ತುಮಕೂರು: ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ಶಿಕ್ಷಣ ದಿನದಿಂದ ದಿನಕ್ಕೆ ಬದಲಾವಣೆ ಹೊಂದುತ್ತಿದ್ದು, ಈ ಬದಲಾವಣೆಗೆ ಆಧುನಿಕ ಯಂತ್ರೋಪಕರಣಗಳು ಕಾರಣವಾಗಿದೆ. ಮೂತ್ರಪಿಂಡ ಸಂಬಂಧಿತ ಕಾಯಿಲೆಗಳ ತಪಾಸಣೆ, ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆ ಸೇರಿದಂತೆ ವಿವಿಧ ವಿಶೇಷ ವೈದ್ಯಕೀಯ ಸೇವೆಗಳು ಒಳಗೊಂಡಿದೆ ಎಂದು ನಿಕಟಪೂರ್ವ ಮುಖ್ಯಮಂತ್ರಿಗಳಾದ ಮಾನ್ಯ ಸಿದ್ದರಾಮಯ್ಯನವರು ತಿಳಿಸಿದರು.
ತುಮಕೂರಿನಲ್ಲಿ ನೂತನವಾಗಿ ಪ್ರಾರಂಭವಾಗಿರುವ ಶೆಟ್ಟಿಹಳ್ಳಿ ಮುಖ್ಯರಸ್ತೆಯಲ್ಲಿರುವ ರಾಘವೇಂದ್ರ ನಗರ ಕೈಲಾಸ ಆಶ್ರಮದ ಪಕ್ಕದಲ್ಲಿ ಸಿ.ಜಿ. ಕಿಡ್ನಿಕೇರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸೆ.18 ರಂದು ಶುಕ್ರವಾರ ನಿಕಟಪೂರ್ವ ಮುಖ್ಯಮಂತ್ರಿ ಮಾನ್ಯ ಸಿದ್ದರಾಮಯ್ಯರವರು ಚಾಲನೆ ಮಾತನಾಡುತ್ತಾ, ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ಶಿಕ್ಷಣ ದಿನದಿಂದ ದಿನಕ್ಕೆ ಬದಲಾವಣೆ ಹೊಂದುತ್ತಿದ್ದು, ಈ ಬದಲಾವಣೆಗೆ ಆಧುನಿಕ ಯಂತ್ರೋಪಕರಣಗಳು ಕಾರಣವಾಗಿದೆ. ಸಿ.ಜಿ ಮಲ್ಟಿ ಸ್ಟೆಷಾಲಿಟಿ ಆಸ್ಪತ್ರೆ ಪ್ರಾರಂಭಿಸಲಾಗಿದೆ. ಗ್ರಾಮೀಣ ಜನರಿಗೆ ಉತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಸೌಲಭ್ಯಗಳನ್ನು ಬಡ ಮತ್ತು ಮಧ್ಯಮ ವರ್ಗದವರಿಗೆ ಜನರ ಆರೋಗ್ಯ ಸೇವೆಗೆ ಸದಾ ಸಿದ್ದಗೊಳಿಸಲಾಗಿದೆ.

ಕಾರ್ಯಕ್ರಮದಲ್ಲಿ ಸಿ.ಜಿ. ಕಿಡ್ನಿಕೇರ್ ಮಲ್ಟಿ ಸ್ಟೆಷಾಲಿಟಿ ಆಸ್ಪತ್ರೆ ಮುಖ್ಯಸ್ಥರಾದ ಡಾ. ಯಶವಂತ್ ಗಂಗಯ್ಯ ರವರು ಮಾತನಾಡುತ್ತಾ ಈ ಅತ್ಯಾಧುನಿಕ ಚಿಕಿತ್ಸೆಯು ತುಮಕೂರು ಜಿಲ್ಲೆಯ, ವಿಶೇಷವಾಗಿ ಗ್ರಾಮೀಣ ಭಾಗದ ಜನರಿಗೆ ವರದಾನವಾಗಿದೆ. ಕಿಡ್ನಿ ಚಿಕಿತ್ಸೆಗೆ ಸಂಬಂಧಪಟ್ಟ ವಿಶೇಷ ಕಾಳಜಿ ವಹಿಸಿ ಅತ್ಯಾಧುನಿಕ ಸಿ.ಜಿ ಮಲ್ಟಿ ಸ್ಟೆಷಾಲಿಟಿ ಆಸ್ಪತ್ರೆ ಪ್ರಾರಂಭೋತ್ಸವವನ್ನು ನೂತನವಾಗಿ ಸ್ಥಾಪಿಸಿರುವುದು ತುಮಕೂರು ಜನತೆಗೆ ಅನುಕೂಲವಾಗಲಿದೆ. ಕಿಡ್ನಿ ಕಾಯಿಲೆಗಳಿಗೆ ಆರಂಭಿಕ ಹಂತದಲ್ಲೇ ಸೂಕ್ತ ತಪಾಸಣೆ ಮತ್ತು ಚಿಕಿತ್ಸೆ ದೊರೆಯುವಂತೆ ಸಾರ್ವಜನಿಕರಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಕಾರ್ಯಕ್ಕೂ ಆಸ್ಪತ್ರೆ ಆದ್ಯತೆ ನೀಡಲಿದೆ. ಜೊತೆಗೆ ವಿವಿಧ ವಿಭಾಗಗಳ ತಜ್ಞ ವೈದ್ಯರ ಸೇವೆ ಲಭ್ಯವಾಗುವ ಮೂಲಕ ತುಮಕೂರು ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದೆ ಎಂದರು.

