ತುಮಕೂರು ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ್ ಕುಟುಂಬದಿಂದ ತುಮಕೂರು ಗ್ರಾಮಾಂತರ ಭೈರಸಂದ್ರ ಗ್ರಾಮದ ನಿವಾಸಿಗಳಾದ ಜಿ.ಪಾಲನೇತ್ರಯ್ಯ ಸೇರಿದಂತೆ ಹಲವಾರು ರೈತರಿಗೆ ಜಮೀನು ವಿಚಾರದಲ್ಲಿ ಮೋಸ ಮಾಡಿದ್ದಾರೆ ಎಂದು ಆರೋಪಿಸಿ ಇಂದು ಜಮೀನುಗಳ ಮಾಲೀಕರು ಹಾಗೂ ಕಾಂಗ್ರೆಸ್ ಮುಖಂಡರಾದ ಜಿ.ಪಾಲನೇತ್ರಯ್ಯರವರು ಗಂಭೀರವಾಗಿ ಆರೋಪಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ತಾಲ್ಲೂಕು, ಹುಲಿಕುಂಟೆ ಗ್ರಾಮದಲ್ಲಿ ದಾವಣಗೆರೆ ಸಂಸದರಾದ ಜಿ.ಎಂ.ಸಿದ್ದೇಶ್ವರ್‌ರವರ ತಮ್ಮ ಜಿ.ಎಂ.ಲಿಂಗರಾಜು, ಆಪ್ತರಾದ ಸುರೇಶ್, ರಫೀಕ್ ಹಾಗೂ ಇನ್ನಿತರರು ಈ ಗ್ರಾಮದಲ್ಲಿ ಸುಸಜ್ಜಿತ ಶಾಲೆಯನ್ನು ಮಾಡುವುದರ ಸಲುವಾಗಿ ಸುಮಾರು ೧೦೦ ರಿಂದ ೧೨೦ ಎಕರೆ ಜಾಗವನ್ನು ಹುಡುಕುತ್ತಿದ್ದು, ಅದಕ್ಕೆ ಸಂಬಂಧಿಸಿದಂತೆ ಜಿ.ಪಾಲನೇತ್ರಯ್ಯರವರನ್ನು ೨೦೧೫-೧೬ನೇ ಸಾಲಿನಲ್ಲಿ ಸಂಪರ್ಕಿಸಿ ಸ್ವಯಂ ಪಾಲನೇತ್ರಯ್ಯ ಅವರು ಹೊಂದಿರುವ ಜಮೀನಿನೊಂದಿಗೆ ಅವರ ಸ್ನೇಹಿತರು ಹಾಗೂ ಇನ್ನಿತರೆ ರೈತರಿಂದ ಜಮೀನು ಖರೀದಿಸಿ ಕೊಡುವಂತೆ ಬೆಂಗಳೂರಿನ ಗಾಂಧಿನಗರದಲ್ಲಿರುವ ಜಿ.ಎಂ.ಟ್ರಸ್ಟ್ ಕಛೇರಿಯಲ್ಲಿ ಮಾತುಕತೆಯನ್ನು ನಡೆಸುತ್ತಾರೆ, ಅದರಂತೆ ಪಾಲನೇತ್ರಯ್ಯರವರು (ಎಂ.ಒ.ಎ) ಸ್ಪೆಷಲ್ ಪವರ್ ಆಫ್ ಅಟಾರ್ನಿಯನ್ನು ಪಾಲನೇತ್ರಯ್ಯ ಮತ್ತು ಸದಾಶಿವಯ್ಯ ಎಂಬುವವರ ಕಡೆಯಿಂದ ಮಾಡಿಸಿಕೊಳ್ಳುತ್ತಾರೆ.
ತದನಂತರ ಸದರಿ ಜಿ.ಎಂ.ಲಿಂಗರಾಜು ಮತ್ತು ಅವರ ಆಪ್ತರು ಅದೇ ಗ್ರಾಮದ ಕೆಲವು ರೈತರನ್ನು ಮುಕ್ತ ಭೇಟಿ ಮಾಡಿಸಿ ಎಂದು ದುಂಬಾಲು ಬಿದ್ದಿದ್ದಾರೆ ಅದರಂತೆ ಇವರು ಸಹ ಕೆಲವರನ್ನು ಪರಸ್ಪರ ಭೇಟಿ ಮಾಡಿಸಿ ಪರಿಚಯಿಸಿರುತ್ತಾರೆ. ನಂತರದ ದಿನಗಳಲ್ಲಿ ಹಲವಾರು ರೈತರ ಜಮೀನುಗಳು ಸಿವಿಲ್ ನ್ಯಾಯಾಲಯದಲ್ಲಿ ವ್ಯಾಜ್ಯಗಳು ಇರುತ್ತವೆ, ಅದನ್ನು ಸಹ ಜಿ.ಪಾಲನೇತ್ರಯ್ಯ ಹಾಗೂ ಇತರರು ಅವುಗಳನ್ನು ಕೋರ್ಟ್‌ನಿಂದ ಖುಲಾಸೆ ಮಾಡಿಸಿಕೊಡುತ್ತಾರೆ. ಆ ಸಂದರ್ಭದಲ್ಲಿ ಜಿ.ಎಂ.ಟ್ರಸ್ಟ್‌ನ ಸದಸ್ಯರಿಗೆ ಈ ಭಾಗದ ಜಮೀನುಗಳನ್ನು ಖರೀದಿಸಲು ಮಾರ್ಗ ಸುಲಭವಾಗುತ್ತದೆ. ಆ ಸಮಯದಲ್ಲಿ ಕೆಲವೊಂದು ಜಮೀನುಗಳನ್ನು ಕ್ರಯಕ್ಕೆ ಪಡೆದರೆ ಕೆಲವೊಂದು ಜಮೀನುಗಳಿಗೆ ಕರಾರು ಪತ್ರ ಮಾಡಿಕೊಂಡು (ಅಗ್ರಿಮೆಂಟ್) ಅಲ್ಪಸ್ವಲ್ಪ ಹಣವನ್ನು ನೀಡುತ್ತಾರೆ.
ಮುಂದಿನ ದಿನಗಳಲ್ಲಿ ಅಂದರೆ 2019-20ನೇ ಸಾಲಿನಲ್ಲಿ ಕೆಲವರಿಗೆ ಹಣ ಕೊಡುವುದಾಗಿ ನಂಬಿಸಿ, ಹಣ ನೀಡದೇ ಅವರುಗಳಿಗೆ ಬೆದರಿಕೆ ಒಡ್ಡಿ ಅವರಿಂದ ಕ್ರಯಕ್ಕೆ ಜಮೀನುಗಳನ್ನು ಪಡೆದರೆ, ಇನ್ನೂ ಕೆಲವರಿಗೆ ಹಣ ನೀಡದೇ ಕ್ರಯ ಮಾಡಿಸಿಕೊಂಡಿರುತ್ತಾರೆ, ಹಲವಾರು ರೈತರು ನನ್ನ ಕಡೆಯಿಂದ ಪರಿಚಯವಾದ ಕಾರಣ ಅವರುಗಳು ನನ್ನ ಮೇಲೆ ದುಂಬಾಲು ಬೀಳುತ್ತಾರೆ, ನಾನು ಜಿ.ಎಂ.ಟ್ರಸ್ಟ್‌ನ ಮುಖ್ಯಸ್ಥರು ಜಿ.ಎಂ.ಸಿದ್ದೇಶ್ವರ್ ಅವರ ತಮ್ಮನಾದ ಜಿ.ಎಂ.ಲಿಂಗರಾಜು ಅವರ ಮೇಲೆ ಒತ್ತಡ ಹಾಕಿದಾಗ ಅವರು ನಮ್ಮಗಳಿಗೆ ಮೋಸ ಮಾಡುವ ದುರುದ್ದೇಶದಿಂದಲೇ ಈ ರೀತಿಯಾಗಿ ಮಾಡಿರುವುದಾಗಿ ಅವಾಚ್ಯ ಶಬ್ಧಗಳಿಂದ ನಿಂದಿಸಿದಲ್ಲದೇ ನನ್ನ ಮೇಲೆ ಧಮ್ಕಿ ಹಾಕಿ ಕಳುಹಿಸುತ್ತಾರೆ. ಆದರೂ ನಾನು ರೈತರಿಗೆ ಅನ್ಯಾಯ ಆಗಬಾರದು ಎಂಬ ಉದ್ದೇಶದಿಂದ ನಾನು ಅವರ ಹಿಂದೆ ಬಿದ್ದಾಗ ಅವರು ನನ್ನನ್ನು ಕೊಲ್ಲಲು ಮುಂದಾಗಿ ದೊಡ್ಡಬಳ್ಳಾಪುರದ ಹತ್ತಿರ ಇರುವ ನನ್ನ ನಿವಾಸಕ್ಕೆ ಅವರ ತಂಡವನ್ನು ಕಳುಹಿಸುತ್ತಾರೆ, ಆದರೆ ಅಂದು ನಾನು ಅಲ್ಲಿ ಇಲ್ಲದ ಕಾರಣ ಆ ಮನೆಯಲ್ಲಿ ನನ್ನ ಸ್ವಂತ ಮಗನನ್ನು ನೋಡಿ ಅವನನ್ನೇ ನಾನೆಂದು ತಿಳಿದು ನನ್ನ ಮಗನನ್ನು ಕೊಲ್ಲುತ್ತಾರೆ, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳು ಇಂದಿಗೂ ಸಹ ಜೈಲಿನಲ್ಲಿದ್ದಾರೆ ಎಂದು ಆರೋಪಿಸಿದರು.
ಮುಂದುವರೆದು ೨೦೨೦ರ ಕೋವಿಡ್ ಸಂದರ್ಭದಲ್ಲಿ ಹಲವಾರು ನಕಲಿ ದಾಖಲೆಗಳನ್ನು ಸೃಷ್ಠಿ ಮಾಡಿ, ಜಿ ಪಾಲನೇತ್ರಯ್ಯ ಅವರಿಗೆ ಆದ ನನಗೆ ಸಂಬಂಧಿಸಿದ ನಾಲ್ಕು ಎಕರೆ ಜಮೀನನ್ನು ನಕಲಿ ಸಹಿ ಹಾಕಿ ಜಿ.ಎಂ ಲಿಂಗರಾಜು ಸೇರಿದಂತೆ ಹಲವು ರೈತರ ಜಮೀನುಗಳಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ರೈತರ ಜಮೀನನ್ನ ಅವರ ಹೆಸರಿಗೆ ಮಾಡಿಸಿಕೊಂಡು ನನಗೆ ಮೋಸ ಮಾಡಿದ್ದಾರೆ ಅಲ್ಲದೇ ಇದೇ ರೀತಿಯಾಗಿ ಹಲವಾರು ರೈತರಿಗೆ ಮೋಸ ಮಡಿ ಸುಮಾರು 80ಕೋಟಿ ಅಧಿಕ ಹಣವನ್ನು ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲಿಯೇ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿ ಕಾನೂನು ರೀತ್ಯ ಹೋರಾಟಕ್ಕೆ ಮುಂದಾಗಿದ್ದೇವೆಂದು ತಿಳಿಸಿದರು, ಜೊತೆಗೆ ಇವರುಗಳು ಅತ್ಯಂತ ಪ್ರಭಾವಶಾಲಿಗಳು ಆಗಿರುವುದಲ್ಲದೇ ನನ್ನ ಮಗನ ಸಾವಿಗೆ ಕಾರಣಕರ್ತರಾಗಿದ್ದಾರೆ, ಆದುದರಿಂದ ನಾನು ಸೇರಿದಂತೆ ಅವರಿಂದ ನೊಂದ ರೈತರು ಆತಂಕದಲ್ಲಿದ್ದು ನಮಗೆ ರಕ್ಷಣೆ ಸಹ ಬೇಕಾಗಿದೆ, ನಾವು ಈ ಕುರಿತು ಸಂಬಂಧಪಟ್ಟ ಪೊಲೀಸ್ ಠಾಣೆಗಳಿಗೆ ಶೀಘ್ರದಲ್ಲಿಯೇ ಮೊಕ್ಕದ್ದಮೆಯನ್ನು ಸಹ ದಾಖಲಿಸುತ್ತಿದ್ದೇವೆಂದು ತಿಳಿಸಿದರು.