ತುಮಕೂರು : ರಾಜ್ಯಾದ್ಯಂತ ಅತ್ಯಂತ ಹೆಸರು ವಾಸಿಯಾಗಿರುವ ಮಹಾಲಕ್ಷ್ಮೀ ಸ್ವೀಟ್ಸ್ ಮಳಿಗೆಯಲ್ಲಿ ಕಳಪೆ ಗುಣಮಟ್ಟದ ಸಿಹಿ ತಿಂಡಿಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ಇಂದು ವಕೀಲಾರದ ರಘು ಕುಮಾರ್ ರವರು ಸದರಿ ಮಳಿಗೆಯಲ್ಲಿ ಮಾರಾಟ ಮಾಡುವ ಸಿಹಿ ತಿಂಡಿಗಳನ್ನು ಆಹಾರ ಗುಣಮಟ್ಟ ಪರೀಕ್ಷಾ ಕೇಂದ್ರಕ್ಕೆ ರವಾನಿಸಿ ದೂರು ದಾಖಲಿಸಿರುವ ಪ್ರಸಂಗ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲರಾದ ರಘು ಕುಮಾರ್ ರವರು ದಿನಾಂಕ 25-04-2025ರಂದು ಶುಕ್ರವಾರ ತುಮಕೂರು ನಗರದ ಬಿ.ಹೆಚ್.ರಸ್ತೆಯಲ್ಲಿರುವ ಮಹಾಲಕ್ಷ್ಮಿ ಸ್ವೀಟ್ಸ್ ನಲ್ಲಿ ಮಲೈ ಲಡ್ಡು ಖರೀದಿಸಿದ್ದು ಸ್ವೀಟ್ಸ್ ಮಳಿಗೆಯವರು ನೀಡಿದ ಸಿಹಿ ಪದಾರ್ಥದಲ್ಲಿ ಅನುಮಾನ ಮೂಡಿಸಿದ ಹಿನ್ನೆಲೆಯಲ್ಲಿ ಸ್ವೀಟ್ಸ್ ಅಂಗಡಿಯಲ್ಲಿದ್ದ ಕೆಲ ಗ್ರಾಹಕರು ಸಹ ಲಡ್ಡು ಗಮನಿಸಿದಾಗ ಲಡ್ಡು ಹಾಳಾಗಿರುವುದು ಗಮನಕ್ಕೆ ಬಂದ ಕೂಡಲೇ ಸ್ವೀಟ್ ಅಂಗಡಿಯವರಿಗೆ ತೀವ್ರ ತರಾಟೆಗೆ ತೆಗೆದುಕೊಂಡ ವಕೀಲ ರಘು ರವರು ಕೂಡಲೇ ಆಹಾರ ಗುಣಮಟ್ಟ ಪರೀಕ್ಷಾ ಕೇಂದ್ರದ ಅಧಿಕಾರಿಗಳ ಗಮನಕ್ಕೆ ತಂದಿರುತ್ತಾರೆ.
ಈ ಹಿನ್ನೆಲೆಯಲ್ಲಿ ಇಂದು 26-04-2025 ರಂದು ಆಹಾರ ಗುಣಮಟ್ಟ ಪರೀಕ್ಷಣಾ ಅಧಿಕಾರಿಗಳು ಮಹಾಲಕ್ಷ್ಮೀ ಸ್ವೀಟ್ಸ್ ಅಂಗಡಿಯ ಮೇಲೆ ದಾಳಿ ಮಾಡಿ ನೆನ್ನೆ ನೀಡಿದ್ದ ಸ್ವೀಟ್ಸ್ ಸೇರಿದಂತೆ ಇನ್ನಿತರೆ ಸಿಹಿ ಪದಾರ್ಥಗಳನ್ನು ಸೀಸ್ ಮಾಡಿ ಪರೀಕ್ಷೆಗೆ ತೆಗೆದುಕೊಂಡು ಹೋಗಿದ್ದಾರೆ. ಇದೇ ಸಂದರ್ಭದಲ್ಲಿ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಶ್ರೀ ಮಹಾಲಕ್ಷ್ಮಿ ಸ್ವೀಟ್ಸ್ ನ ಕೆಲಸಗಾರರು ಸರಿಯಾದ ಉತ್ತರ ನೀಡದೆ ಮೌನಕ್ಕೆ ಶರಣಾಗಿದ್ದು ಹಲವು ಅನುಮಾನಗಳಿಗೆ ಆಸ್ಪದವಾಗಿದೆ.
ರಾಜ್ಯದ್ಯಂತ ತನ್ನದೇ ಆದ ಚಾಫು ಮೂಡಿಸಿರುವ ಮಹಾಲಕ್ಷ್ಮಿ ಸ್ವೀಟ್ಸ್ ರಾಜ್ಯಾದ್ಯಂತ ಹಲವು ಶಾಖೆಗಳನ್ನು ಹೊಂದಿದೆ, ಉತ್ತಮ ವ್ಯಾಪಾರ ವಹಿವಾಟು ನಡೆಸುತ್ತಾ ಲಕ್ಷಾಂತರ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದ್ದ ಸ್ವೀಟ್ಸ್ ಮಳಿಗೆಯ ಮೇಲೆ ಇಂತಹ ಗಂಭೀರ ಆರೋಪ ಬಂದಿದ್ದು ಸಿಹಿ ತಿಂಡಿಗಳನ್ನು ಸೀಜ್ ಮಾಡಿರುವ ಅಧಿಕಾರಿಗಳು ಸಿಹಿ ತಿನಿಸುಗಳನ್ನ ಪರೀಕ್ಷೆಗೆ ಕಳುಹಿಸಿದ್ದಾರೆ, ಇದೇ ಸಂದರ್ಭದಲ್ಲಿ ಮಾತನಾಡಿರುವ ಗ್ರಾಹಕ ವಕೀಲ ರಘುಕುಮಾರ್ ರವರು ನಾವು ಕೊಂಡಯುವ ಸಿಹಿ ತಿನಿಸುಗಳನ್ನ ಮನೆಯಲ್ಲಿ ಮಕ್ಕಳು ವಯೋವೃದ್ಧರು ಎಲ್ಲರೂ ಸೇವಿಸುತ್ತಾರೆ ನಾವು ಆರೋಗ್ಯ ಕಾಪಾಡುವ ಹಿನ್ನೆಲೆಯಲ್ಲಿ ಇಂತಹ ದೊಡ್ಡ ಅಂಗಡಿಗಳಲ್ಲಿ ಸಿಹಿ ತಿನಿಸು ಖರೀದಿಸಿದಾಗ ಇಂತಹ ಲೋಪಗಳು ಕಂಡುಬರುವುದು ನಿಜಕ್ಕೂ ದುರಾದೃಷ್ಟಕರ ಕೇವಲ ದುಡ್ಡಿನ ಆಸೆಗಾಗಿ ಇಂತಹ ಕಳಪೆ ಗುಣಮಟ್ಟದ ಸಿಹಿ ತಿನಿಸುಗಳನ್ನ ಸರಬರಾಜು ಮಾಡುವ ಮಳಿಗೆಗಳ ಮೇಲೆ ಫುಡ್ ಸೇಫ್ಟಿ ಅಧಿಕಾರಿಗಳು ಕೂಡಲೇ ದಾಳಿ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.