ದಿನಾಂಕ 18 ಮಂಗಳವಾರದಂದು ಹಿಂದೂಪರ ಸಂಘಟನೆಗಳ ಒಕ್ಕೂಟದ ಹೆಸರಿನಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಿ ದುರುದ್ದೇಶದಿಂದ ನಗರ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್ ರವರ ಮೇಲೆ ಹಳೆ ಮಾರ್ಕೆಟ್ ನಲ್ಲಿ ಮಾಲ್ ನಿರ್ಮಾಣದ ವಿಚಾರವಾಗಿ ಇಲ್ಲ ಸಲ್ಲದ ರೀತಿ ಆರೋಪ ಮಾಡಿರುವುದು ಖಂಡನಾರ್ಹ. ಹಳೆ ಮಾರ್ಕೆಟ್ ನಲ್ಲಿ ಮಾಲ್ ನಿರ್ಮಾಣದ ಕಾಮಗಾರಿ ಸ್ಥಗಿತದ ಹಿಂದೆ ನಗರ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್ ರವರ ಮತ್ತು ಬಿಜೆಪಿಯ ಹೋರಾಟದ ಶ್ರಮವಿದೆ ಜೊತೆಗೆ ಕಾನೂನಾತ್ಮಕವಾಗಿ ಈ ಒಂದು ಕಾಮಗಾರಿಗೆ ತಡೆ ನೀಡಲು ಶಾಸಕರು ತಮ್ಮ ಸ್ವಂತ ಖರ್ಚಿನಿಂದ ಬೆಂಗಳೂರಿನಲ್ಲಿ ಪ್ರತಿಷ್ಠಿತ ಲಾಯರ್‌ಗಳನ್ನು ನೇಮಿಸಿ ಕಾಮಗಾರಿ ಸ್ಥಗಿತಗೊಳ್ಳುವಂತೆ ಮಾಡಿರುತ್ತಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಮಾನ್ಯ ಶಾಸಕರು ಸುಮಾರು 7-8 ಜನ ಬೆಂಗಳೂರಿನ ಅನೇಕ ಪ್ರತಿಷ್ಠಿತ ಉಚ್ಛ ನ್ಯಾಯಾಲಯುದ ವಕೀಲರನ್ನ ಸಂಪರ್ಕಿಸಿ, ತದನಂತರ ಈ ವಿಷಯಕ್ಕೆ ಸಂಬಂಧಪಟ್ಟಂತೆ ಒಬ್ಬ ಅನುಭವಿ ಹಾಗೂ ನಿವೃತ್ತ ನ್ಯಾಯಾಧೀಶರು ಆಗಿರುವಂತಹ ಹೆಸರಾಂತ ವಕೀಲರಾದ ಶ್ರೀ ನರಸಿಂಹನ್ ರವರ ಮುಖಾಂತರ ದಾವೆಯನ್ನ ಹೂಡಲು ಮುಂದಾಗುತ್ತಾರೆ. ಈ ನಿಟ್ಟಿನಲ್ಲಿ ಸ್ಥಳೀಯ ವಿನಾಯಕನಗರ ನಿವಾಸಿಗಳಾದ ಸುಮಾರು 15 ಜನರಿಂದ ಅಗತ್ಯ ದಾಖಲಾತಿಗಳನ್ನ ಪಡೆದು ಅವರ ಹೆಸರಿನಲ್ಲಿ ಬೆಂಗಳೂರು ಉಚ್ಛ ನ್ಯಾಯಾಲಯದಲ್ಲಿ ದಿನಾಂಕ:09-09-2024 ರಂದು ತಕಾರಾರು ಅರ್ಜಿಯನ್ನು (WP-25407/2024) ಸಲ್ಲಿಸಲಾಗುತ್ತದೆ. ಆ ನಂತರ ಘನ ಉಚ್ಛ ನ್ಯಾಯಾಲಯವು ಕೇಸ್‌ನ್ನು ದಾಖಲಿಸಿಕೊಂಡು (ಕೇಸ್ ನಂ: WP-24666/2024) ಪ್ರತಿವಾದಿಗಳಾದ ಆರ್.ಹೆಚ್.ಕನ್ಸ್‌ಟ್ರಕ್ಷನ್ಸ್, ಟೂಡಾ, ತುಮಕೂರು ಎ.ಪಿ.ಎಂ.ಸಿ, ತುಮಕೂರು ಮಹಾನಗರಪಾಲಿಕೆ, ತುಮಕೂರು ಸ್ಮಾರ್ಟ್‌ಸಿಟಿ ಇವರುಗಳಿಗೆ ಹ್ಯಾಂಡ್‌ಸಮನ್ಸ್‌ನ್ನ ಜಾರಿ ಮಾಡುತ್ತದೆ. ಈ ಹ್ಯಾಂಡ್‌ಸಮನ್ಸ್‌ಗಳನ್ನ ಕುದ್ದು ಶಾಸಕರ ಕಛೇರಿಯ ಸಿಬ್ಬಂದಿಯವರೆ ತಲುಪಿಸಿರುತ್ತಾರೆ. ಪ್ರಮುಖವಾಗಿ ಆರ್.ಹೆಚ್ ಕನ್ಸ್‌ಟ್ರಕ್ಷನ್ಸ್ ರವರಿಗೆ ಶಾಸಕರ ಕಛೇರಿಯ ಸಿಬ್ಬಂದಿಯೆ ಕೇರಳವರೆಗೂ ಹೋಗಿ ನಂತರ ಅಲ್ಲಿ ಸಿಗದಿದ್ದಾಗ ಮತ್ತೆ ಮಂಗಳೂರಿಗೆ ತೆರಳಿ ಅಲ್ಲಿ ತಲುಪಿಸಿರುತ್ತಾರೆ. ದಿನಾಂಕ:18-12-2024 ರಂದು ಈ ದಾವೆಯ ಸಂಬಂಧ ಪ್ರಕರಣದ ಹಿಯರಿಂಗ್ ನಡೆದಿದ್ದು, ಮುಂದಿನ ಹಿಯರಿಂಗ್ ದಿನಾಂಕ ಪೆಂಡಿಂಗ್ ಇರುತ್ತದೆ.
