ಕೋರ ಹೋಬಳಿ ಹೊಟ್ಟೆಮಲ್ಲನಪಾಳ್ಯ ಗ್ರಾಮದಲ್ಲಿ ಭೂಹಗರಣ ಮಾಸುವ ಮೊದಲೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ ಹೆಬ್ಬೂರು ಹೋಬಳಿ ಸೋಪನಹಳ್ಳಿ ಗ್ರಾಮದ ಮೂರ್ತಿ ಎಂಬುವವರ ಜಮೀನನ್ನು ಅಲ್ಲಿನ ಗ್ರಾಮ ಲೆಕ್ಕಿಗ ಹಾಗೂ ಕಂದಾಯ ನಿರೀಕ್ಷಕ ಬೇರೆಯವರ ಹೆಸರಿಗೆ ಖಾತೆ ಮಾಡಿದ್ದಾರಂತೆ, ಡಿಸಿ, ಎಸಿ ಆದೇಶವಾಗಿದ್ದರೂ ಸಹ ಎಂ.ಆರ್ ತಿದ್ದುಪಡಿಮಾಡಲು ಮೂರು ವರ್ಷದಿಂದ ವೃದ್ದ ರೈತರನ್ನು ಅಲೆಸುತ್ತಿದ್ದಾರಂತೆ.
https://www.facebook.com/share/v/1btyhkRPwb/
https://www.facebook.com/share/v/1btyhkRPwb/
ತುಮಕೂರು ತಾಲ್ಲೂಕಲ್ಲಿ ಕಂದಾಯ ಇಲಾಖೆ ಆಡಳಿತ ಹಳ್ಳ ಹಿಡಿದಿರುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಿಲ್ಲ,ಕಂದಾಯ ಇಲಾಖೆಯಲ್ಲಿ ಇನ್ನೆಷ್ಟು ಭ್ರಷ್ಟಾಚಾರ ನಡೆಯುತ್ತಿರಬಹುದು ಎಂಬುದನ್ನು ಯಾರೂ ಊಹಿಸಲು ಸಾಧ್ಯವಿಲ್ಲ,ಪಾಪ ಅಮಾಯಕ ರೈತ ಎಸಿ ಕಚೇರಿ ಕಾರಿಡಾರ್ ನಲ್ಲಿ ಅಧಿಕಾರಿಗಳಿಗೆ ಛೀಮಾರಿ ಹಾಕಿ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದರು,ಜಿಲ್ಲಾಧಿಕಾರಿಗಳು ಹಾಗೂ ಕಂದಾಯ ಸಚಿವರೇ ಇದಕ್ಕೆಲ್ಲಾ ಒಂದು ಅಂತ್ಯ ಕಾಣಿಸಬೇಕು.
