ಪರಿಶಿಷ್ಠರ ಮೇಲೆ ನಿರಂತರ ದೌರ್ಜನ್ಯ ; ಸಂಬಂಧಿಸಿದ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ

ತುಮಕೂರು: ಮಾನವ ಇಂದು ಅನ್ಯ ಗ್ರಹಗಳ ಮೇಲೆ ಜೀವನ ಕಟ್ಟಿಕೊಳ್ಳುವಷ್ಟು ಅಭಿವೃದ್ಧಿ ಪಥದತ್ತ ತಲುಪಿದ್ದರು ಗ್ರಾಮೀಣ ಭಾಗಗಳಲ್ಲಿ ಇಂದಿಗೂ ಜಾತಿ,ಮತ ಮೇಲೂ ಕೀಳು, ಮೇಲ್ವರ್ಗದಿಂದ ಕೆಳವರ್ಗದ ಜನರ ಮೇಲೆ ದೌರ್ಜನ್ಯ, ಹಲ್ಲೆ, ಭೂ ಕಬಳಿಕೆ ಪ್ರಕರಣಗಳು ನಡೆಯುತ್ತಲೇ ಇವೆ.. ಇದಕ್ಕೆ ಪೂರಕ ಎಂಬಂತೆ ತುಮಕೂರು ತಾಲೂಕಿನ ಗೂಳೂರು ಹೋಬಳಿ ವ್ಯಾಪ್ತಿಯ ಹ್ಯಾಂಡ್ ಪೋಸ್ಟ್ ಬಳಿ ಇರುವ ಕಾಳಿಂಗಯ್ಯನ ಪಾಳ್ಯದ ಪರಿಶಿಷ್ಟ ಪಂಗಡ ಸಮುದಾಯಕ್ಕೆ ಸೇರಿದ ಕುಟುಂಬದ ಮೇಲೆ ನಿರಂತರ ದೌರ್ಜನ್ಯ, ಭೂ ಒತ್ತುವರಿ ಅನ್ಯಾಯ ನಡೆದಿದ್ದು ಕೂಡಲೇ ಯ ಇದಕ್ಕೆ ಕಾನೂನಿನ ಕ್ರಮ ಕೈಗೊಳ್ಳಬೇಕೆಂದು ಮದಕರಿ ನಾಯಕ ಸೇನೆಯ ಜಿಲ್ಲಾಧ್ಯಕ್ಷ ರಂಗನಾಥ್ ಅವರು ಒತ್ತಾಯಿಸಿದರು.

 

 

ತಾಲ್ಲೂಕಿನ ಕಾಳಿಂಗಯ್ಯನ ಪಾಳ್ಯದ ಪರಿಶಿಷ್ಟ ಪಂಗಡ ಸಮುದಾಯದ ನಾಗರತ್ನಮ್ಮ ಅವರ ಮನೆಗೆ ಭೇಟಿ ನೀಡಿ ನ್ಯಾಯಯುತ್ತವಾಗಿ ಭೂ ಒತ್ತುವರಿ ಬಿಡಿಸುವ ಭರವಸೆ ನೀಡಿದ ರಂಗನಾಥ ಅವರು 1963 ನೇ ಇಸವಿ ಯಿಂದಲೂ ಗ್ರಾಮದಲ್ಲಿ ಪರಿಶಿಷ್ಟ ಜನಾಂಗದ ಸಮುದಾಯದ ಏಕೈಕ ಕುಟುಂಬ ಒಂದು ನೆಲೆಗೊಂಡು ಕಾನೂನು ಪ್ರಕಾರ ಸ್ವಲ್ಪ ಜಮೀನನ್ನ ಹೊಂದಿದ್ದು ಇದನ್ನ ಸಹಿಸದ ಈ ಊರಿನ ಸವರ್ಣೀಯರು ಜಾತಿ ಕುಮ್ಮಕಿನಿಂದ ಏಕೈಕ ನಾಯಕ ಕುಟುಂಬವನ್ನ ಊರು ಬಿಡಿಸುವ ಹುನ್ನಾರದಲ್ಲಿ ದೌರ್ಜನ್ಯದಿಂದ ನಡೆದುಕೊಳ್ಳುತ್ತಿದ್ದು ಗತಕಾಲದಿಂದಲೂ ಪೂಜಿಸುತ್ತಿದ್ದ ಗ್ರಾಮದೇವತೆಯ ಪೂಜಾರಿಕೆ ಕಿತ್ತುಕೊಂಡು ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದಾರೆ ಹೀಗಾಗಿ ಕೂಡಲೇ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕಾನೂನು ಬದ್ಧವಾಗಿ ಇವರಿಗೆ ನ್ಯಾಯ ಕೊಡಿಸಬೇಕು ಇಲ್ಲದೆ ಹೋದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ನಾಯಕ ಸಮುದಾಯದ ಎಲ್ಲಾ ಮುಖಂಡರುಗಳು ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

