ತುಮಕೂರು : ಸಹೋದರರ ನಡುವೆ ಗಲಾಟೆ ವೇಳೆ ಪೊಲೀಸರಿಗೆ ಬಂದ ದೂರು ಮೇರೆಗೆ ಗ್ರಾಮಕ್ಕೆ ತೆರಳಿದ ಪೊಲೀಸರ 112 ವಾಹನವನ್ನೇ ಓಡಿಸಿಕೊಂಡು ವ್ಯಕ್ತಿಯೊಬ್ಬ ಪರಾರಿಯಾದ ಘಟನೆ ವರದಿಯಾಗಿದೆ.
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ನಾರನಹಳ್ಳಿಯಲ್ಲಿ ಘಟನೆ ನಡೆದಿದ್ದು 112 ವಾಹನವನ್ನು ಕದ್ದಿದ್ದ ಮುನಿಯ. ಮುನಿಯ ಹಾಗೂ ಆತನ ಸಹೋದರರ ನಡುವೆ ಗಲಾಟೆ ನಡೆಯುತ್ತಿದ್ದ ವೇಳೆ ಗ್ರಾಮಸ್ಥರು ನೀಡಿದ ದೂರಿನ ಮೇರೆಗೆ ಗ್ರಾಮಕ್ಕೆ ತೆರಳಿದ ಪೊಲೀಸರ ವಾಹನವನ್ನು ಮುನಿಯ ತೆಗೆದುಕೊಂಡು ಪರಾರಿಯಾಗಿದ್ದ.
ಪೊಲೀಸರು ನಿಲ್ಲಿಸಿದ್ದ ವಾಹನದ ಹಿಂಬದಿಯ ಗಾಜು ಹೊಡೆದ ಮುನಿಯ ಒಡೆದ ಗಾಜು ನೋಡಲು ಹೋದ ಪೊಲೀಸರನ್ನು ಯಾಮಾರಿಸಿ ವೇಗವಾಗಿ ವಾಹನವನ್ನು ಓಡಿಸಿಕೊಂಡು ಎಸ್ಕೇಪ್ ಆಗಿದ್ದ ಆರೋಪಿ. ಸತತ ಮೂರು ಗಂಟೆಗಳ ಹುಡುಕಾಟದ ವೇಳೆ ವಾಹನವನ್ನು ಪತ್ತೆ ಹಚ್ಚಿದ ಪೊಲೀಸರು ತುಮಕೂರು ತಾಲೂಕಿನ ಹೆಬ್ಬೂರು ಬಳಿ ವಾಹನವು ಪತ್ತೆಯಾಗಿದ್ದು.
ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಸಿ.ಎಸ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಸಹೋದರರಿಬ್ಬರ ಗಲಾಟೆ ವೇಳೆ ವಾಹನದೊಂದಿಗೆ ಪರಾರಿಯಾಗಿದ್ದ ಆರೋಪಿ ಮುನಿಯನನ್ನು ಪೊಲೀಸರು ವಶಕ್ಕೆ ಪಡೆದಿದ್ದು ಹೆಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.