ತುಮಕೂರು ಗ್ರಾಮಾಂತರದ ಬಿಜೆಪಿ ಪಕ್ಷದ ಕಛೇರಿ ಶಕ್ತಿಸೌಧದಲ್ಲಿ ಬಿಜೆಪಿ ಅಭ್ಯರ್ಥಿ ಸುರೇಶ್ ಗೌಡ್ರು ಒಕ್ಕಲಿಗರ ಸಮಾವೇಶದ ಕಾರ್ಯಕ್ರಮದಲ್ಲಿ ಒಕ್ಕಲಿಗ ಸಮುದಾಯವನ್ನು ಉದ್ದೇಶಿಸಿ ಮಾತನಾಡುತ್ತಾ ಕೆಂಪೇಗೌಡ, ಬಾಲ ಗಂಗಾಧರನಾಥ, ನಿರ್ಮಲಾನಂದ ಸ್ವಾಮೀಜಿಗಳನ್ನು ಸ್ಮರಿಸುತ್ತಾ ತಮ್ಮ ಭಾಷಣವನ್ನು ಮಾಡಿದರು.
ಈ ಸಭೆಯು ಪಕ್ಷತೀತ ಸಭೆಯೆಂದು ನಾನು ಹೇಳಲು ಬಯಸುತ್ತೇನೆ ಜೊತೆಗೆ ಈ ಸಭೆ ನನ್ನ ಸಮುದಾಯದ ಸಭೆ ಎಂದರೆ ತಪ್ಪಾಗಲಾರದು ಎಂದರು ನಮ್ಮ ಸಮುದಾಯದ ಜನನಾಯಕರಾದ ಮುದ್ದಹನುಮೇಗೌಡರವರು ಈ ನಾಡಿಗೆ ನಮ್ಮ ಸಮುದಾಯ ನೀಡಿರುವ ಕೊಡುಗೆ ಬಗ್ಗೆ ಅತೀ ಹೆಚ್ಚಿನದಾಗಿ ಹೇಳಿದ್ದಾರೆ ಆ ಬಗ್ಗೆ ನಾನು ಹೆಚ್ಚಿನದಾಗಿ ಹೇಳಲು ಬಯಸಿಲ್ಲ ಏಕೆಂದರೆ ಬಹುತೇಕ ಎಲ್ಲವನ್ನೂ ಅವರೇ ವಿವರವಾಗಿ ಹೇಳಿದ್ದಾರೆ ಎಂದರು. ನನಗೆ ನಾಡಪ್ರಭು ಕೆಂಪೇಗೌಡ, ಬಾಲಗಂಗಾಧರ ನಾಥ ಸ್ವಾಮೀಜಿ, ಶಿವಕುಮಾರ್ ಸ್ವಾಮೀಜಿಗಳೇ ಸದಾ ಸ್ಫೂರ್ತಿ ಎಂದರು.
ಈ ಭಾರಿಯ ಚುನಾವಣೆಯಲ್ಲಿ ನಮ್ಮ ಸಮುದಾಯ ನನ್ನನ್ನು ಗೆದ್ದೇ ಗೆಲ್ಲಿಸುತ್ತೀರ ಎಂಬ ವಿಶ್ವಾಸ ನನ್ನಲ್ಲಿ ತುಂಬುತ್ತಿರುವುದನ್ನು ನೋಡಿದರೆ ನನ್ನ ಮೈ ರೋಮಾಂಚನವಾಗುತ್ತಿದೆ. ನಮ್ಮ ಸಮಾಜ ಈ ನಾಡಿಗೆ ಬಹಳಷ್ಟು ಕೊಡಿಗೆಗಳನ್ನು ನೀಡಿದೆ ಅದಕ್ಕೆ ಸಾಕ್ಷಿ ವಿಧಾನಸೌಧ ಕಟ್ಟಿಸಿರುವ ಕೆಂಗಲ್ ಹನುಮಂತಯ್ಯ ಸೇರಿದಂತೆ ಹಲವಾರು ಧೀಮಂತ ನಾಯಕರ ಕೊಡುಗೆ ಅಪಾರವೆಂದರು, ಅಲ್ಲದೇ ನಮ್ಮ ಬಿಜೆಪಿ ಪಕ್ಷ ಅವರ ಕೊಡುಗೆಗಳನ್ನು ಸಾಕಾರ ಮಾಡಿಕೊಂಡು ಬರುತ್ತಿದೆಂದರು.
ನಮ್ಮ ಜಿಲ್ಲೆಗೆ ವೈ ಕೆ ರಾಮಯ್ಯ, ಲಕ್ಕಪ್ಪ, ಸೇರಿದಂತೆ ಹಲವಾರು ನಾಯಕರ ಪರಿಶ್ರಮ ಕೊಡುಗೆ ಅಪಾರವೆಂದು ಹೇಳಿದರಲ್ಲದೆ ನಮ್ಮ ಸಮುದಾಯ ಒಗ್ಗಟ್ಟಾಗಿ ನನ್ನನ್ನು ಬೆಂಬಲಿಸಿ ಸಹಕಾರ ಮಾಡಿದಲ್ಲಿ ನಾನು ಮುಂದಿನ ದಿನಗಳಲ್ಲಿ ನಿಮ್ಮ ಮನೆಯ ಮಗನಾಗಿ ಸೇವೆ ಮಾಡುತ್ತೇನೆ ಎಂದರು.
ಮಾಜಿ ಸಂಸದ ಮುದ್ದಹನುಮೇಗೌಡ್ರು ಮಾತನಾಡುತ್ತಾ ನಾನು ಸಂಸದನಾಗಿದ್ದ ಅವಧಿಯಲ್ಲಿ ಸುರೇಶ್ ಗೌಡ್ರು ಶಾಸಕರಾಗಿದ್ದರು ಆ ಅವಧಿಯಲ್ಲಿ ಅವರಿಗೆ ಅನ್ಯಾಯವಾಗಿದೆ ಹಾಗಾಗಿ ನಾನು ಈ ಭಾರಿ ಅವರ ಎಲ್ಲಾ ಕಾರ್ಯಕ್ರಮಗಳಲ್ಲಿ ನಾನು ಸಕ್ರಿಯವಾಗಿ ಭಾಗವಹಿಸಿ ಅವರ ಗೆಲುವಿಗಾಗಿ ನಾನು ಶ್ರಮಿಸಿ ಅವರ ಗೆಲುವಿಗೆ ಸಹಕಾರಿಯಾಗಿ ಛಲ ಬಿಡದ ಸರದಾರನಿಗೆ ಸಹಕಾರಿಯಾಗಿದ್ದೇನೆ ಎಂದರು.
ಮುಂದುವರೆದು ಮಾತನಾಡುತ್ತಾ ಸುರೇಶ್ ಗೌಡ್ರು ಚುನಾವಣೆಯಲ್ಲಿ ಸೋತಿದ್ದರೂ ಸಹ ಅವರು ಮನೆಯಲ್ಲಿ ಕೂರದೆ ಜನರ ಕಷ್ಟಗಳಿಗೆ ಸ್ಪಂದಿಸಿದ್ದಾರೆ ಎಂದರು ಜೊತೆಗೆ ಅವರು ಜನರಿಗೆ ಎಲ್ಲಾ ರೀತಿಯಲ್ಲಿ ಸ್ಪಂದನೆ ನೀಡುತ್ತಾ ನಿರಂತರ ಕಾಯಕಯೋಗಿ ಆಗಿದ್ದಾರೆ ಅಂತಹವರಿಗೆ ನಾವು ಈ ಭಾರಿ ಬೆಂಬಲಿಸಿ ಹೆಚ್ಚಿನ ಮತಗಳಿಂದ ಗೆಲ್ಲಿಸಬೇಕಾಗಿದೆ ಎಂದರು.