ಈ ಎಲ್ಲ ಮಾಹಿತಿಗಳು ತಿಳಿದಿದ್ದರು ಕೂಡ ಶಾಸಕರ ಹೆಸರಿಗೆ ಮಸಿ ಬಳಿಯುವ ಉದ್ದೇಶದಿಂದ ಕೆಲವು ನಕಲಿ ಹಿಂದುವಾದಿಗಳು ಅವರ ವಿರುದ್ಧ ಸುಖಾ-ಸುಮ್ಮನೆ ಆರೋಪ ಮಾಡಿರುತ್ತಾರೆ. ಲ್ಯಾಂಡ್ ಜಿಹಾದ್ ಎಂದು ಆರೋಪಿಸುವ ಇದೇ ನಕಲಿ ಹಿಂದು ವಾದಿಗಳು ತುಮಕೂರು ನಗರದ ಕೆಲವು ಪ್ರತಿಷ್ಠಿತ ಜಾಗಗಳಲ್ಲಿ ಕೇಸರಿ ಧ್ವಜವನ್ನು ಕಟ್ಟಿ ಹಣ ಸೆಟಲ್ಮೆಂಟ್ ಮಾಡಿಕೊಂಡಿರುವುದು ತುಮಕೂರಿನ ನಾಗರೀಕರ ಮುಂದೆ ಜಗಜ್ಜಾಹಿರಾಗಿದೆ. ಇಂತಹ ನಕಲಿಗಳು ಮಾರ್ಕೆಟ್ ವಿಚಾರದಲ್ಲಿ ಕೇಸ್ ನಡೆಸುವ ಉದ್ದೇಶದಿಂದ ಸುತ್ತಮುತ್ತಲಿನ ಬಡಾವಣೆಯವರ ಬಳಿ ಹಣ ಸಂಗ್ರಹ ಮಾಡಿ ಜೇಬು ತುಂಬಿಸಿಕೊಳ್ಳುವ ಉದ್ದೇಶವನ್ನು ಇಟ್ಟುಕೊಂಡಿದ್ದರು ಆದರೆ ಸ್ಥಳೀಯರಿಗೆ ಶಾಸಕರ ಹೋರಾಟ ಅರಿವಿಗೆ ಬಂದ ನಂತರ ನಕಲಿ ಹಿಂದುವಾದಿಗಳಿಗೆ ಸ್ಪಂದಿಸುವುದನ್ನು ನಿಲ್ಲಿಸಿದರು ಈ ಹೋರಾಟದಿಂದ ತಮಗೇನು ಗಿಟ್ಟುವುದಿಲ್ಲ ಎಂದು ತಿಳಿದ ನಂತರ, ಈ ವಿಚಾರವಾಗಿ ಮಾಹಿತಿಯೇ ಇಲ್ಲದ ಪ್ರಮೋದ್ ಮುತಾಲಿಕರನ್ನು, ತುಮಕೂರಿನ ನಾಗರಿಕರೇ ಅಲ್ಲದವರನ್ನು ಜೊತೆಯಲ್ಲಿಟ್ಟುಕೊಂಡು ಈ ರೀತಿ ಆರೋಪ ಮಾಡಿರುವುದು ನಿಜಕ್ಕೂ ಖಂಡನರ್ಹ.
ಮನ್ನಣೆ ದಾಹಕ್ಕೆ ಹಣದಾಸೆಗೆ ಇಡೀ ಸಮಾಜದ ನಾಗರೀಕರನ್ನು ದಾರಿ ತಪಪಿಸುತ್ತಿರುವ ಸಮಾಜದಲ್ಲಿ ಎಲ್ಲೂ ಸಲ್ಲದ ವ್ಯಕ್ತಿಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಬೇಡ. ನಮ್ಮ ಹೋರಾಟ ಅಚಲ ಎಂದು ಟಿ.ಹೆಚ್.ಹನುಮಂತರಾಜು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.