ತುಮಕೂರು ನಗರಕ್ಕೆ ಹಿಂದು ಮತದಾರರು ಬೇಡವೇ? ಪಂಚಾಕ್ಷರಯ್ಯ

ತುಮಕೂರು ನಗರದಲ್ಲಿ ಇತ್ತೀಚೆಗೆ ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ಕೈ ಬಿಡಲಾಗಿದೆ, ತೆಗೆದುಹಾಕಲಾಗಿದೆ, ಇತ್ಯಾದಿಯಾಗಿ ಮತದಾರರ ಪಟ್ಟಿಯಲ್ಲಿನ ಗೊಂದಲಗಳ ಸರಮಾಲೆಯನ್ನೇ ಹಲವಾರು ನಾಯಕರು ಬಹಿರಂಗವಾಗಿ ಅಥವಾ ಮಾದ್ಯಮಗಳ ಮೂಲಕ ಹೇಳಿಕೆಗಳನ್ನು ನೀಡುತ್ತಿದ್ದಾರೆ ಅಷ್ಟೇ, ಆದರೆ ಯಾರೂ ಸಹ ಯಾವ ಯಾವ ಬೂತುಗಳಲ್ಲಿ ಎಷ್ಟೇ ಎಷ್ಟು ಮತದಾರರನ್ನು ಕೈಬಿಡಲಾಗಿದೆಂದು ಯಾರೂ ಸ್ಪಷ್ಟೀಕರಣ ನೀಡುವಂತಹ ಕೆಲಸವನ್ನು ಮಾಡುತ್ತಿಲ್ಲ.

 

ಇದರ ಬೆನ್ನಲ್ಲೇ ಕಳೆದ ಬಾರಿ ಚುನಾವಣೆ ಸಂದರ್ಭದಲ್ಲಿ ಬೋಗಸ್ ಮತದಾರರ ವಿರುದ್ಧ ಕಾನೂನು ಹೋರಾಟ ಮಾಡಿದ್ದ ಸಾಮಾಜಿಕ ಹೋರಾಟಗಾರ ಸದಾಶಿವನಗರದ ನಿವಾಸಿ ಎಂ.ಬಿ.ಪಂಚಾಕ್ಷರಯ್ಯ ಮತ್ತೊಮ್ಮೆ ಸುದ್ಧಿಯಲ್ಲಿದ್ದು, ಮುಂಬರುವ ಚುನಾವಣಾ ಮತದಾರರ ಪಟ್ಟಿಯಲ್ಲಿನ ಲೋಪದೋಷಗಳ ಬಗ್ಗೆ ಧ್ವನಿ ಎತ್ತಿದ್ದು ಇದರ ಬೆನ್ನಲ್ಲೆ ರಾಜಕೀಯ ಪಕ್ಷಗಳು ಸಹ ಮತದಾರ ಪಟ್ಟಿಯಲ್ಲಿನ ಲೋಪ ದೋಷಗಳನ್ನು ಹುಡುಕುವಲ್ಲಿ ನಿರತರಾಗಿದ್ದಾರೆಂದು ತಿಳಿಸುತ್ತಾರೆ.

 

 

 

 

ಇದಕ್ಕೆ ಸಂಬಂಧಿಸಿದಂತೆ ಮತ್ತೊಂದು ಸ್ಪೋಟಕ ಮಾಹಿತಿಯನ್ನು ನೀಡಿರುವ ಎಂ.ಬಿ.ಪಂಚಾಕ್ಷರಯ್ಯ ತುಮಕೂರು ನಗರಸಭಾ ವಿಧಾನಸಭಾ ಕ್ಷೇತ್ರದಲ್ಲಿ ೧೫ ಸಾವಿರಕ್ಕೂ ಅಧಿಕ ಹಿಂದು ಸಮುದಾಯದ ಮತದಾರರನ್ನು ಮತಪಟ್ಟಿಯಿಂದ ಕೈ ಬಿಟ್ಟಿದ್ದಾರೆ / ತೆಗೆದುಹಾಕಲಾಗಿದೆಂದು ಬಹಿರಂಗಪಡಿಸಿದ್ದಾರೆ.

 

 

 

ಪಂಚಾಕ್ಷರಯ್ಯ ಸಂಬಂಧಪಟ್ಟ ಇಲಾಖೆಯಿಂದ ಮಾಹಿತಿ ಹಕ್ಕು ಅಧಿನಿಯಮದಡಿ ಮಾಹಿತಿಯನ್ನು ಸಂಗ್ರಹಿಸಿದ್ದು ಇದರೊಂದಿಗೆ ತುಮಕೂರು ನಗರದ ೨೫೪ ವಿವಿಧ ಮತಗಟ್ಟೆಗಳನ್ನು ಸಂಪರ್ಕ ಮಾಡಿ ಅಲ್ಲಿನ ಮಾಹಿತಿಯನ್ನೂ ಸಹ ಸಂಗ್ರಹಿಸಿದ್ದು ಈ ಪ್ರಕರಣಕ್ಕೆ ಅವರ ಹೇಳಿಕೆ ಪುಷ್ಠಿಯನ್ನು ನೀಡುತ್ತದೆ.

 

 

 

ಇನ್ನುಳಿದಂತೆ ಕಳೆದ ೨೦೨೨ರ ಜನವರಿ ಮಾಹೆಯಲ್ಲಿ ಜಿಲ್ಲಾ ಮತದಾರರ ಪರಿಷ್ಕೃತ ಪಟ್ಟಿಯನ್ನು ಜಿಲ್ಲಾಡಳಿತದಿಂದ ಹೊರತಂದಿದ್ದು, ಅದರಲ್ಲಿಯೇ ೧೭೯೩೭ ಮತದರರನ್ನು ಕಳೆದ ೧೦ ತಿಂಗಳ ಹಿಂದೆಯೇ ತೆಗೆದು ಹಾಕಲಾಗಿದೆಂಬ ಮಾಹಿತಿಯನ್ನು ಮಹಾನಗರ ಪಾಲಿಕೆಯ ಚುನಾವಣಾ ಸಿಬ್ಬಂದಿ, ಜಿಲ್ಲಾ ಚುನಾವಣಾ ಶಾಖೆಯ ಸಿಬ್ಬಂದಿ, ಇನ್ನಿತರೆ ಸಿಬ್ಬಂದಿಗಳು ಆ ಸಮಯಕ್ಕೆ ತೆಗೆದು ಹಾಕಿದ್ದಾರೆಂಬುದು ಗಂಭೀರ ಆರೋಪವಾಗಿದೆ.

Leave a Reply

Your email address will not be published. Required fields are marked *

error: Content is protected !!