ತುಮಕೂರು; ದೇಶದಲ್ಲಿ ಬಿಜೆಪಿ ಪಕ್ಷ ಹಿಂದುಳಿದವರಿಗೆ ಅಲ್ಪಸಂಖ್ಯಾತರಿಗೆ ಶೋಷಿತರಿಗೆ ಮೋಸ ಮಾಡಿ ಅಧಿಕಾರಕ್ಕೆ ಬಂದಿದ್ದು ರಾಜ್ಯದಲ್ಲಿ ಅಹಿಂದ ವರ್ಗವನ್ನು ಸಂಘಟನೆ ಮಾಡಿದ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಬಡವರ ಪರವಾಗಿದ್ದಾರೆ ಅದೇ ರೀತಿಯಾಗಿ ಇದೇ ಅಹಿಂದ ವರ್ಗ ದೇಶಾದ್ಯಂತ ಸಮರ್ಪಕವಾಗಿ ಸಂಘಟನೆಯಾದರೆ ಸಿದ್ದರಾಮಯ್ಯನವರು ಪ್ರಧಾನಿ ಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಕರ್ನಾಟಕ ಅಲ್ಪಸಂಖ್ಯಾತರ ಹಿಂದುಳಿದವರ ದಲಿತರ ಒಕ್ಕೂಟದ ತುಮಕೂರು ಜಿಲ್ಲಾಧ್ಯಕ್ಷ ಎ ಎಮ್ ಲಿಂಗರಾಜು ಅವರು ತಿಳಿಸಿದರು.
ನಗರದ ಪತ್ರಿಕೆ ಭವನದಲ್ಲಿ ಈ ಕುರಿತು ಸುದ್ದಿಗೋಷ್ಠಿ ಮಾಡಿದವರು ಅಹಿಂದ ಎಂಬ ಹೆಸರು ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ಚಾಲ್ತಿಗೆ ಬಂದಂತದ್ದು ಸರ್ವರಿಗೂ ಸಮಪಾಲು ಸರ್ವರಿಗೂ ಸಮ ಬಾಳು ಎನ್ನುವ ಮಿತಿ ವಾಕ್ಯದಂತೆ ಹಿಂದುಳಿದ ಅಲ್ಪಸಂಖ್ಯಾತ ದಲಿತರ ಕಲ್ಯಾಣಕ್ಕಾಗಿ ಆರ್ ಎಲ್ ಜಾಲಪ್ಪ ಸೇರಿದಂತೆ ಇತರೆ ಮುಖಂಡರು ಅಹಿಂದ ಸಂಘಟನೆಯನ್ನು ಕಟ್ಟಿ ಬೆಳೆಸಿದಕ್ಕೆ ಸಿದ್ದರಾಮಯ್ಯನವರು ಒಂದು ರೀತಿಯ ರೂಪು ರೇಷಕೊಟ್ಟು ಸೋಷಿತ ವರ್ಗವನ್ನು ಸಂಘಟಿಸುವಲ್ಲಿ ಸಮರ್ಥರಾಗಿದ್ದಾರೆ ಎಂದು ತಿಳಿಸಿದರು.
ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಬೆಲೆ ಏರಿಕೆ ಮಾಡಿ ಶೋಷಿತರು ಬಡವರು ಮತ್ತು ಹಿಂದುಳಿದವರ ಅಲ್ಪಸಂಖ್ಯಾತರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ ಬಿಜೆಪಿ ಪಕ್ಷಕ್ಕಾಗಿ ಹಿಂದುಳಿದ ವರ್ಗದವರು ಮಾಡಿದ್ದು ಆರ್ ಎಸ್ ಎಸ್ ಗರಡಿಯಲ್ಲಿ ಪಳಗಿ ಸಂಘಟನೆ ಮಾಡಿದ್ದಾರೆ ಅಂತಹದರಲ್ಲಿ ಈಶ್ವರಪ್ಪರೂ ಕೂಡ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ಅಪೇಕ್ಷೆ ಪಟ್ಟಿದ್ದಕ್ಕೆ ಸ್ವಪಕ್ಷದವರಿಗೆ ಟಿಕೆಟ್ ನೀಡಲಾಗದ ಬಿಜೆಪಿ ಸರ್ಕಾರ ಹಿಂದುಳಿದ ವರ್ಗದವರ ರಕ್ಷಣೆಯನ್ನು ಹೇಗೆ ಮಾಡುತ್ತಾರೆ ಎಂದು ದೂರಿದರು.
