ಸನಾತನದ ಮೇಲಿನ ಆರೋಪಗಳ ವಸ್ತುಸ್ಥಿತಿ

ಸನಾತನದ ೨೫ ವರ್ಷಗಳೆಂದರೆ ಸನಾತನದ ಸಾಧಕರ ಮತ್ತು ಹಿತಚಿಂತಕರ ನಿಸ್ವಾರ್ಥ ಸಮರ್ಪಣೆಯ ೨೫ ವರ್ಷಗಳಾಗಿವೆ.  ಈ ಪ್ರವಾಸ ಖಂಡಿತವಾಗಿಯೂ ಸುಲಭವಾಗಿರಲಿಲ್ಲ; ಕಾರಣ ಇದೇ ಕಾಲದಲ್ಲಿ ಸನಾತನ ಸಂಸ್ಥೆಯನ್ನು ‘ಭಯೋತ್ಪಾದಕ’ ಎಂದು ಸಾಬೀತುಪಡಿಸಲು ದುಷ್ಟ ಪ್ರಯತ್ನ ನಡೆಯಿತು.  ನಾಸ್ತಿಕವಾದಿಗಳ ಹತ್ಯೆಯಲ್ಲಿ ಸನಾತನದ ಸಾಧಕರನ್ನು ಸಿಲುಕಿಸಲು ಪ್ರಯತ್ನಿಸಲಾಯಿತು. ಸಾವಿರಾರು ಸಾಧಕರ ವಿಚಾರಣೆ ನಡೆಸಲಾಯಿತು. ಇಂತಹ ಸಂಘರ್ಷದ ಕಾಲವನ್ನು ಅನುಭವಿಸುತ್ತಾ ಸನಾತನ ಸಂಸ್ಥೆಯು ೨೫ ವರ್ಷಗಳ ಪ್ರವಾಸ ಮಾಡಿದೆ. ರಾಜಕೀಯ ಶಕ್ತಿಗಳನ್ನು ಗುರಿ ಮಾಡಲು ಅಥವಾ ‘ಬ್ಲೇಮ್ ಗೇಮ್’ ಆಡಲು ಸಮಾಜದ  ‘ಸಾಫ್ಟ್ ಟಾರ್ಗೆಟ್’ (ಸುಲಭ ಗುರಿ) ಬೇಕಾಗಿರುತ್ತವೆ. ಅದರಲ್ಲಿ ಸನಾತನ ಸಂಸ್ಥೆ ಕಳೆದ ಕೆಲವು ವರ್ಷಗಳಿಂದ ಹಿಂದೂ ಧರ್ಮದ ಅತ್ಯಂತ ತೇಜಸ್ವಿ ಪ್ರಸಾರ ಮಾಡುತ್ತಿದೆ. ಇದರಿಂದ ಸಮಾಜ ಧರ್ಮಾಚರಣಿ ಮತ್ತು ಶ್ರದ್ಧಾವಂತವಾಗುತ್ತಿದೆ. ಇದರಿಂದ ನಾಸ್ತಿಕವಾದಿ, ಪ್ರಗತಿಪರರು, ಅಂಧಶ್ರದ್ಧೆ ನಿರ್ಮೂಲನವಾದಿ, ಹಿಂದೂದ್ವೇಷಿಗಳ ಧಂಧೆ(ಚಟುವಟಿಕೆ) ಸ್ಥಗಿತಗೊಳ್ಳಲು ಪ್ರಾರಂಭವಾಗಿತ್ತು. ಧರ್ಮವನ್ನು ನಂಬದೇ ಇರುವ ಪ್ರಗತಿಪರರಿಗೆ(ಪುರೋಗಾಮಿ) ಈ ತೇಜಸ್ವಿ ಪ್ರಸಾರ ಸಹಿಸಲು ಆಗುತ್ತಿರಲಿಲ್ಲ; ಆದ್ದರಿಂದ ಸನಾತನ ಸಂಸ್ಥೆಯನ್ನು ಗುರಿ ಮಾಡಲಾಗುತ್ತದೆ.

