ಕೆ.ಎಸ್.ಆರ್.ಟಿ.ಸಿ. ಬಸ್ ಡಿಕ್ಕಿ ಹೊಡೆದು ಇಬ್ಬರು ಮಹಿಳೆಯರ ಧಾರಣ ಸಾವು, ತುಮಕೂರು ಬಸ್ ನಿಲ್ದಾಣದಲ್ಲಿ ಘಟನೆ

ತುಮಕೂರು – ದೇವಸ್ಥಾನಕ್ಕೆ ತೆರಳು  ಬಸ್ಸಿಗಾಗಿ ಕಾಯುತ್ತಿದ್ದ ಇಬ್ಬರು ಮಹಿಳೆಯರಿಗೆ ಬಸ್‌ ನಿಲ್ದಾಣದಲ್ಲಿಯೇ ಬಸ್ ಗುದ್ದಿ ಸ್ಥಳದಲ್ಲೇ  ಮೃತಪಟ್ಟಿರುವ ಘಟನೆ ತುಮಕೂರು ಸರ್ಕಾರಿ ಬಸ್‌ ನಿಲ್ದಾಣದಲ್ಲಿ ಸಂಭವಿಸಿದೆ.

 

 

 

 

 

ಮಂಡ್ಯ ಜಿಲ್ಲೆಯ, ಶ್ರೀರಂಗಪಟ್ಟಣ ತಾಲೂಕಿನ, ಕೆ.ಶೆಟ್ಟಿಹಳ್ಳಿ ಗ್ರಾಮದ ಆರು ಜನ ಮಹಿಳೆಯರು ತುಮಕೂರಿನ ಗೊರವನಹಳ್ಳಿ ಶ್ರೀ ಲಕ್ಷ್ಮಿದೇವಸ್ಥಾನಕ್ಕೆ  ಹೋಗಲು ಆಗಮಿಸಿದ್ದ ಮಹಿಳೆಯರು ತುಮಕೂರಿನ ಕೆ.ಎಸ್.ಆರ್.ಟಿ.ಸಿ. ಬಸ್‌ ನಿಲ್ದಾಣದಲ್ಲಿ ಗೊರವನಹಳ್ಳಿ ಕಡೆಗೆ ಹೋಗುವ ಸರ್ಕಾರಿ ಬಸ್‌ ಗಾಗಿ ಕಾದು ಕುಳಿತಿದ್ದರು ಎನ್ನಲಾಗಿದೆ.

 

 

 

 

 

 

 

ಬಸ್ ನಿಲ್ದಾಣಕ್ಕೆ  ಆಗಮಿಸಿದ ಬಸ್‌ ಅದನ್ನು ಹತ್ತಲು ಮುಂದಾದ ಮಹಿಳೆಯರು ಸಡನ್‌ ಆಗಿ ಅದೇ ಬಸ್‌ ಹಿಂದಕ್ಕೆ ಸರಿಯಲು ಹಿಂಬದಿ  ಇನ್ನೊಂದು ಬಸ್‌ ಬಂದಿದೆ ಇವೆರಡರ ಮಧ್ಯೆ ಸಡನ್‌ ಆಗಿ ಸಿಲುಕಿದ ಮಹಿಳೆಯರು ಈ ಅಫಘಾತಕ್ಕೆ ಸಿಲುಕಿದ್ದಾರೆ. ಘಟನೆಯಲ್ಲಿ ಮೃತಪಟ್ಟ ಮಹಿಳೆಯರನ್ನ ಶ್ರೀರಂಗಪಟ್ಟಣ ತಾಲೂಕಿನ ಕೆ ಶೆಟ್ಟಿಹಳ್ಳಿ ಗ್ರಾಮದ ಪುಟ್ಟತಾಯಮ್ಮ ಹಾಗೂ ಪಂಕಜ ಎಂಬುವವರೇ ಮೃತಪಟ್ಟ ದುರ್ದೈವಿಗಳು ಎಂದು ಜೊತೆಯಲ್ಲಿಯೇ ಬಂದವರು ಗುರ್ತಿಸಿದ್ದಾರೆ.

 

 

 

 

ಇದಕ್ಕೆಲ್ಲಾ ಕಾರಣ ಶಕ್ತಿ ಯೋಜನೆಯ ಎಫೆಕ್ಟ್‌ ಎಂದು ಅಲ್ಲೇ ಇದ್ದ ಇತರೆ ಪ್ರಯಾಣಿಕರು ಮತ್ತು ಸಾರ್ವಜನಿಕರು ಪಿಸು ಪಿಸು ಮಾತನಾಡಿಕೊಳ್ಳುತ್ತಿದ್ದರು. ಶಕ್ತಿಯೋಜನೆಯಿಂದ ಎಫೆಕ್ಟ್‌ ನಿಂದ ರಾಜ್ಯದ ಮೂಲೆ ಮೂಲೆಗಳಿಗೆ ಪ್ರಯಾಣಿಸುತ್ತಿರುವ ಮಹಿಳೆಯರು ತಮ್ಮ ಜಾಗೃತೆಯನ್ನು ಮರೆತು ಬಸ್‌ನಲ್ಲಿ ಸೀಟಿಗಾಗಿ ಮುಗಿಬೀಳುತ್ತಿರುವುದೇ ಈ ಅಪಘಾತಗಳಿಗೆ ಕಾರಣವೆಂದು ಸಹ ಮಾತನಾಡಿಕೊಳ್ಳುತ್ತಿದ್ದರು. ಅಲ್ಲದೇ ಮೃತಪಟ್ಟ ದುರ್ದೈವರೊಂದಿಗೆ ಆಗಮಿಸಿದ್ದ ಪುಷ್ಪ ಎಂಬುವವರು ಇದೇ ಮೊದಲ ಬಾರಿಗೆ ಫ್ರೀ ಬಸ್ ಎಂದು ದೇವಸ್ಥಾನಕ್ಕಾಗಿ ಆಗಮಿಸಿದ್ದು ಇದೇ ಸಂದರ್ಭದಲ್ಲಿ ಇಂತಹ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.

 

 

 

 

 

 

ಅಪಘಾತಕ್ಕೀಡಾಗಿ ಸಾವನ್ನಪ್ಪಿದ ಇಬ್ಬರು ಮಹಿಳೆಯರ   ಜೊತೆಯಲ್ಲಿ ಬಂದಿದ್ದ ಇನ್ನತರೆ ನಾಲ್ವರು ಮಹಿಳೆಯರಾದ ರೇಣುಕಾ, ಅನುಸೂಯ, ಪುಷ್ಪ ಹಾಗೂ ಮಂಜಮ್ಮ ಎಂಬುವವರಿಗೆ ಯಾವುದೇ ರೀತಿಯಾದ ಅನಾಹುತವಾಗದೇ ಪಾರಾಗಿದ್ದಾರೆ. ಈ ಘಟನೆ ನಡೆದ ಕೂಡಲೇ   ಕೆ.ಎಸ್.ಆರ್.ಟಿ.ಸಿ.  ಬಸ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದು ಮೃತಪಟ್ಟ ಮಹಿಳೆಯರ  ಮೃತದೇಹಗಳನ್ನು ತುಮಕೂರಿನ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

 

 

ತುಮಕೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ

Leave a Reply

Your email address will not be published. Required fields are marked *

error: Content is protected !!