ಗುಡಿಸಲುಗಳು ಇರುವ ಬಡವರಿಗೆ ಶಾಶ್ವತ ಪರಿಹಾರ ಕಲ್ಪಿಸಿ : ಡಾ. ಹನುಮಂತನಾಥ ಸ್ವಾಮೀಜಿ

ಕೊರಟಗೆರೆ: ಜಿಲ್ಲಾದ್ಯಾಂತ ನಡೆದ ಲೋಕಸಭೆಯ ಸಾರ್ವತ್ರಿಕ ಚುನಾವಣೆಯ ದಿನದಂದು ತಾಲೂಕಿನ ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯ ಚಿಂಪುಗಾನಹಳ್ಳಿ ಗ್ರಾಮದಲ್ಲಿ ಆಕಸ್ಮಿಕವಾಗಿ ಗುಡಿಸಲಿಗೆ ಬೆಂಕಿ ಬಿದ್ದ ಕಾರಣದಿಂದಾಗಿ ಸುಮಾರು ಹತ್ತಕ್ಕೂ ಹೆಚ್ಚು ಗುಡಿಸಲು ಬಸ್ಮವಾಗಿ ವಸ್ತುಗಳೆಲ್ಲ ಸುಟ್ಟು ಕರಕಲಾದವು ಈ ಕುರಿತು ಘಟನೆಯ ಮಾಹಿತಿ ಹರಿತ ತಾಲೂಕಿನ ಎಲ್ಲರಾಂಪುರ ಕುಂಚಿಟಿಗ ಮಠದ ಡಾ. ಹನುಮಂತನಾಥ ಸ್ವಾಮೀಜಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಇಲ್ಲಿ ವಾಸವಾಗಿದ್ದ ಬಡವರ ಜೀವವನ್ನು ನಿನ್ನೆ ನಡೆದ ಸಾರ್ವತ್ರಿಕ ಚುನಾವಣೆ ಉಳಿಸಿದೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಈ ಬಡವರಿಗೆ ಶಾಶ್ವತ ಸೂರು ಕಲ್ಪಿಸಿ ಪರಿಹಾರ ಒದಗಿಸಬೇಕೆಂದು ಸ್ವಾಮೀಜಿ ಒತ್ತಾಯಿಸಿದರು.

 

 

 

 

 

ಘಟನಾ ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ಚಾಪೆ,ಬಟ್ಟೆ, ಪುಸ್ತಕ ಸೇರಿದಂತೆ ಆಹಾರಧಾನ್ಯ ವಿತರಣೆ ಮಾಡಿ ಮಾತನಾಡಿದ ಸ್ವಾಮೀಜಿಗಳು ಮಾಧ್ಯಮಗಳಲ್ಲಿ ವಿತರವಾದ ಘಟನೆಯನ್ನು ನೋಡಿ ಈ ಬಡವರ ಬಗ್ಗೆ ಬಹಳ ಬೇಸರವಾಯಿತು ಕೂಡಲೇ ಜಿಲ್ಲಾಧಿಕಾರಿಗಳು ಹಾಗೂ ಗೃಹ ಸಚಿವರಲ್ಲಿ ಘಟನೆಯ ಸಂಬಂಧ ಮಾತನಾಡಿ ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯ ಮಾಡಿದ್ದೇನೆ ಈ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯರಿಗೆ ಕೂಡಲೇ ಸಂಬಂಧಪಟ್ಟವರ ಅಧಿಕಾರಿಗಳ ಜೊತೆಗೆ ಚರ್ಚಿಸಿ ನಿವೇಶನ ರಹಿತ ಬಡವರಿಗೆ ಸೂರು ಕಟ್ಟಿಕೊಳ್ಳಲು ಅನುಕೂಲ ಮಾಡಿಕೊಡುವಂತೆ ಚರ್ಚೆ ನಡೆಸಿದ್ದೇನೆ ಎಂದು ತಿಳಿಸಿದರು.

 

 

 

ಯಾವುದೇ ಭಾಗದಲ್ಲಿ ಬಡವರಿಗೆ ಇಂತಹ ಸಂದಿಗ್ಧ ಪರಿಸ್ಥಿತಿಗಳು ಬಂದಾಗ ಮಠಮಾನ್ಯಗಳು ಒಂದು ಸಿ ಸಹಾಯ ಹಸ್ತ ತೋರುವ ಅಂತಹ ಕೆಲಸ ಕಾರ್ಯಗಳು ಮಾಡುತ್ತಾ ಬಂದಿವೆ ಅದೇ ರೀತಿಯಾಗಿ ಕುಂಚಿಟಿಗ ಶ್ರೀಮಠದಿಂದ ಬೀದಿಗೆ ಬಿದ್ದ ಬಡವರಿಗೆ ದಿನಬಳಕೆಯ ವಸ್ತುಗಳನ್ನ ಖರೀದಿಸಿ ತಂದುಕೊಡಲಾಗಿದ್ದು ಬಡವರಿಗೆ ಶಾಶ್ವತ ಸೂರು ನಿರ್ಮಾಣ ಮಾಡುವಲ್ಲಿ ಅವರ ಜೊತೆಗೆ ಹೋರಾಟ ಮಾಡಲು ಸಿದ್ಧನಿದ್ದೇನೆ ಇಲ್ಲಿಗೆ ಅಧಿಕಾರಿಗಳು ಸರ್ವೆ ಮಾಡಲು ಬಂದರೆ ಇಲ್ಲಿನ ಜನರು ಸ್ಪಂದಿಸಬೇಕು ಈ ವಿಚಾರವಾಗಿ ಮತ್ತೊಮ್ಮೆ ಗೃಹ ಸಚಿವರ ಬಳಿ ಮಾತನಾಡುತ್ತೇನೆ ಎಂದು ಸ್ವಾಮೀಜಿಯವರು ತಿಳಿಸಿದರು.

