ವೆಂಡಾರ್‌ ಝೋನ್‌ ಮತ್ತು ಕೆಲವು ಸ್ಥಳಗಳನ್ನು ಫುಟ್‌ ಪಾತ್‌ ವ್ಯಾಪಾರಿಗಳಿಗೆ ಗುರುತಿಸುವುದರಿಂದ ಅವರುಗಳಿಗೆ ಭದ್ರತೆಯ ನೆಲೆಯನ್ನೂ ಸಹ ಕಲ್ಪಿಸಿದಂತೆ ಆಗಿದೆ ಈ ರೀತಿಯಾದ ನಿಲುವು ಸ್ವಾಗತಾರ್ಹವೆಂದು ಸಹ ಕೆಲ ಸಾರ್ವಜನಿಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *