ತುಮಕೂರಿನ ಹೃದಯಭಾಗದಲ್ಲಿದೆ ಕಸದ ರಾಶಿ : ಕಣ್ಮುಚ್ಚಿ ಕುಳಿತ ಅಧಿಕಾರಿಗಳು

ತುಮಕೂರು : ನಗರದ ಹೃದಯ ಭಾಗವಾಗಿರುವ ಹೊರಪೇಟೆಯ ಮುಖ್ಯ ರಸ್ತೆಯ ಶುಭೋದಯ ಶಾಲೆಯ ಪಕ್ಕದ ಖಾಲಿ ಜಾಗದಲ್ಲಿ ಕಸದ ರಾಶಿಯೇ ಬಿದ್ದಿದೆ, ಈ ಮುಖ್ಯರಸ್ತೆಯಲ್ಲಿ ಬಹುತೇಕ ಎಲ್ಲಾ ಅಧಿಕಾರಿಗಳು ಓಡಾಡುತ್ತಾರೆ ಈ ಜಾಗದ ಬಳಿ ಒಂದು ಚರ್ಚ್‌, ಶುಭೋದಯ ಶಾಲೆ, ಲೂರ್ದು ಮಾತೆ ಶಾಲೆ, ಬೆಸ್ಕಾಂ ಕಛೇರಿ, ಶ್ರೀ ಕರಿಬಸವೇಶ್ವರ ಮಠ, ಬಾಪೂಜಿ ಕಾಲೇಜು ಒಳಗೊಂಡೊಂತೆ ಪಕ್ಕದಲ್ಲಿಯೇ ಕಲ್ಯಾಣ ಮಂಟಪ ಸಹ ಇರುತ್ತದೆ.
ಈ ಭಾಗದ ಜನರು ಒಳಗೊಂಡಂತೆ, ಕಛೇರಿ, ಶಾಲಾ-ಕಾಲೇಜುಗಳು ಓಡಾಡುವ ಜನರು ಮೂಗು ಮುಚ್ಚಿಕೊಂಡು ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಈ ಕಸದ ರಾಶಿಯಿಂದ ಹಲವಾರು ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಳಿದ್ದು, ಡೆಂಗ್ಯೂ, ಮಲೇರಿಯಾ ಬೀತಿಯಲ್ಲಿ ಈ ಭಾಗದ ಜನರು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.
ಇನ್ನೂ ಈ ಕಸದ ರಾಶಿಯ ಸನ್ನಿಹದಲ್ಲೇ ಶಾಲೆಗಳು ಇರುವುದರಿಂದ ಸಣ್ಣ ಪುಟ್ಟ ಮಕ್ಕಳು ಓಡಾಡುತ್ತಿದ್ದು ಸಾಂಕ್ರಾಮಿಕ ರೋಗಗಳು ಮಕ್ಕಳಿಗೆ ಬಹುಬೇಗ ಅಂಟುವುದರಿಂದ ಇಲ್ಲಿನ ಜನರು ಪಾಲಿಕೆಯವರಿಗೆ ಹಿಡಿ ಶಾಪ ಹಾಕುತ್ತಿರುವುದಲ್ಲದೇ, ಈ ಭಾಗವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆಂದು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.
ಇನ್ನಾದರೂ ಸಂಬಂಧಪಟ್ಟ ಪಾಲಿಕೆ ಅಧಿಕಾರಿಗಳು, ಪಾಲಿಕೆ ಸದಸ್ಯರು, ಆಯುಕ್ತರು, ಮಹಾಪೌರರು ಸ್ಥಳ ಪರಿವೀಕ್ಷಣೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪತ್ರಿಕೆ ವತಿಯಿಂದ ಕೋರಲಾಗಿದೆ.

Leave a Reply

Your email address will not be published. Required fields are marked *

error: Content is protected !!