ತುಮಕೂರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಜೀವ್ ಗೌಡ್ರು ಪ್ರಸ್ತುತ ಚುನಾವಣೆ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡುತ್ತಾ ನಮ್ಮ ಪಕ್ಷದಿಂದ ವಿವಿಧ ವಾಗ್ಮಿಗಳನ್ನು ಕರೆಯಿಸಿ ಸಂವಾದ ನಡೆಸಲು ಮುಂದಾಗಿದ್ದೇವೆ ಎಂದರು.
ನೆನ್ನೆ ಜಂತರ್ ಮಂತರ್ ನಲ್ಲಿ ನಡೆದ ಗಲಭೆ ಪ್ರಕಾರಣಕ್ಕೆ ನೇರ ಕಾರಣ ಅಲ್ಲಿನ ಪೊಲೀಸ್ ಇಲಾಖೆ ಆ ಇಲಾಖೆ ಕೇಂದ್ರಆಡಳಿತ ಅಂದರೆ ಅಮಿತ್ ಶಾ ಕೈ ಯಲ್ಲಿದೆ ಯಾಕೆ ಅವರು ನಮ್ಮ ಹೆಣ್ಣು ಮಕ್ಕಳ ಮೇಲೆ ಈ ರೀತಿಯಾದ ಧಾಳಿ ಮಾಡಿದ್ದಾರೆ ಇದಕ್ಕೆ ನಮ್ಮ ಪಕ್ಷ ತೀವ್ರವಾಗಿ ಕಂಡಿಸುತ್ತೇವೆ ಎಂದರು.
ಮಣಿಪುರದಲ್ಲಿ ಜಾತಿಯತೆ ಸುಡುತ್ತಿದೆ ಅಂತಹದರಲ್ಲಿ ಅವರು ಅಲ್ಲಿನ ಸಮಸ್ಯೆ ಬಗೆಹರಿಸಲು ಮುಂದಾಗದೆ ಅವರುಗಳು ಅಂದರೆ ಬಿಜೆಪಿ ಪಕ್ಷದ ಕೇಂದ್ರ ನಾಯಕರು ಚುನಾವಣೆ ಪ್ರಚಾರಗಳಲ್ಲಿ ಮುಂದಾಗಿರುವುದು ಶೋಚನಿಯ ಸಂಗತಿ ಎಂದರು. ಇತ್ತೀಚಿಗೆ ನಮ್ಮ ಕಾಂಗ್ರೆಸ್ ಸರ್ಕಾರ ತಂದಿರುವ ಚುನಾವಣೆ ಪ್ರಣಾಳಿಕೆ ಜನರ ಹಿತದೃಷ್ಟಿಯಿಂದ ತಂದಿರುವ ಪ್ರಣಾಳಿಕೆ ಎಂದರು ಜೊತೆಗೆ ನಮ್ಮ ಈ ಹಿಂದಿನ ಕಾಂಗ್ರೆಸ್ ಸರ್ಕಾರ ಮಾಡಿದ್ದ ಚುನಾವಣೆ ಪ್ರಣಾಳಿಕೆಯಲ್ಲಿನ ಬಹುತೇಕ ಎಲ್ಲಾ ಅಂಶಗಳನ್ನು ನಾವು ಈಡೇರಿಸಿದ್ದೇವೆ ಎಂಬ ಸಂತೃಪ್ತಿ ನಮಗಿದೆ ನಾವು ನುಡಿದಂತೆ ನಡೆದಿದ್ದೇವೆ ಎಂಬ ಹೆಮ್ಮೆ ನಮಗಿದೆ ಎಂದರು.
ಮುಂದುವರೆದು ಮಾತನಾಡುತ್ತಾ ಬಿಜೆಪಿ ಪಕ್ಷ ನೀಡುತ್ತಿರುವ ಭರವಸೆಯ ಪ್ರಣಾಳಿಕೆಗಳು ಸುಳ್ಳು ಭರವಸೆ ನೀಡುವ ಅಂಶಗಳು ಇವೆ ಅವು ಯಾವುವು ