ಅರಸೀಕೆರೆ: ತಾಲೂಕಿನ ಗಿಜಿಹಳ್ಳಿ ಬಳಿ ಇರುವ ಯಾರ್ಡ್ ಒಂದರಲ್ಲಿ ಅಮರಾವತಿ ಪೊಲೀಸ್ ಸ್ಟೇಷನ್ ಚಿತ್ರತಂಡವು ಕೊನೆಯ ಚಿತ್ರೀಕರಣವನ್ನು ಶೂಟ್ ಮಾಡಲಾಯಿತು.

ಕಳೆದ ನಾಲ್ಕೈದು ದಿವಸಗಳಿಂದ ಅರಸೀಕೆರೆ ತಾಲೂಕಿನ ಶ್ರೀ ಜೇನುಕಲ್ಲು ಸಿದ್ದೇಶ್ವರ ಸ್ವಾಮಿಯ ಸನ್ನಿಧಿ ಹಾಗೂ ಅಕ್ಕ ಪಕ್ಕದಲ್ಲಿ ಚಿತ್ರೀಕರಣ ಮಾಡಿದ್ದು. ಅಮರಾವತಿ ಪೊಲೀಸ್ ಸ್ಟೇಷನ್ ಚಿತ್ರವು ಸಸ್ಪೆನ್ಸ್, ತ್ರಿಲ್ಲಿಂಗ್,ಹಾಗೂ ಸೆಂಟಿಮೆಂಟಲ್ ಕಥೆಯಿಂದ ಕೂಡಿದ್ದು. ಚಿತ್ರ ತಂಡವು ಚಿತ್ರದ ಮೇಲೆ ಬಹಳಷ್ಟು ನಿರೀಕ್ಷೆಯನ್ನು ಇಟ್ಟಿದ್ದಾರೆ.

ಅಮರಾವತಿ ಪೊಲೀಸ್ ಸ್ಟೇಷನ್ ಚಿತ್ರದ ನಿರ್ದೇಶಕನ ಚೊಚ್ಚಲ ಸಿನಿಮಾ ಇದಾಗಿದ್ದು, ನಿರ್ದೇಶಕ ಪುನೀತ್ ಅರಸೀಕೆರೆ ತಾಲೂಕಿನ ಕರಗುಂದ ಗ್ರಾಮದವರಾಗಿದ್ದು. ಇನ್ನು ಚಿತ್ರತಂಡಕ್ಕೆ ನಿರ್ಮಾಪಕರಾಗಿ ಪ್ರದೀಪ್, ನವೀನ್ ಹಾಗೂ ಅನಿತಾ ಕುಮಾರಿ ಬಂಡವಾಳ ಹೂಡಿದ್ದಾರೆ.ಚಿತ್ರದಲ್ಲಿ ಮೂರು ಫೈಟ್ ಗಳಿದ್ದು, ಚಿತ್ರತಂಡವು ಅಮರಾವತಿ ಪೊಲೀಸ್ ಸ್ಟೇಷನ್ ಚಿತ್ರವನ್ನು ಫೈರೇಸಿ ಮಾಡದೆ ಚಿತ್ರಮಂದಿರಕ್ಕೆ ಬಂದು ನೋಡಿ ಬೆಳೆಸಿ ಹಾಗೂ ಪ್ರೋತ್ಸಾಹಿಸಬೇಕೆಂದು ಸಿನಿಪ್ರಿಯರಲ್ಲಿ ಮನವಿ ಮಾಡಿದ್ದಾರೆ.
