ತುಮಕೂರು – ಹೋಂ ಗಾರ್ಡ್ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳಿಂದ ಕಿರುಕುಳ ನೀಡುತ್ತಿರುವ ಆರೋಪ ಮಾಡಿ ಹೋಂ ಗಾರ್ಡ್ ಒಬ್ಬ ಆಲದ ಮರ ಹತ್ತಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತುಮಕೂರು ನಗರದಲ್ಲಿ ನಡೆದಿದೆ.
ತುಮಕೂರಿನ ಕ್ಯಾತ್ಸಂದ್ರ ಬಳಿ ಇರುವ ಗೃಹರಕ್ಷಕ ದಳದ ಕಚೇರಿಯ ಆವರಣದಲ್ಲಿ ಕೊರಟಗೆರೆ ಮೂಲದ ಜಯಣ್ಣ ಎನ್ನುವ ಹೋಂ ಗಾರ್ಡ್ ಒಬ್ಬ ಬೆಳ್ಳಂ ಬೆಳಗೆ ಕಚೇರಿ ಆವರಣದಲ್ಲಿದ್ದ ಆಲದ ಮರ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ್ದು ಆತ್ಮಹತ್ಯೆಗೆ ಕಚೇರಿಯ ಹಿರಿಯ ಅಧಿಕಾರಿ ಕಾರಣ ಎಂದು ಫೇಸ್ಬುಕ್ ಹಾಗೂ ವಾಟ್ಸಪ್ ಮೂಲಕ ಸ್ನೇಹಿತರಿಗೆ ಸಂದೇಶ ರವಾನಿಸಿ.
ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಒಡ್ಡಿದ್ದು ಕೊಡಕ್ಕೆ ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ಆತ್ಮಹತ್ಯೆಗೆ ಯತ್ನಿಸಿದ ಜಯಣ್ಣ ಮನವೊಲಿಸಿ ಕೆಳಗಿಳಿಸಿ ಕರೆದೋಯ್ದಿದ್ದಾರೆ.
ಹೊಸ ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