ತುಮಕೂರಿನ ಮರಳೂರು ದಿಣ್ಣೆಯಲ್ಲಿ ಜಯ ಕರ್ನಾಟಕ ಸಂಘಟನೆಯಿಂದ ಅದ್ಧೂರಿ ಕನ್ನಡ ರಾಜ್ಯೋತ್ಸವ, ಉಚಿತ ಆರೋಗ್ಯ ತಪಾಸಣೆ

ತುಮಕೂರು:- ನವಂಬರ್ ತಿಂಗಳೆಂದರೆ ನಾಡು-ನುಡಿಯ ನೆಲ ಜಲ ಭಾಷೆಯ ರಕ್ಷಣೆಗೆ ತಿಂಗಳುಪೂರ ಕನ್ನಡ ರಾಜ್ಯೋತ್ಸವ ದಿನಾಚರಣೆ ಮಾಡುವುದು ವಾಡಿಕೆಯಾಗಿದ್ದು ಈ ಹಿನ್ನೆಲೆಯಲ್ಲಿ ತುಮಕೂರು ನಗರದ ಮರಳೂರು ದಿಣ್ಣೆಯ ಯಾದವ ನಗರದಲ್ಲಿ ತುಮಕೂರು ಜಿಲ್ಲಾ ಜಯ ಕರ್ನಾಟಕ ಸಂಘಟನೆ ವತಿಯಿಂದ ಅದ್ದೂರಿ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡಲಾಯಿತು.

 

 

 

 

 

ರೇಷ್ಮೆ ಇಲಾಖೆ ಉಪ ನಿರ್ದೇಶಕರ ಕಛೇರಿ ಎದುರು ಧ್ವಜ ಸ್ತಂಭ ನೆಟ್ಟು ಕನ್ನಡ ಬಾವುಟವನ್ನು ಹಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಇಮ್ರಾನ್ ಅಹಮದ್ ಅವರ ನೇತೃತ್ವದಲ್ಲಿ ರೆಡ್ ಸರ್ಕಲ್ ರಕ್ತ ಕೇಂದ್ರ ಆರ್ಮ್ಸ್ ವೈಡ್ ಓಪನ್ ಚಾರಿಟೇಬಲ್ ಟ್ರಸ್ಟ್ ಇವರ ಸಕಯೋಗದೊಂದಿಗೆ ಉಚಿತ ರಕ್ತದಾನ, ನೇತ್ರದಾನ, ರಕ್ತದೊತ್ತಡ, ಮಧುಮೇಹ ಹಾಗೂ ಕಣ್ಣು ತಪಾಸಣಾ ಶಿಬಿರವನ್ನು ಆಯೋಜನೆ ಮಾಡಲಾಗಿತ್ತು.

 

 

 

 

 

ಇದೇ ವೇಳೆ ಜಿಲ್ಲಾಧ್ಯಕ್ಷ ಅನಿಲ್ ನಾಯಕ ವಿ.ಅವರು ಮಾತನಾಡಿ ಕನ್ನಡಪರ ಸಂಘಟನೆಗಳು ರಾಜ್ಯೋತ್ಸವ ಆಚರಣೆ ಜೊತೆ ಜೊತೆಗೆ ಸಮಾಜಮುಖಿ ಕೆಲಸ ಮಾಡಲು ಮುಂದಾಗಿದ್ದು ಯಾದವನಗರದಲ್ಲಿ ನಡೆದ ರಾಜ್ಯೋತ್ಸವ ದಿನಾಚರಣೆ ಹಿನ್ನೆಲೆಯಲ್ಲಿ ಈ ಭಾಗದ ಸಾರ್ವಜನಿಕರಿಗೆ ಉಚಿತ ರಕ್ತದಾನ, ನೇತ್ರ ತಪಾಸಣೆ, ರಕ್ತದೊತ್ತಡ, ಮಧುಮೇಹ ಸೇರಿದಂತೆ ಇತರೆ ಖಾಯಿಲೆಗಳ ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆ ನೆರವು ನೀಡಲಾಗಿದ್ದು ಈ ಎಲ್ಲಾ ಕಾರ್ಯಕ್ರಮಗಳನ್ನು ಆಯೋಜಿಸಿರುವ ನಮ್ಮ ಸಂಘಟನೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಇಮ್ರಾನ್ ಅಹಮ್್ಮದ್ ಸಮಾಜ ಸೇವೆ ಅಮೋಘವಾಗಿದೆ ಎಂದರು.

 

 

 

 

 

 

ಈ‌ ಸಂದರ್ಭದಲ್ಲಿ ಮರಳು ದಿಣ್ಣೆ ಯಾದವ ನಗರದ ಬಡ‌ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಹಾಗೂ ಅನ್ನ ಸಂತರ್ಪಣಾ ಕಾರ್ಯಕ್ರಮ ಏರ್ಪಡಿಸಲಾಯಿತು.

 

 

 

 

ಈ ಸಂದರ್ಭದಲ್ಲಿ ಜಯ ಕರ್ನಾಟಕ ಸಂಘಟನೆಯ ರಾಜ್ಯ ಸಂಘಟನಾ ಸಂಚಾಲಕರಾದ ಸಿ.ಪಿ.ಸುಧೀರ್, ರಾಜ್ಯ ಮಹಿಳಾ ಘಟಕದ ದಿವ್ಯಾ ಸೋಮಶೇಖರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಸ್ವಾಮಿ, ಜಿಲ್ಲಾ ಜಂಟಿ ಕಾರ್ಯದರ್ಶಿ ವಕೀಲರಾದ ಬಿ.ಟಿ.ಶ್ರೀನಿವಾಸ್, ದಿಕ್ಷೀತ್ ಜಿಲ್ಲಾ ಕಾರ್ಯಧ್ಯಕ್ಷರು, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಇಮ್ರಾನ್ ಅಹಮದ್, ತುಮಕೂರು ನಗರ ಅಧ್ಯಕ್ಷ ಜಯಣ್ಣ, ಜಿಲ್ಲಾ ಕಮಿಟಿಯ ದೀಪಕ್, ದೇವರಾಜು, ಪ್ರಮೋದ್, ನವ ದೀಪು, ಹಿತೇಶ್, ಚಾಂದ ಪಾಷಾ, ವಕೀಲ ಶಿವಕುಮಾರ್, ಧನುಷ್ ಗೌಡ, ನಾಗಭೂಷಣ್ ಸುರೇಶ್, ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!