ತುಮಕೂರಲ್ಲಿ ಹರಿದ ನೆತ್ತರು ; ಮಲ್ಲ ಎಂಬ ಕುಖ್ಯಾತ ರೌಡಿ ಶೀಟರ್ ನ ಬರ್ಬರ ಹತ್ಯೆ
ತುಮಕೂರು – ತುಮಕೂರಿನಲ್ಲಿ ವ್ಯಕ್ತಿ ಒಬ್ಬನನ್ನ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ವರದಿಯಾಗಿದೆ. ಕೊಲೆಯಾದ ವ್ಯಕ್ತಿಯನ್ನು ವೀರಣ್ಣ ಅಲಿಯಾಸ್ ಮಲ್ಲ ಎಂದು ಗುರುತಿಸಲಾಗಿದ್ದು ಬೆಳಗುಂಬ ಗ್ರಾಮದ ಬೆಳಗೊಂಬದಲ್ಲಿ ವಾಸವಿದ್ದ ಎನ್ನಲಾಗಿದೆ.

ಆತನ ಮನೆಯ ಬಳಿ ಬೈಕ್ ನಲ್ಲಿ ಹೋಗುತ್ತಿದ್ದಾಗ ಏಕಾಏಕಿ ದುಷ್ಕರ್ಮಿಗಳ ಗುಂಪು ಆತನ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದ್ದು ಮಲ್ಲ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬೆಳಗುಂಬ ಮುಖ್ಯ ರಸ್ತೆಯಲ್ಲಿರುವ ಗರುಡ ಟೀ ಸ್ಟಾಲ್ ಬಳಿ ಈ ಹತ್ಯೆ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಗ್ರಾಮಾಂತರ ಮತ್ತು ಕ್ಯಾತ್ಸಂದ್ರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

2008ರಲ್ಲಿ ನಡೆದಿದ್ದ ಪ್ರಕರಣವೊಂದರಲ್ಲಿ ಮಲ್ಲ ಖುಲಾಸೆ ಗೊಂಡಿದ್ದ ಎಂದು ತಿಳಿದು ಬಂದಿದೆ. ಈತ ಗ್ಯಾಂಬ್ಲಿಂಗ್ ಮಲ್ಲ ಎಂದರೇ ಕುಖ್ಯಾತಿ ಪಡೆದಿದ್ದ ಎನ್ನಲಾಗಿದ್ದು, ತುಮಕೂರು ಜಿಲ್ಲಾ ಗ್ಯಾಂಬ್ಲಿಂಗ್ ಲೋಕದಲ್ಲಿ ಈತನ ಹೆಸರು ಅತೀ ಹೆಚ್ಚು ಕೇಳಿ ಬರುತ್ತಿತ್ತು ಎಂದು ಹೇಳಲಾಗಿದೆ.

ಮೃತ ದೇಹವನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿ, ಪ್ರಕರಣದ ಬೆನ್ನಹತ್ತಿರುವ ಪೊಲೀಸರು, ಆರೋಪಿಗಳನ್ನು ಶೀಘ್ರದಲ್ಲಿಯೇ ಬಂದಿಸುವುದಾಗಿ ತಿಳಿಸಿದ್ದಾರೆ.
ಆದರೂ ಸಹ ಇತ್ತೀಚೆಗೆ ತುಮಕೂರು ನಗರದಲ್ಲಿ ಇತ್ತೀಚೆಗೆ ಕೊಲೆ ಪ್ರಕರಣಗಳು ಹೆಚ್ಚಾಗಿದ್ದು; ಜನರಲ್ಲಿ ಭಯದ ವಾತಾವರಣ ಏರ್ಪಟ್ಟಿದೆ.
