ತುಮಕೂರಿನ ಊರುಕೆರೆಯ ಜೈನ್ ಪಬ್ಲಿಕ್ ಶಾಲೆಯಲ್ಲಿ ಮಕ್ಕಳಿಗೆ ತುಮಕೂರು ಜಿಲ್ಲಾ ಅಗ್ನಿ ಶಾಮಕ ದಳದ ವತಿಯಿಂದ ಮಕ್ಕಳಿಗೆ ಅಗ್ನಿಯಿಂದ ಸಂಭವಿಸಬಹುದಾದ ಅನಾಹುತಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಇಂದು ಪ್ರಾತ್ಯಾಕ್ಷಿತೆಯ ಮೂಲಕ ವಿವರವಾಗಿ ತಿಳಿಸಿಕೊಡಲಾಯಿತು. ಜೊತೆಗೆ ಮನೆ, ಕಛೇರಿ, ಶಾಲೆ ಮತ್ತು ಇನ್ನಿತರೆ ಸ್ಥಳಗಳಲ್ಲಿ ಅಗ್ನಿ ಅನಾಹುತಗಳು ಸಂಭವಿಸಿದರೆ ಅದರಿಂದ ಪಾರಾಗುವ ಬಗ್ಗೆ ಮಕ್ಕಳಿಗೆ ತಿಳಿಸಿಕೊಟ್ಟರಲ್ಲದೇ ಅಗ್ನಿ ಅನಾಹುತ ಸಂಭವಿಸಿದಾಗ ೧೦೧ಕ್ಕೆ ಡಯಲ್ ಮಾಡುವ ಮೂಲಕ ಅಗ್ನಿ ಶಾಮಕದಳದವರಿಗೆ ವಿಚಾರವನ್ನು ತಿಳಿಸುವ ಬಗ್ಗೆ ಅರಿವು ಮೂಡಿಸಲಾಯಿತು.
ಆಕಸ್ಮಿಕವಗಿ ಅಗ್ನಿ ಸಂಭವಿಸಿದಾಗ ಮೊದಲು ಮಾಡಬೇಕಾದ ಕಾರ್ಯ, ಅಗ್ನಿಯಿಂದ ಗಾಯಗಳಾದರೆ ಅದಕ್ಕೆ ಯಾವ ರೀತಿಯಾದ ಪ್ರಥಮ ಚಿಕಿತ್ಸೆಯ ಮಾಡಿಕೊಳ್ಳಬೇಕು, ಅಗ್ನಿಯನ್ನು ಯಾವ ರೀತಿಯಾಗಿ ನಂದಿಸಬೇಕು, ಅಗ್ನಿಯಿಂದ ಸಂಭವಿಸಬಹುದಾದ ಅನಾಹುತಗಳು, ಅಪಾಯಗಳ ಬಗ್ಗೆ ಮಕ್ಕಳಿಗೆ ಜಾಗೃತಿಯನ್ನು ಮೂಡಿಸಲಾಯಿತು. ಚಿಕ್ಕ ಮಕ್ಕಳು ದಾರಿಯಲ್ಲಿ ಓಡಾಡಬೇಕಾದರೆ, ಮುಂಬರುವ ದೀಪಾವಳಿ ಹಬ್ಬದ ಸಮಯದಲ್ಲಿ ಪಟಾಕಿ ಹಚ್ಚುವ ವೇಳೆ ಯಾವ ರೀತಿಯಾದ ಮುಂಜಾಗ್ರತೆಯನ್ನು ವಹಿಸಬೇಕೆಂದು ಮಕ್ಕಳಿಗೆ ಅರಿವಗುವ ರೀತಿಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ತಿಳಿಸಿಕೊಟ್ಟರು.
ಮಕ್ಕಳಿಗೆ ಅರಿವಾಗುವಂತಹ ರೀತಿಯಲ್ಲಿ ಅಂದರೆ ಅಣಕು ಪ್ರದರ್ಶನ ಮಾಡಿ ತೋರಿಸುವುದರ ಮೂಲಕ ಅಗ್ನಿ ಯಾವ ರೀತಿಯಲ್ಲಿ ಸಂಭವಿಸುತ್ತದೆ, ಅದನ್ನು ನಂದಿಸುವುದು ಹೇಗೆ, ಅದರಿಂದ ನಾವು ಪಾರಾಗುವುದು ಹೇಗೆ, ಯಾರಿಗೆ ನಾವು ಈ ವಿಚಾರವನ್ನು ಮೊದಲು ತಿಳಿಸಬೇಕು ಎಂಬ ಇತ್ಯಾದಿ ಅಂಶಗಳನ್ನು ಅಣಕು ಪ್ರದರ್ಶನದಲ್ಲಿ ತೋರಿಸಲಾಯಿತು.
ಅಣುಕು ಪ್ರದರ್ಶನ ಮತ್ತು ಜಾಗೃತಿ ಮೂಡಿಸುವ ಕಾರ್ಯಕ್ರಮದ ನಂತರ ಅಗ್ನಿ ಶಾಮಕ ಸಿಬ್ಬಂದಿಗಳಿಗೆ ಶಾಲಾ ಸಿಬ್ಬಂದಿ ವತಿಯಿಂದ ಧನ್ಯವಾದಗಳನ್ನು ಅರ್ಪಿಸಿದರು. ಈ ಸ ಶಾಲೆಯ ಮುಖ್ಯಶಿಕ್ಷಕರಾದ ಸುನೀತ ದಗ್ಗಲ್, ಬಸವರಾಜು, ಪೂರ್ಣಿಮ, ನೇತ್ರ, ರಶ್ಮಿ ಸೇರಿದಂತೆ ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.