ತುಮಕೂರು ವಿವಿ ಎಡವಟ್ಟು ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಸಾಂಬಾರು ಬಡಿಸಲು ತೆಂಗಿನಕಾಯಿ ಚಿಪ್ಪೇ ಗತಿ …..!
ತುಮಕೂರು ತುಮಕೂರು ವಿಶ್ವವಿದ್ಯಾನಿಲಯಕ್ಕೆ ಒಳಪಟ್ಟ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ (ಎಸ್.ಸಿ. ಮತ್ತು ಎಸ್.ಟಿ ಹಾಸ್ಟಲ್) ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳಿಗೆ ತೆಂಗಿನಕಾಯಿ ಚಿಪ್ಪಿನಲ್ಲಿ ಸಾಂಬಾರು ಬಡಿಸಿರುವ ಅಮಾನವೀಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ವಾರ ರಾತ್ರಿ ಊಟ ನೋಡುವಾಗ ವಿದ್ಯಾರ್ಥಿಗಳಿಗೆ ಸೌಟಿನಲ್ಲಿ ಚಟ್ನಿ ಬಡಿಸುವ ಬದಲು ತೆಂಗಿನಕಾಯಿ ಚಿಪ್ಪಿನಲ್ಲಿ ಬಡಿಸಿರುವ ಆರೋಪ ವಿದ್ಯಾರ್ಥಿಗಳಿಂದ ಕೇಳಿಬಂದಿದೆ. ಈ ವಿದ್ಯಾರ್ಥಿಗಳು ಮರ್ಯಾದಗೆ ಅಂಜಿ ಮತ್ತು ಹಾಸ್ಟಲ್ ಸಿಬ್ಬಂದಿಗಳಿಂದ ತೊಂದರೆಯಾಗಬಹುದೇನೋ ಎಂಬ ಭಯದಿಂದ ಎಲ್ಲೂ ಹೇಳಿಕೊಳ್ಳದೇ ಪಾಪ ಇದೀಗ ತಮ್ಮ ನೋವನ್ನು ಹೊರ ಹಾಕಿದ್ದಾರೆ.
ಈ ಹಾಸ್ಟಲ್ ವಿರುದ್ಧ ಹಲವಾರು ದಿನಗಳಿಂದ ವಿವಿಧ ರೀತಿಯಲ್ಲಿ ಸಾಲು ಸಾಲು ಆರೋಪಗಳು ಕೇಳಿ ಬರುತ್ತಿವೆ ಆದರೂ ಹಾಸ್ಟೆಲ್ ವಾರ್ಡನ್ ವಿದ್ಯಾರ್ಥಿಗಳ ಮೇಲೆ ಧಮಕಿ ಹಾಕಿ ಬಾಯಿ ಮುಚ್ಚಿಸುತ್ತಿದ್ದಾರೆ ಎನ್ನುವ ಆರೋಪ ಸಹ ಕೇಳಿ ಬಂದಿದ್ದು ಎಲ್ಲದಕ್ಕೂ ವಿವಿ ಕಡೆ ಬೊಟ್ಟು ಮಾಡಿ ತೋರಿಸಲಾಗುತ್ತಿದೆ.
ನಾಗರಿಕ ಸಮಾಜ ನಾಚುವಂತೆ ಅಮಾನವೀಯವಾಗಿ ನಡೆದಿರುವ ಈ ಘಟನೆಗೆ ಅಸಲೀಕರಣ ಏನು ಎಂಬುದಕ್ಕೆ ತುಮಕೂರು ವಿವಿ ಕುಲಪತಿಗಳೇ, ಉತ್ತರಿಸಬೇಕಿದೆ….??
ಇನ್ನು ಹಾಸ್ಟೆಲ್ ನಿರ್ವಹಣೆಗಾಗಿ ಸಾಕಷ್ಟು ಅನುದಾನ ಬರುತಿದ್ದರು ಸಹ ಬಹು ಮುಖ್ಯವಾಗಿ ಎಸ್ಸಿ ಎಸ್ಟಿ ವಿದ್ಯಾರ್ಥಿಗಳಿಗೆ ಹಲವು ಮೂಲಭೂತ ಸೌಕರ್ಯ ಕಲ್ಪಿಸಲು ಸರ್ಕಾರ ಪ್ರತಿನಿತ್ಯ ಒಂದಲ್ಲ ಒಂದು ಕಾರ್ಯಕ್ರಮಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳ ರಕ್ಷಣೆಗೆ ಮುಂದಾಗುತ್ತಿದೆ ಆದರೆ ವಿದ್ಯಾರ್ಥಿಗಳಿಗೆ ಊಟ ಬಡಿಸಲು ತೆಂಗಿನಕಾಯಿ ಚಿಪ್ಪು ಬಳಸಿ ಸಾರು ಬಡಿಸಿರುವುದರ ಹಿಂದೆ ಇರುವ ಮರ್ಮವಾದರೂ ಏನು ಎಂಬುದನ್ನು ಇನ್ನಾದರೂ ವಿವಿ ಅಧಿಕಾರಿಗಳು ಸ್ಪಷ್ಟಪಡಿಸಬೇಕಿದೆ.