ಸಿ.ಜಿ.ಮಲ್ಟಿ ಸ್ಟೆಷಾಲಿಟಿ ಆಸ್ಪತ್ರೆಯ ಸೇವೆಗಳಾದ: ಮೂತ್ರಪಿಂಡ ವೈದ್ಯಕೀಯ (ನೆಫ್ರಾಲಜಿ), ಹೃದಯ ವೈದ್ಯಕೀಯ (ಕಾರ್ಡಿಯಾಲಜಿ), ಮೂತ್ರಶಾಸ್ತ್ರ (ಯುರಾಲಜಿ), ಮಧುಮೇಹ ಮತ್ತು ಅಂತಃಸ್ರಾವ ಗ್ರಂಥಿ ವೈದ್ಯಕೀಯ, ಸಾಮಾನ್ಯ ವೈದ್ಯಕೀಯ, ಶ್ವಾಸಕೋಶ ಮತ್ತು ಉಸಿರಾಟದ ವೈದ್ಯಕೀಯ, ಮೂಳೆ ಮತ್ತು ಬೆನ್ನುಮೂಳೆ ಚಿಕಿತ್ಸಾ ವಿಭಾಗ, ಮನೋವೈದ್ಯಕೀಯ, ಕ್ಲಿನಿಕಲ್ ಕ್ಯಾನ್ಸರ್ ಚಿಕಿತ್ಸಾ ವಿಭಾಗ, ಅಪಘಾತ ಮತ್ತು ತುರ್ತು ಚಿಕಿತ್ಸಾ ಸೇವೆ, ನೇತ್ರ ಚಿಕಿತ್ಸಾ ವಿಭಾಗ, ಜಠರ ಮತ್ತು ಅಂತರಾಂಗ ವೈದ್ಯಕೀಯ, ಕ್ಯಾನ್ಸರ್ ಆರೈಕೆ ಮತ್ತು ಚಿಕಿತ್ಸೆ, ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗ, ಮಹಿಳೆಯರ ಆರೋಗ್ಯ ಸೇವೆಗಳು, ಸಾಮಾನ್ಯ ಶಸ್ತ್ರಚಿಕಿತ್ಸೆ, ಮಕ್ಕಳ ಚಿಕಿತ್ಸಾ ವಿಭಾಗ, ಚರ್ಮರೋಗ ಚಿಕಿತ್ಸಾ ವಿಭಾಗ, ಸಂಧಿವಾತ ಚಿಕಿತ್ಸಾ ವಿಭಾಗ, ಕಿವಿ, ಮೂಗು ಮತ್ತು ಗಂಟಲು (ಇಎನ್ಟಿ) ಅಪಘಾತ ಮತ್ತು ಗಾಯಗಳ ಚಿಕಿತ್ಸಾ ಸೇವೆ ಇನ್ನು ಮುಂತಾದ ಸೇವೆಗಳು ಲಭ್ಯವಿದೆ.

ಇದೇ ಸಂದರ್ಭದಲ್ಲಿ ಮುದ್ರಣ ಇಲಾಖೆಯ ನಿವೃತ್ತ ಅಧಿಕಾರಿ ಗಂಗಯ್ಯರವರು ಮಾತನಾಡುತ್ತಾ ಚಿಕಿತ್ಸೆ ನೀಡಲು ಆಧುನಿಕ ತಂತ್ರಜ್ಞಾನದ ಉಪಕರಣದ ಬಳಕೆಯಿಂದ ಅತ್ಯಾಧುನಿಕ ಸಿ.ಜಿ. ಕಿಡ್ನಿಕೇರ್ ಮಲ್ಟಿ ಸ್ಟೆಷಾಲಿಟಿ ಆಸ್ಪತ್ರೆಯನ್ನು ತೆರೆಯಲಾಗಿದೆ ಎಂದು ವಿವರಿಸಿದರು. ಕಾರ್ಯಕ್ರಮದಲ್ಲಿ ಡಾ.ನಳಿನ ಯಶವಂತ್ರವರು ಮಾತನಾಡುತ್ತಾ ಮೂತ್ರಪಿಂಡ ಸಂಬಂಧಿತ ಕಾಯಿಲೆಗಳ ಚಿಕಿತ್ಸೆಯೊಂದಿಗೆ ವಿವಿಧ ಆರೋಗ್ಯ ಸೇವೆಗಳನ್ನು ಒಂದೇ ಸೂರಿನಡಿ ಒದಗಿಸುವ ಉದ್ದೇಶದಿಂದ ಆಸ್ಪತ್ರೆಯನ್ನು ಸ್ಥಾಪಿಸಲಾಗಿದ್ದು, ಆಧುನಿಕ ವೈದ್ಯಕೀಯ ಸೌಲಭ್ಯಗಳು ಮತ್ತು ಪರಿಣಿತ ವೈದ್ಯರ ಸೇವೆಗಳನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡುವ ಉದ್ದೇಶ ಹೊಂದಿದೆ ಎಂದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕೆ.ಎನ್.ರಾಜಣ್ಣ, ವಿಧಾನಪರಿಷತ್ ಸದಸ್ಯ ಶಿವಣ್ಣ, ಡಾ.ನಳಿನಿ ಯಶವಂತ್ ಹಾಗೂ ತುಮಕೂರಿನ ವಿವಿಧ ಆಸ್ಪತ್ರೆಯ ವೈದ್ಯರು ಹಾಗೂ ಸಿ.ಜಿ ಕಿಡ್ನಿಕೇರ್ ಮಲ್ಟಿ ಸ್ಟೆಷಾಲಿಟಿ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