 

 

ಗ್ರಾಮ ಪಂಚಾಯತಿ ಸದಸ್ಯರುಗಳಾದ ಶಿವಕುಮಾರ್ ಜಗದೀಶ್ ಅವರು ಮಾತನಾಡುತ್ತ ಊರಿನ ಹೊರ ವಲಯದಲ್ಲಿ ನಿವೇಶನ ವಂಚಿತರು ಅನೇಕ ವರ್ಷಗಳಿಂದ ಗುಡಿಸಲುಗಳನ್ನ ಹಾಕಿಕೊಂಡಿದ್ದಾರೆ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿ ಬೆಂಕಿಯಿಂದ ಹತ್ತು ಗುಡಿಸಲು ಸಂಪೂರ್ಣವಾಗಿ ಬಸ್ಮವಾಗಿ ಗುಡಿಸಿಲಿನಲ್ಲಿದ್ದ ವಸ್ತು ಸುಟ್ಟು ಬೂದಿಯಾಗಿವೆ ಈ ಸಂಬಂಧ ಅಧಿಕಾರಿಗಳೊಡನೆ ಚರ್ಚಿಸಿ ತಕ್ಷಣಕ್ಕೆ ಸಂತ್ರಸ್ತರಿಗೆ ಊಟದ ವಸತಿ ವ್ಯವಸ್ಥೆ ಮಾಡಲಾಗಿದ್ದು ಪರಿಸ್ಥಿತಿಯನ್ನ ಅರಿತ ಸ್ವಾಮೀಜಿಗಳು ಹಾಗೂ ಇತರರು ಇವರ ಸಹಾಯಕ್ಕೆ ಧಾವಿಸಿರುವ ದೋಷ ಲಾಗಿನ್ಯವಾಗಿದ್ದು ಮುಂದಿನ ದಿನಗಳಲ್ಲಿ ನಿವೇಶನ ಹಂಚಿಕೆ ಮಾಡುವ ಕೆಲಸ ಮಾಡುತ್ತೇವೆ ಎಂದರು.

 

 

ಶಿವ ಮಹಾಲಕ್ಷ್ಮಿ ನವಗ್ರಹ ಆಂಜನೇಯ ಸೇವಾ ಟ್ರಸ್ಟ್ ಅಧ್ಯಕ್ಷ ಎಸ್ ನಟರಾಜು ಮಾತನಾಡಿ ಬಡವರ ಬದುಕಿಗೆ ಬೆಂಕಿ ಬಿದ್ದು ಅವರ ಬದುಕು ಮೂರಾಬಟ್ಟೆಯಾಗಿದೆ ಎರಡನೇ ಬಾರಿಗೆ ಇಲ್ಲಿ ಇಂತಹ ದುರ್ಘಟನೆ ನಡೆಯುತ್ತಿದೆ ಅಧಿಕಾರಿಗಳ ನಿರ್ಲಕ್ಷ ಮತ್ತು ರಾಜಕಾರಣಿಗಳ ಬೇಜವಾಬ್ದಾರಿ ತರದಿಂದಾಗಿ ಇಂತಹ ಘಟನೆ ಇಲ್ಲಿ ನಡೆದಿದ್ದು ಗ್ಯಾಸ್ ಸಿಲಿಂಡರ್ ಸಿಡಿದು ಆಗಬಹುದಾದ ದೊಡ್ಡ ಅನಾಹುತ ತಪ್ಪಿದೆ ಒಂದು ವೇಳೆ ನಡೆದಿದ್ದರೆ ಇದಕ್ಕೆ ಹೊಣೆ ಯಾರು, ಈಗಾಗಿ ಕೂಡಲೇ ಗೃಹಮಂತ್ರಿ ಡಾ.ಜಿ ಪರಮೇಶ್ವರ್ ಸೇರಿದಂತೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಅವಲೋಕಿಸಿ ಕೂಡಲೇ ನಿವೇಶನ ಹಂಚಿಕೆ ಮಾಡಿ ಮನೆ ಕಟ್ಟಿಕೊಡುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.

Leave a Reply

Your email address will not be published. Required fields are marked *

error: Content is protected !!