 

 

 

೧೯೪೭ ರಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘವು ಕಾಂಗ್ರೆಸ್, ಜಾತ್ಯಾತೀತವಾದಿ, ಸಾಮ್ಯವಾದಿ ಮುಂತಾದ ಗುಂಪಿನ ‘ಸಾಫ್ಟ ಟಾರ್ಗೆಟ್’ ಆಗಿತ್ತು. ೨೦೧೪ ರ ಬಳಿಕ ಸಂಘದ ಸ್ವಯಂಸೇವಕನು ಪ್ರಧಾನ ಸೇವಕ (ಪ್ರಧಾನಮಂತ್ರಿ) ಆದರು. ಒಂದು ರೀತಿಯಲ್ಲಿ ಸಂಘವು ದೊಡ್ಡದಾಗಿದ್ದರಿಂದ ‘ಸಾಫ್ಟ ಟಾರ್ಗೆಟ್’ ಆಗುತ್ತಿರಲಿಲ್ಲ. ಆದ್ದರಿಂದ ಅನೇಕ ರಾಜ್ಯಗಳಲ್ಲಿ ಹಿಂದುತ್ವದ ಕಾರ್ಯವನ್ನು ಮಾಡುತ್ತದೆ ಎಂದು ಸನಾತನ ಸಂಸ್ಥೆಯನ್ನು‘ಸಾಫ್ಟ ಟಾರ್ಗೆಟ್’ ಮಾಡಲಾಯಿತು. ೨೦೦೮ ರ ವರೆಗೆ ಅಂದರೆ ೧೯೯೩ ರ ಬಾಂಬ್ ಸ್ಫೋಟದಿಂದ, ಸಂಕಟಮೋಚನ ದೇವಸ್ಥಾನ(ವರಣಾಸಿ), ಅಕ್ಷರಧಾಮ ದೇವಸ್ಥಾನ(ಗುಜರಾತ) ಮುಂಬಯಿಯ ರೇಲ್ವೆಯ ಸರಣಿ ಸ್ಫೋಟ, ಕಸಾಬನ ಉಪಸ್ಥಿತಿಯಲ್ಲಿ ಮುಂಬಯಿಯ ಮೇಲಿನ ಭಯೋತ್ಪಾದಕ ದಾಳಿ ಈ ಎಲ್ಲ ಘಟನೆಗಳ ಮೇಲೆ ಕಾರ್ಯಾಚರಣೆಯೆಂದರೆ, ಎಲ್ಲೋ ಒಂದು ಕಡೆ ಅಲ್ಪಸಂಖ್ಯಾತರ ಮತಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಆಗಿನ ಆಡಳಿತಾಧಿಕಾರಿಗಳಿಗೆ ಅನಿಸುತ್ತಿತ್ತು. ಆದ್ದರಿಂದ ಸಮಾಜದ ಎರಡೂ ಘಟಕಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆಂದು ತೋರಿಸಲು ‘ಕೇಸರಿ ಭಯೋತ್ಪಾದನೆ’ಯ ಸಂಚು ರೂಪಿಸಲಾಯಿತು.

 

ಇದನ್ನು ಅಂದಿನ  ಕೇಂದ್ರೀಯ ಗೃಹಖಾತೆಯ ಹೆಚ್ಚುವರಿ ಕಾರ್ಯದರ್ಶಿ ಆರ್.ವಿ.ಎಸ್. ಮಣಿ ಅವರು ತಮ್ಮ ಪುಸ್ತಕ ‘ದಿ ಮಿಥ್ ಆಫ್ ಸ್ಯಾಫ್ರನ್ ಟೆರೆರಿಸಂ’ ಪುಸ್ತಕದಲ್ಲಿ ಬಹಿರಂಗ ಪಡಿಸಿದ್ದಾರೆ. ಈ ಪುಸ್ತಕದ ೧೧೪ ಪುಟದಲ್ಲಿ  ಗೋವಾದ ಮಡಗಾಂವ್ ಸ್ಫೋಟಕದ ವಿಷಯದಲ್ಲಿ ಕೇಸರಿ ಭಯೋತ್ಪಾದನೆಗೆ ನಿರ್ದೇಶನ ನೀಡುವ ವಿಷಯದಲ್ಲಿ ಕೇಂದ್ರೀಯ ಗೃಹಖಾತೆಯಲ್ಲಿ ನಡೆದ ಚರ್ಚೆಯ ವಿವರಗಳನ್ನು ನೀಡಲಾಗಿದೆ, ನ್ಯಾಯಾಲಯವೂ ೨೦೧೩ರಲ್ಲಿ ಮಡಗಾಂವ್ ಸ್ಫೋಟದಿಂದ ಸನಾತನದ ಸಾಧಕರನ್ನು ನಿರ್ದೋಷಿಗಳೆಂದು ಮುಕ್ತಗೊಳಿಸುವಾಗ, ’ಘಟನೆಯ ಬಗ್ಗೆ ತನಿಖೆ ನಡೆಸುವ ಅನುಮತಿಯನ್ನು ಸ್ಥಳೀಯ ಜಿಲ್ಲಾಧಿಕಾರಿಗಳಿಂದ ಪಡೆದುಕೊಳ್ಳದೇ ಕೇಂದ್ರ ಗೃಹ ಸಚಿವಾಲಯದ ಸಚಿವರಿಂದ ಪಡೆದುಕೊಂಡಿರುವುದು ಕಾರ್ಯವಿಧಾನದ ಉಲ್ಲಂಘನೆ ಮತ್ತು ಸಂಶಯಾಸ್ಪದವಾಗುತ್ತದೆ. ಹಾಗೆಯೇ ಸನಾತನ ಸಂಸ್ಥೆಗೆ ಉದ್ದೇಶಪೂರ್ವಕವಾಗಿ ಈ ಪ್ರಕರಣದಲ್ಲಿ ಸಿಲುಕಿಸಲು  ಈ ಪ್ರಥಮ ಮಾಹಿತಿ ವರದಿ(ಎಫ್. ಐ. ಆರ್) ಸಿದ್ಧ ಪಡಿಸಲಾಗಿದೆ’, ಎಂದು ಹೇಳಿದೆ. ಸಂಕ್ಷಿಪ್ತವಾಗಿ ಆಗಿನ ಕಾಂಗ್ರೆಸ್ ಆಡಳಿತದಲ್ಲಿ ಸನಾತನವನ್ನು ‘ಕೇಸರಿ ಭಯೋತ್ಪಾದನೆ’ ಎಂದು ನಿರ್ಧರಿಸಲು ‘ಬಲಿಪಶು’ ಮಾಡಲಾಯಿತು. ದಾಭೋಲಕರ- ಪಾನಸರೆ ಈ ನಾಸ್ತಿಕವಾದಿಗಳ ಹತ್ಯೆಯ ಪ್ರಕರಣದಲ್ಲಿ ಸನಾತನದ ಹೆಸರನ್ನು ಸಿಲುಕಿಸಲಾಯಿತು. ಭಾರತದಲ್ಲಿ ಪ್ರತಿನಿತ್ಯ ನೂರಾರು ಕೊಲೆಗಳು ನಡೆಯುವಾಗ  ಕೇವಲ ಇದೇ ಹತ್ಯೆಯನ್ನು ಚರ್ಚೆಯಲ್ಲಿಟ್ಟು ಒಂದು ವಿಶಿಷ್ಟ ನಿರ್ದಿಷ್ಟ ದಿಸೆಯನ್ನು ನೀಡುವ ಪ್ರಯತ್ನ ಮಾಡಲಾಗುತ್ತಿದೆಯೇ ? ಸನಾತನದ ವಿಷಯದಲ್ಲಿ ಒಂದು ನಿರೂಪಣೆಯನ್ನು ಸಿದ್ಧಪಡಿಸಲಾಗುತ್ತಿದೆ. ಕಮ್ಯುನಿಷ್ಟರಿಂದ ಕೆಲವು ನಿರ್ದಿಷ್ಟ ಹತ್ಯೆಗಳ ಸಂದರ್ಭದಲ್ಲಿ ಚರ್ಚೆಗಳು ನಡೆಯುತ್ತವೆ, ಇದು ಕಮ್ಯುನಿಸ್ಟರ ಸೈದ್ಧಾಂತಿಕ ಭಯೋತ್ಪಾದನೆಯಾಗಿದೆ. ಯಾವುದೇ ಹತ್ಯೆಯೊಂದಿಗೆ ಸನಾತನದ ಯಾವುದೇ ಸಂಬಂಧವಿಲ್ಲ ಮತ್ತು ಈ ಸತ್ಯವು ನ್ಯಾಯಾಲಯದ ಅಗ್ನಿಪರೀಕ್ಷೆಯಿಂದ ಹೊರಗೆ ಬರುತ್ತದೆ, ಎಂದು ಯೊಗೇಶ್ವರ ಭಗವಾನ್ ಶ್ರೀಕೃಷ್ಣನ ಮೇಲೆ  ಸನಾತನದ  ದೃಢ ಶ್ರದ್ಧೆ ಇದೆ.

