ತುಮಕೂರು : ತುಮಕೂರು ನಗರದ ಜಿಲ್ಲಾ ಹೋಂ ಗಾರ್ಡ್ ಕಛೇರಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ಎನ್ನಲಾದ ಜಯಣ್ಣ ಎಂಬ ವ್ಯಕ್ತಿಯು ಹಾಲಿ ಹೋಂ ಗಾರ್ಡ್ ಸೇವೆಯಲ್ಲಿ ಇಲ್ಲ ಆತನನ್ನು 05 ತಿಂಗಳ ಹಿಂದೆಯೇ ಸೇವೆಯಿಂದ ತೆಗೆದುಹಾಕಲಾಗಿದೆ ಎಂದು ಜಿಲ್ಲಾ ಹೋಂಗಾರ್ಡ್ ಕಮ್ಯಾಂಡೆಂಟ್ ಸ್ಪಷ್ಠನೆಯನ್ನು ನೀಡಿದ್ದಾರೆ.
ತನಗೆ ಹಿರಿಯ ಅಧಿಕಾರಿಗಳಿಂದ ಕಿರುಕುಳವಿದೆ ಎಂದು ಹೋಂಗಾರ್ಡ್ ಆಗಿದ್ದ ಜಯಣ್ಣ ಹೇಳಿಕೊಂಡು ತನ್ನ ಮೊಬೈಲ್ ವಾಟ್ಸ್‌ಪ್ ಸ್ಟೇಟಸ್, ಅವರು ವೈಯುಕ್ತಿಕ ಗ್ರೂಪ್ ಹಾಗೂ ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿದ್ದರು ಎನ್ನಲಾಗಿದೆ ಅಲ್ಲದೇ ಈತ ಈಗಾಗಲೇ ಹಲವಾರು ಬಾರಿ ಆತ್ಮಹತ್ಯೆ ಯತ್ನಿಸಿದ್ದ ಜೊತೆಗೆ ಕರ್ತವ್ಯಲೋಪ, ಅಶಿಸ್ತು, ದುರ್ವತನೆಯ ನಡತೆಯ ಹಿನ್ನಲೆಯಲ್ಲಿ ದಿನಾಂಕ 03-03-2023 ರಂದೇ ಜಯಣ್ಣ ಅವರನ್ನು ಗೃಹರಕ್ಷಕ ಅಧಿನಿಯಮ 8(3)ರ ಪ್ರಕಾರ ಸೇವೆಯಿಂದ ಸೇವಾಸಸಮಾಲೋಪನೆಗೊಳಿಸಲಾಗಿದೆ ಎಂದು ಕಮ್ಯಾಂಡೆಂಟ್ ಪಾತಣ್ಣ ಪತ್ರಿಕಾ ಹೇಳಿಕೆಯನ್ನು ನೀಡಿದ್ದಾರೆ.
ಇನ್ನು ಜಯಣ್ಣ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಮಾದೇಷ್ಠರ ವಿರುದ್ಧ ತೇಜೋವಧೆ ಮಾಡುತ್ತಿದ್ದು ಅವರ ಆರೋಪಗಳೆಲ್ಲವೂ ಸತ್ಯಕ್ಕೆ ಬಹು ದೂರವಾಗಿರುತ್ತದೆಂದು ತಿಳಿಸಿದ್ದಾರೆ, ಇದರೊಂದಿಗೆ ಜಯಣ್ಣ ವಿರುದ್ಧ ತುಮಕೂರು ನಗರ ಹೊಸ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರನ್ನು ಸಹ ದಾಖಲಿಸಿದ್ದು, ಮುಂದಿನ ಕ್ರಮವನ್ನು ಪೊಲೀಸರು ತೆಗೆದುಕೊಳ್ಳುತ್ತಾರೆಂದು ಪತ್ರಿಕಾ ಹೇಳಿಕೆಯ ಮೂಲಕ ಸ್ಪಷ್ಠೀಕರಣ ನೀಡಿದ್ದಾರೆ.