ಆಕಸ್ಮಿಕ ಬೆಂಕಿಗೆ ಗುಡಿಸಲು ಭಸ್ಮ, ಬೀದಿಗೆ ವಿದ್ದ ನಿರಾಶ್ರಿತರಿಗೆ ದಿನಸಿ ಕೆಟ್ಟ ವಿತರಿಸಿದ ಕೊರಟಗೆರೆ ಬಿಜೆಪಿ ಮುಖಂಡರು

ಕೊರಟಗೆರೆ:- ತಾಲೂಕಿನ ಹೊಳವನಹಳ್ಳಿ ಹೋಬಳಿ ಕ್ಯಾಮೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಂಪುಗಾನಹಳ್ಳಿ ಗ್ರಾಮ ಹೊರವಲಯದಲ್ಲಿ ಮಠ-ಮಠ ಮಧ್ಯಾಹ್ನ ಆಕಸ್ಮಿಕವಾಗಿ ಬಿದ್ದ ಬೆಂಕಿಯಿಂದಾಗಿ ಸುಮಾರು ಹತ್ತಕ್ಕೂ ಹೆಚ್ಚು ಗುಡಿಸಲು ಸುಟ್ಟು ಬಸ್ಮವಾಗಿ ಅದರಲ್ಲಿದ್ದ ದಾಸ್ತಾನು ವಸ್ತುಗಳೆಲ್ಲವೂ ಬೂದಿಯಾಗಿ ಗುಡಿಸಿಲಿನಲ್ಲಿ ವಾಸಿಸುತ್ತಿದ್ದ ಕುಟುಂಬಸ್ಥರು ಬೀದಿಗೆ ಬೀಳುವಂತ ಆಗಿದ್ದು ಹಿನ್ನೆಲೆಯಲ್ಲಿ ಘಟನಾ ಸ್ಥಳಕ್ಕೆ ಕೊರಟಗೆರೆ ಬಿಜೆಪಿ ಶಾಸಕ ಅಭ್ಯರ್ಥಿ ಬಿ ಎಚ್ ಅನಿಲ್ ಕುಮಾರ್ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿ ಬೀದಿಗೆ ಬಿದ್ದ ಕುಟುಂಬಸ್ಥರಿಗೆ ಜುಲಶಿ ಕಿಟ್ ಗಳನ್ನ ವಿತರಿಸುವಂತೆ ತೀರ್ಮಾನಿಸಿದ ಹಿನ್ನೆಲೆಯಲ್ಲಿ ಕೊರಟಗೆರೆ ತಾಲೂಕಿನ ಬಿಜೆಪಿ ತಾಲೂಕು ಅಧ್ಯಕ್ಷ ದರ್ಶನ್ ಅವರ ನೇತೃತ್ವದಲ್ಲಿ ದಿನಸಿ ಕಿಟ್ ಗಳನ್ನ ನಿರಾಶ್ರಿತರಿಗೆ ವಿತರಣೆ ಮಾಡಲಾಯಿತು.

 

 

 

 