 

 

ದೌರ್ಜನ್ಯಕ್ಕೆ ಒಳಗಾದ ನಾಗರತ್ನಮ್ಮ ಅವರು ಮಾತನಾಡಿ ನಮ್ಮ ತಾತ ಮುತ್ತಾತಂದರು ಅನುಭವಿಸುತ್ತಿದ್ದ ಆಸ್ತಿಯನ್ನು ಈ ಗ್ರಾಮದ ಎರಡು ಮೂರು ಕುಟುಂಬಗಳು ನಮ್ಮನ್ನ ಟಾರ್ಗೆಟ್ ಮಾಡಿ ಜಮೀನು ಕಬಳಿಸುವ ನಿಟ್ಟಿನಲ್ಲಿ ಕಂದಾಯ ಇಲಾಖೆಯ ಸರ್ವೆ ಅಧಿಕಾರಿಗಳು ಭೂಮಿ ಗುರುತಿಸಿದ್ದರು.

 

 

ನಿಮಗೆ ಇಲ್ಲಿ ಭೂಮಿ ಬಿಡುವುದಿಲ್ಲ ಬೇರೆಡೆಗೆ ನಿಮಗೆ ಭೂ ವ್ಯವಸ್ಥೆ ಮಾಡಿ ಕೊಡುವುದಾಗಿ ಯಮಾರಿಸುತ್ತಾ ವಂಚನೆ ಮಾಡುತ್ತಾರೆ ಭೂಮಿ‌ ಹತ್ತಿರ ಬಂದಾಗ ಹೆದರಿಸುತ್ತಾರೆ ನಮ್ಮ ತಂದೆ ತಾಯಿ ಪೂಜಿಸುತ್ತಿದ್ದ ಗ್ರಾಮ ದೇವತೆ ಪೂಜಾರಿಕೆ ಕಿತ್ತು ಕೊಂಡು ಅವಾಚ್ಯವಾಗಿ ನಿಂದಿಸುತ್ತಾರೆ ಈ ಬಗ್ಗೆ ಸಾಕಷ್ಟು ನ್ಯಾಯ ಪಂಚಾಯ್ತಿ ನಡೆದರು ನಮಗೆ ನ್ಯಾಯ ಸಿಕ್ಕಿಲ್ಲ ಎಂದು ತಮ್ಮ ಅಳಲು ತೋಡಿಕೊಂಡರು..

 

 

ನಾಗರತ್ನಮ್ಮ ಅವರ ಮಗ ಗಿರೀಶ್ ಮಾತನಾಡಿ ಗ್ರಾಮದಲ್ಲಿ ಸಮಾನತೆ ಎಂಬುದು ಮಾಯವಾಗಿದೆ ಭೂ ದಾಖಲೆಗಳನ್ನ ನಕಲಿಯಾಗಿ ಸೃಷ್ಟಿ ಮಾಡಿಕೊಂಡು ನಮ್ಮ ಭೂಮಿಗಳನ್ನು ಕಿತ್ತುಕೊಳ್ಳುವ ಹುನ್ನಾರ ನಡೆಯುತ್ತಿದೆ ನಾಯಕ ಜನಾಂಗದ ಏಕೈಕ ಕುಟುಂಬ ಎನ್ನುವ ಕಾರಣಕ್ಕೆ ನಮ್ಮನ್ನ ಊರು ಬಿಡಿಸುವ ಸಲುವಾಗಿ ತೆರೆ‌ಮರೆಯ ಕಸರತ್ತು ನಡೆಯುತ್ತಿದೆ ಏಕಾಂಗಿಯಾಗಿರುವ ನಮ್ಮ ಕುಟುಂಬಕ್ಕೆ ಯಾರೊಬ್ಬರೂ ಸಹಕಾರ ಸಹಾಯ ಮಾಡುತ್ತಿಲ್ಲ ಈಗಾಗಿ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ನಮಗೆ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿಕೊಂಡರು.

Leave a Reply

Your email address will not be published. Required fields are marked *

error: Content is protected !!