ತುಮಕೂರು ನಗರದಲ್ಲಿ ನಡೆಯಲಿದೆ ವೀರ ಮದಕರಿ ನಾಯಕರ ಜಯಂತ್ಯೋತ್ಸ

ತುಮಕೂರು ನಗರದ ಗಾಜಿನ ಮನೆ ಆವರಣದಲ್ಲಿ ನವೆಂಬರ್‌ 26 ರಂದು ಶನಿವಾರ ಕರುನಾಡ ಹೆಮ್ಮೆಯ ವೀರರಾದ ರಾಜವೀರ ಮದಕರಿ ನಾಯಕರ ಜಯಂತ್ಯೋತ್ಸವ ಕಾರ್ಯಕ್ರಮವು ಜರುಗಲಿದ್ದು ಕಾರ್ಯಕ್ರಮದ ಅಧ್ಯಕ್ಷತೆಯಾನ್ನು ತುಮಕೂರು ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷರಾದ ಕೆ.ಎನ್.ರಾಜಣ್ಣನವರು ವಹಿಸಲಿದ್ದಾರೆಂದು ತುಮಕೂರಿನ ಖಾಸಗಿ ಹೋಟೆಲ್‌ ನಲ್ಲಿ ಶ್ರೀ ರಾಜವೀರ ಮದಕರಿ ನಾಯಕರ ಜಯಂತ್ಯೋತ್ಸವ ಆಚರಣ ಸಮಿತಿಯವರು ತಿಳಿಸಿರುತ್ತಾರೆ.

 

 

 

 

ಇನ್ನು ಇದರ ಭಾಗವಾಗಿ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಾಲ್ಮೀಕಿ ಸಮುದಾಯದವರಿಗೆ ರಾಜ್ಯ ವೀರ ಮದಕರಿ ನಾಯಕ ರಾಜ್ಯ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುವುದೆಂದು ತಿಳಿಸುವುದರೊಂದಿಗೆ ಕಾರ್ಯಕ್ರಮದ ಭಾಗವಾಗಿ ತುಮಕೂರಿನ ಬಿ.ಜಿ.ಎಸ್.‌ ವೃತ್ತದಿಂದ ಗಾಜಿನ ಮನೆಯವರೆಗೆ ವಿವಿಧ ಕಲಾ ತಂಡಗಳಿಂದ ಬೃಹತ್‌ ಮತ್ತು ವೈಭವೋಪೇತ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆಂದರು.

 

 

ಮೆರವಣಿಗೆಯ ಉದ್ಘಾಟನೆಯನ್ನು ನಗರ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್‌ ಉದ್ಘಾಟಿಸಲಿದ್ದು, ವಾಲ್ಮೀಕಿ ಸಮುದಾಯದ ರಾಜ್ಯದ ಪ್ರಮುಖ ರಾಜಕೀಯ ನಾಯಕರು ಹಾಗೂ ಜಿಲ್ಲೆಯ ವಾಲ್ಮೀಕಿ ಸಮುದಾಯದ ಬಂಧುಗಳು ಬಹುಸಂಖ್ಯೆಯಲ್ಲಿ ಆಗಮಿಸಿಲಿದ್ದಾರೆಂದು ತಿಳಿಸಿದರು.

 

 

ಪತ್ರಿಕಾಗೋಷ್ಠಿಯಲ್ಲಿ ಜಯಂತ್ಯೋತ್ಸವ ಆಚರಣಾ ಸಮಿತಿಯ ಸಂಚಾಲಕರುಗಳಾದ ಧನುಷ್‌, ಲಕ್ಷ್ಮಣಪ್ಪ, ಜಿ.ಎಸ್.ಪ್ರಕಾಶ್‌, ಭರತ್‌ ರಾಜ್‌, ಶ್ರೀಧರ್‌, ಬಾಲರಾಜ್‌, ರವಿ, ಮಂಜು, ಕೃಷ್ಣ ಹಾಗೂ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!