 

 

 

ಸನಾತನದ ಮಾನವಜಾತಿಯ ಹಿತದ ಧ್ಯೇಯ : ಸನಾತನವು ಸಮಾಜದ ಆಧ್ಯಾತ್ಮಿಕ ಸೇವೆ ಮಾಡುವ, ಶ್ರದ್ಧೆಯನ್ನು ಸಂವರ್ಧನೆಗೊಳಿಸುವ ಚಳುವಳಿಯಲ್ಲಿನ ಒಂದು ಪ್ರಮುಖ ಸಂಸ್ಥೆಯಾಗಿದೆ. ‘ಮನುಷ್ಯ ಜನ್ಮವನ್ನು ಸಾರ್ಥಕಗೊಳಿಸಲು ಕಲಿಸುವ ಹಿಂದೂ ಧರ್ಮದ ಮೇಲೆ ಶ್ರದ್ಧೆಯನ್ನಿಟ್ಟು ಸಾಧನೆ ಮಾಡಿರಿ ಮತ್ತು ಜೀವನವನ್ನು ಸಾರ್ಥಕಪಡಿಸಿಕೊಳ್ಳಿರಿ’, ಎನ್ನುವುದು ಸನಾತನ ಸಂಸ್ಥೆಯ ಮುಖ್ಯ ಬೋಧನೆಯಾಗಿದೆ. ಸನಾತನವು ಹಿಂದೂ ಧರ್ಮದ ಮೇಲಿನ ಶ್ರದ್ಧೆಯ ಸಂವರ್ಧನೆಯಿಂದ ಧರ್ಮಾಚರಣಿ ಪ್ರಜೆಯನ್ನು ನಿರ್ಮಾಣ ಮಾಡಬೇಕಿದೆ. ಏಕೆಂದರೆ ‘ಸುಖಸ್ಯ ಮೂಲಂ ಧರ್ಮಃ’ ಎಂದರೆ ‘ಸುಖದ ಮೂಲ ಧರ್ಮಾಚರಣೆ ಮಾಡುವುದು’ ಎಂದು ಧರ್ಮ ಹೇಳುತ್ತದೆ. ಶ್ರದ್ಧೆಯ ಪ್ರಸಾರ ಮಾಡುವುದರಿಂದ ಸಮಾಜ ಧರ್ಮಾಚರಣಿಯಾಗುತ್ತದೆ. ಧರ್ಮಾಚರಣೆಯಿಂದ ನೈತಿಕತೆ ಉಚ್ಚ ಮಟ್ಟಕ್ಕೆ ಹೋಗುತ್ತದೆ. ಇಂತಹ ನೈತಿಕೆಯ ಸಮಾಜವೇ ಆಡಳಿತ ವ್ಯವಸ್ಥೆಯನ್ನು ಆದರ್ಶವಾಗಿ ಮುನ್ನಡೆಸಬಲ್ಲದು. ಸನಾತನ ಸಂಸ್ಥೆ ವಿಶ್ವಕಲ್ಯಾಣಕಾರಿ ಆಧ್ಯಾತ್ಮಿಕ ಹಿಂದೂ ರಾಷ್ಟ್ರವನ್ನು ಪುರಸ್ಕರಿಸುತ್ತದೆ. ಆ ಮೂಲಕ ಸನಾತನ ಸಂಸ್ಥೆಯು ಸಂಪೂರ್ಣ ಮಾನವಕುಲದ ಕಲ್ಯಾಣವನ್ನು ಸಾಧಿಸುವ ಉದ್ದೇಶವನ್ನು ಹೊಂದಿದೆ.

ಸಂಗ್ರಹ,
– ಶ್ರೀ. ವಿನೋದ ಕಾಮತ,
ರಾಜ್ಯ ವಕ್ತಾರರು, ಸನಾತನ ಸಂಸ್ಥೆ,

Leave a Reply

Your email address will not be published. Required fields are marked *

error: Content is protected !!