ಸಾರ್ವತ್ರಿಕ ಲೋಕಸಭಾ ಚುನಾವಣೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಗುಡಿಸಿಲಿನಲ್ಲಿ ಸದ್ಯ ಯಾರು ಇಲ್ಲದ ಕಾರಣ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ ಬೆಂಕಿಯ ಜ್ವಾಲಾಗ್ನಿಗೆ ಗುಡಿಸಿಲಿನಲ್ಲಿದ್ದ ಎರಡಕ್ಕೂ ಹೆಚ್ಚು ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಗುಡಿಸಲು ಗಳಿಂದ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಬಸ್ಮವಾಗಿವೆ ಸದ್ಯ ಬಡವರ ಬದುಕಿಗೆ ಬಿದ್ದ ಬೆಂಕಿಯಿಂದಾಗಿ ಗುಡಿಸಿಲಿನಲ್ಲಿ ಕಟ್ಟಿ ಹಾಕಿದ್ದ ಮೇಕೆಗಳು ಕೂಡ ಸಾವನ್ನಪ್ಪಿ ಕೆಲ ಮೇಕೆಗಳ ಪರಿಸ್ಥಿತಿ ಚಿಂತಾ ಜನಕವಾಗಿದೆ ಹಿನ್ನೆಲೆಯಲ್ಲಿ ಪರಿಸ್ಥಿತಿ ಅರಿತ ಕೊರಟಗೆರೆ ತಾಲೂಕು ಬಿಜೆಪಿ ಮುಖಂಡರು ಸ್ಥಳಕ್ಕೆ ಭೇಟಿ ನೀಡಿ ನಿರಾಶ್ರಿತರಿಗೆ ಸದ್ಯ ರಾತ್ರಿ ಊಟದ ವ್ಯವಸ್ಥೆ ಸೇರಿದಂತೆ ದಿನಸಿ ಕೀಟಗಳನ್ನು ವಿತರಣೆ ಮಾಡಿ ಕೆಂಪುಗಹಳ್ಳಿ ಗ್ರಾಮದ ಸ್ಥಳೀಯ ಮುಖಂಡರುಗಳ ಸಹಕಾರದಿಂದಾಗಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ ಎಂದು ಕೊರಟಗೆರೆ ಬಿಜೆಪಿ ತಾಲೂಕು ಅಧ್ಯಕ್ಷ ದರ್ಶನ್ ಅವರು ಹೇಳಿದರು.

 

 

ಘಟನಾ ಸ್ಥಳಕ್ಕೆ ನಮ್ಮ ನಾಯಕರಾದ ಬಿಎಚ್ಎನ್ಎಲ್ ಕುಮಾರ್ ಅವರು ಭೇಟಿ ನೀಡಿದ ಹಿನ್ನೆಲೆಯಲ್ಲಿ ಬೀದಿಗೆ ಬಿದ್ದ ಜನರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಸಣ್ಣದಾಗಿ ಈ ಸಹಾಯ ಮಾಡಲಾಗಿದ್ದು ಈ ಬಡವರ ಪರಿಸ್ಥಿತಿಯನ್ನು ನೋಡಲಾಗುತ್ತಿಲ್ಲ ಹೀಗಾಗಿ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇವರಿಗೆ ನಿವೇಶನ ಹಂಚಿಕೆ ಮಾಡುವಂತೆ ಒತ್ತಡ ಹೇರಲಾಗುವುದು ಎಂದು ತಿಳಿಸಿದರು.

 

 

ಜಿಲ್ಲಾ ಬಿಜೆಪಿ ಯುವ ಮೋರ್ಚಾ ಮುಖಂಡ ಶಿವಕುಮಾರ್ ಸ್ವಾಮಿ ಅವರು ಮಾತನಾಡುತ್ತಾ ಬೆಂಕಿ ಬಿದ್ದು ಗುಡಿಸಲು ಸುಟ್ಟು ಜನರು ಬೀದಿಗೆ ಬಂದಿದ್ದಾರೆ ತಕ್ಷಣ ಅವರಿಗೆ ಊಟ ಮತ್ತು ವಸತಿಯ ವ್ಯವಸ್ಥೆ ಮಾಡುವುದು ಮಾನವ ಧರ್ಮ ಹೀಗಾಗಿ ನಾವು ಈ ಕೆಲಸವನ್ನು ಮಾಡಿದ್ದೇವೆ ಕೊಡಲೇ ಗೃಹ ಮಂತ್ರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿ ಇಲ್ಲಿ ನಿವೇಶನ ವಿತರಣೆಗೆ ಇರುವ ತೊಂದರೆ ನಿವಾರಿಸಿ ಬಡವರಿಗೆ ದಾರಿದೀಪವಾಗಬೇಕು ಎಂದು ಒತ್ತಾಯಿಸಿದರು.

 

 

ಈ ಸಂದರ್ಭದಲ್ಲಿ ದರ್ಶನ್ ಅರ್ಜುನ್ ತೇಜು ಗ್ರಾ .ಪಂ. ಸದಸ್ಯರಾದ ಶಿವಕುಮಾರ್ ಹರೀಶ್ ಸೌಮ್ಯ ಜಗದೀಶ್ ಹಾಗೂ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!