ಇದೆ ಸಂದರ್ಭದಲ್ಲಿ ಮತ್ತೊಬ್ಬ ಒಕ್ಕಲಿಗ ಸಮುದಾಯದ ನಾಯಕ ಹಾಗೂ ಇತ್ತೀಚಿಗೆ ಜೆಡಿಎಸ್ ಇಂದ ಬಿಜೆಪಿಗೆ ಸೇರ್ಪಡೆಯಾದ ಬೆಳ್ಳಿ ಲೋಕೇಶ್ ಅವರು ಮಾತನಾಡುತ್ತಾ ತನಗೆ ಜೆಡಿಎಸ್ ಪಕ್ಷದಲ್ಲಿ ಆದ ನೋವನ್ನು ಹೊರಹಾಕಿದರು ಅಲ್ಲದೆ ತಾವು ಅಲ್ಲಿ ಸಾಕಷ್ಟು ನೋವು ಅನುಭವಿಸಿ ಹೊರ ಬಂದಿದ್ದೇನೆ ಎಂದರು ತಾನು ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ನಾನಿದ್ದ ಪಕ್ಷದ ಅವರಿಂದಲೇ ನಾನು ಸೋತಿದ್ದೇನೆ ಎಂದರು ನಾನು ಒಂದು ವೇಳೆ ಗೆಲುವನ್ನು ಸಾದಿಸಿದ್ದಾರೆ ಈ ಜಿಲ್ಲಿಗೆ ಕಿಮ್ಸ್ ಆಸ್ಪತ್ರೆ ತರುವ ಉದ್ದೇಶವಿತ್ತು ಆದರೆ ಅದು ನನಗೆ ಅವಕಾಶ ಸಿಗದೇ ಇರುವುದಕ್ಕೆ ಬಹಳ ಬೇಸರ ತಂದಿದೆ ಎಂದರು ಜೊತೆಗೆ ಈ ಭಾರಿ ಬಿಜೆಪಿ ಪಕ್ಷವನ್ನು ಈ ಭಾಗದಲ್ಲಿ ತಂದಿದ್ದೆ ಆದರೆ ಸುರೇಶ್ ಗೌಡ್ರ ಮೂಲಕ ಕಿಮ್ಸ್ ಆಸ್ಪತ್ರೆ ತರುವಲ್ಲಿ ಶ್ರಮಿಸುತ್ತೇನೆ ಎಂದರು.
ನಮ್ಮ ಸಮುದಾಯದ ಹೆಮ್ಮೆಯ ಪ್ರತೀಕ ಕೆಂಪೇಗೌಡರವರ ಬೃಹತ್ ಪ್ರತಿಮೆಯನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ಸ್ಥಾಪಿಸಿದ ಕೀರ್ತಿ ಬಿಜೆಪಿ ಸರ್ಕಾರದ್ದು ಎಂದರು. ಯಾವುದು ಏನೇ ಇರಲಿ ನಿರಂತರ ಜನರ ಕಷ್ಟ ಸುಖದಲ್ಲಿ ನಿರಂತರವಾಗಿ ಶ್ರಮಿಸುತ್ತಿರುವ ಸುರೇಶ್ ಗೌಡ್ರುಗೆ ಈ ಭಾರಿ ಚುನಾವಣೆಯಲ್ಲಿ ಅತೀ ಹೆಚ್ಚಿನ ಅಂತರದಲ್ಲಿ ಗೆಲ್ಲಿಸಿಕೊಂಡು ಬರೋಣ ಎಂದರು.
ಈ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಸುರೇಶ್ ಗೌಡ, ಮಾಜಿ ಸಂಸದ ಮುದ್ದಹನುಮೇಗೌಡ, ಪಂಚೆ ರಾಮಚಂದ್ರಪ್ಪ, ಸಿದ್ದೇಗೌಡ, ಮಾಸ್ತೆ ಗೌಡ್ರು, ವೈ ಟಿ ನಾಗರಾಜು, ವೆಂಕಟೇಶ, ಶಂಕರ್, ರಘುನಾಥಾಪ್ಪ, ದೇವರಾಜು ಸೇರಿದಂತೆ ಹಲವಾರು ಒಕ್ಕಲಿಗ ಸಮುದಾಯದ ಬಿಜೆಪಿ ಮುಖಂಡರು ಭಾಗವಹಿಸಿದ್ದರು.