ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡ ಸ್ಪೋಟಕ ಹೇಳಿಕೆ_ಹಾಲಿ ಶಾಸಕರಿಂದ ಕೊಲೆ ಮಾಡಲು ಸುಪಾರಿ ಆರೋಪ.
ತುಮಕೂರು_ತುಮಕೂರು ಗ್ರಾಮಾಂತರ ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡ ರವರು ಹಾಲಿ ಶಾಸಕ ಡಿಸಿ ಗೌರಿಶೇಖರ್ ರವರ ವಿರುದ್ಧ ತಮ್ಮನ ಕೊಲೆ ಮಾಡಲು ಸೂಪಾರಿ ನೀಡಿದ್ದಾರೆ ಎಂದು ಸ್ಪೋಟಕ ಹೇಳಿಕೆಯನ್ನ ನೀಡಿದ್ದಾರೆ.
ತುಮಕೂರು ಗ್ರಾಮಾಂತರದ ಅರಿಯೂರು ಗ್ರಾಮದಲ್ಲಿ ಕಳೆದ ಶುಕ್ರವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾಜಿ ಶಾಸಕ ಸುರೇಶ್ ಗೌಡರವರು ಹುಟ್ಟು ಹಬ್ಬ ಹಾಗೂ ಕನ್ನಡ ರಾಜ್ಯೋತ್ಸವವನ್ನು ಆಯೋಜಿಸಲಾಗಿತ್ತು, ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಭಾಷಣ ಮಾಡುತ್ತಿರುವ ವೇಳೆ ಸುರೇಶ ಗೌಡರವರು ಶಾಸಕ ಗೌರಿಶಂಕರ್ ರವರ ವಿರುದ್ಧ ತಮ್ಮನ್ನು ಕೊಲೆ ಮಾಡಲು ಜೈಲಿನಲ್ಲಿರುವ ಖೈದಿಗಳಿಗೆ ಸುಪಾರಿ ನೀಡಿ ಕೊಲ್ಲಿಸಲು ಸಂಚು ಹೂಡಿದ್ದಾರೆನ್ನುವ ಗಂಭೀರ ಆರೋಪವನ್ನು ಬಹಿರಂಗವಾಗಿ ಹೇಳುವ ಮೂಲಕ ಗೌರಿಶಂಕರ್ ಅಭಿಮಾನಿಗಳನ್ನು ಕೆರಳಿಸುವ ಕೆಲಸ ಮಾಡಿದ್ದಾರೆನ್ನಲಾಗಿದೆ.
ಇನ್ನು ತನ್ನನ್ನ ಕೊಲೆ ಮಾಡಲು ಸಂಚು ಹಾಕಿದ್ದು ನಮ್ಮ ಕಾರ್ಯಕರ್ತರು ನನ್ನು ಕೊಲೆ ಮಾಡಲು ಬಿಡುವುದಿಲ್ಲ ನಮ್ಮ ಕಾರ್ಯಕರ್ತರು ಅವರ ತಾಕತ್ ಅನ್ನ ತೋರಿಸುತ್ತಾರೆ ಎಂದು ಅವರು ಜೈಲಿನಲ್ಲಿರುವ ಕೈದಿಗಳು ಬಳಸಿಕೊಂಡು ಕೊಲೆ ಮಾಡಲು ಹೊರಟಿದ್ದಾರೆ .
ತುಮಕೂರು ಗ್ರಾಮಾಂತರ ಮಾಜಿ ಶಾಸಕರಾದ ಬಿ.ಸುರೇಶ್ ಗೌಡರವರು ಅಧಿಕಾರ ಕಳೆದುಕೊಂಡ ನಂತರದಿಂದ ಶಾಸಕ ಗೌರಿಶಂಕರ್ ವಿರುದ್ಧ ಹಲವು ಆಧಾರ ರಹಿತ ಹೇಳಿಕೆಗಳನ್ನು ನೀಡುತ್ತಾ ಗ್ರಾಮಾಂತರದ ಸಾರ್ವಜನಿಕರು ಮತ್ತು ಮತದಾರರನ್ನು ದಿಕ್ಕು ತಪ್ಪಿಸುವ ಹುನ್ನಾರವನ್ನು ಮಾಜಿ ಶಾಸಕ ಸುರೇಶ್ ಗೌಡರವರು ಮಾಡಿದ್ದು, ಮುಂಬರುವ ಚುನಾವಣೆಯಲ್ಲಿ ಇದಕ್ಕೆ ತಕ್ಕ ಪಾಠವನ್ನು ಕಲಿಸುತ್ತೇವೆಂದು ಗೌರಿಶಂಕರ್ ಅಭಿಮಾನಿಗಳು ಬಹಿರಂಗ ಹೇಳಿಕೆಗಳನ್ನು ನೀಡುತ್ತಿದ್ದಾರೆ.