ಕರುನಾಡ ವಿಜಯ ಸೇನೆ ವತಿಯಿಂದ ಕರುನಾಡ ಸಾಂಸ್ಕೃತಿಕ ಹಬ್ಬ ಆಯೋಜನೆ_ರಾಜ್ಯಾಧ್ಯಕ್ಷ ಹೆಚ್.ಎನ್. ದೀಪಕ್ ಹೇಳಿಕೆ.
ತುಮಕೂರು: ಮುಂಬರುವ ನವಂಬರ್ 5 ಮತ್ತು 6 ರಂದು ತುಮಕೂರಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಕರುನಾಡ ವಿಜಯಸೇನೆ ವತಿಯಿಂದ “ಕರುನಾಡ ಸಾಂಸ್ಕೃತಿಕ ಹಬ್ಬ” ಆಯೋಜಿಸಲಾಗಿದೆಂದು “ಕರುನಾಡ ವಿಜಯ” ಸೇನೆಯ ರಾಜ್ಯಾಧ್ಯಕ್ಷ ಹೆಚ್ ಎನ್ ದೀಪಕ್ ತಿಳಿಸಿದ್ದಾರೆ.
ತುಮಕೂರಿನ ಖಾಸಗಿ ಹೋಟೆಲ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ನವಂಬರ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕರಾದ ರಾಜೇಶ್ ಕೃಷ್ಣನ್ ಹಾಗೂ ಅರ್ಜುನ್ ಜನ್ಯ ರವರ ತಂಡದಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಇನ್ನು ಕಾರ್ಯಕ್ರಮದಲ್ಲಿ ರಾಜ್ಯ ಹಾಗೂ ಜಿಲ್ಲೆಯ ಹಲವಾರು ಕಲಾವಿದರು ಸೇರಿ ಸಂಗೀತ ಕಾರ್ಯಕ್ರಮ ಹಾಗೂ ಹಾಸ್ಯ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದರು.
ಇನ್ನು ಕಾರ್ಯಕ್ರಮದಲ್ಲಿ ಜಿಲ್ಲೆಯ ಸಾಹಿತಿಗಳು ಹಾಗೂ ರಾಜಕೀಯ ಮುಖಂಡರು ಸೇರಿದಂತೆ ಸುಮಾರು 25 ಸಾವಿರಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆಯಿದ್ದು ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ, ಕರೋನಾ ಬಂದಾಗಿನಿಂದ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ನಡೆಸಲು ಆಗಿರಲಿಲ್ಲ ಹಾಗಾಗಿ ಕರುನಾಡ ವಿಜಯಸೇನೆ ವತಿಯಿಂದ ಕರುನಾಡ ಸಾಂಸ್ಕೃತಿಕ ಹಬ್ಬವನ್ನು ಆಯೋಜಿಸುವ ಮೂಲಕ ಈ ಬಾರಿಯ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆಸಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ” ಕರುನಾಡ ವಿಜಯ ಸೇನೆಯ” ರಾಜ್ಯ ಸಲಹೆಗಾರರಾದ ಸುದೀಪ್ ಕುಮಾರ್, ರಾಜ ಉಪಾಧ್ಯಕ್ಷರಾದ ಸೋಮಶೇಖರ್, ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷ ಅರುಣ್ ಕುಮಾರ್, ಜಿಲ್ಲಾ ಗೌರವಾಧ್ಯಕ್ಷರಾದ ಮಾದೇವಯ್ಯ, ರಂಜನ್ ಗಂಗಾಧರ್, ಹರೀಶ್, ಯಾಸ್ಮಿನ್ ತಾಜ್, ಮನ್ಸೂರ್ ಗಿರೀಶ್ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.