ಕರ್ನಾಟಕ ರಾಜ್ಯ ಅಹಿಂದ ಒಕ್ಕೂಟದ ಉಪಾಧ್ಯಕ್ಷ ಬಿ ಶಿವಣ್ಣ ಅವರು ಮಾತನಾಡಿ 1.2 ಲಕ್ಷ ಮತಗಳಿಂದ ಮುದ್ದಹನುಮೇಗೌಡ ಈ ಭಾರಿ ತುಮಕೂರಿನಲ್ಲಿ ಜಯ ಗಳಿಸಲಿದ್ದು ಅಹಿಂದ ವರ್ಗದವರು ಗ್ಯಾರಂಟಿ ಮತಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಗೆಲವು ತಂದು ಕೊಡಲಿದ್ದು ಸಿದ್ದರಾಮಯ್ಯ ಬೆಂಬಲಿತವಾಗಿ ಹಾಗೂ ನಿಶ್ಚಿತವಾಗಿ ಬಿಳಲಿದೆ ಎಂದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯದೊಂದಿಗೆ ಅಂಹಿಂದ ಮತಗಳಿಂದ ರಾಜ್ಯದಲ್ಲಿ ಸರ್ಕಾರ ರಚನೆಯಾಗಿದೆ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿರುವ ಸೋಮಣ್ಣ ಈಗಾಗಲೇ ಮೂರಿ ಭಾರಿ ಸೋತು ತುಮಕೂರಿಗೆ ಬಂದವರೆ ಅವರು ಹೊರಗಿನವರು ಹಾಗಾಗಿ ತುಮಕೂರಿನಲ್ಲಿ ಅಹಿಂದ ಮತಗಳು 80%ರಷ್ಟು ಮತಗಳು ಮುದ್ದಹನುಮೇಗೌಡರಿಗೆ ಬಿಳಲಿವೆ ಎಂದರು.
ಮುದ್ದಹನುಮೇಗೌಡ ಅವರು ತುಮಕೂರು ಅಭಿವೃದ್ಧಿ ಮಾಡಿದ್ದಾರೆ ಹಾಗಾಗಿ ರಾಜ್ಯದಲ್ಲಿ 25 ಕ್ಕೂ ಹೆಚ್ಚು ಸೀಟ್ ಗಳು ಕಾಂಗ್ರೆಸ್ ಪಕ್ಷ ಗೆಲ್ಲಲಿದೆ ಬಿಜೆಪಿ ಪಕ್ಷ ಅಭಿವೃದ್ಧಿ ಹೆಸರಲ್ಲಿ ಸುಳ್ಳು ಹೇಳಿ ಜನರಿಗೆ ಮೋಸ ಮಾಡುವ ಮೂಲಕ ಅಧಿಕಾರ ಹಿಡಿದಿದ್ದು ಈ ಭಾರಿ ಜನರು ಸರಿಯಾಗಿ ಬುದ್ದಿ ಕಲಿಸಲಿದ್ದಾರೆ ಎಂದರು.
ಅಹಿಂದ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬೀರಲಿಂಗ ಪೂಜಾರಿ ಮಾತನಾಡಿ ಅಹಿಂದ ವರ್ಗಗಳ ಯುವಕರು ಉದ್ಯೋಗ ವಿಲ್ಲದೆ ಶೈಕ್ಷಣಿಕ ರಾಜಕೀಯ ಆರ್ಥಿಕ ಸಾಮಾಜಿಕ ಸಧೃಡವಾಗಿ ಬೆಳಸುವುದು ಅಹಿಂದ ಉದ್ದೇಶ ಅವರಿಗಾಗಿ ತರಬೇತಿ ಶಿಬಿರ ಉದ್ಯೋಗ ಶಿಬಿರ ಆಯೋಜನೆ ಮಾಡಿಕೊಂಡು ಬರುತ್ತಿದ್ದು ಇದ್ದರಿಂದ ಜಾಗೃತ ಅಹಿಂದ ವರ್ಗದವರು ಮುಂದುವರೆದಿದ್ದಾರೆ ಮಾನ್ಯ ಸಿದ್ದರಾಮಯ್ಯ ಅವರು ಕೊಟ್ಟ ಅಹಿಂದ ಅನ್ನುವ ಅಸ್ತ್ರ ಕೊಟ್ಟಿದ್ದಾರೆ ಇವರ ನಂತರ ಯಾರು ಇದಕ್ಕೆ ನಾಯಕ ಎಂಬುದು ಕಾಡುತ್ತಿದೆ ಹಾಗಾಗಿ ಈ ನಾಯಕರ ಆಯ್ಕೆಗಾಗಿ ಚುನಾವಣಾ ಸಂದರ್ಭದಲ್ಲಿ ಜಾಗೃತ ಗೊಳಿಸುವುದು ಅನಿರ್ವಾಯ ವಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಹಿಂದ ಒಕ್ಕೂಟದ ಕಾರ್ಯದರ್ಶಿ ಎಚ್ ಎಂ ಕೃಷ್ಣಪ್ಪ, ರಾಜ್ಯ ಮಹಿಳಾ ಉಪಾಧ್ಯಕ್ಷರಾದ ಸುಕನ್ಯಾ ಕುಮಾರಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಲಕ್ಷ್ಮಿಕಾಂತಯ್ಯ, ಕೊರಟಗೆರೆ ತಾಲೂಕು ಅಧ್ಯಕ್ಷರಾದ ನಂಜುಂಡಯ್ಯ, ಡಿ ಸುಮಾ ,ಪ್ರಕಾಶ್, ಆದಿಲ್, ನಟರಾಜು ಶಿವಕುಮಾರ್, ತಮರ್ ತಾಕ್ ರೆಷ್ಮಾ ಭಾನು ಕುಮಾರಸ್ವಾಮಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.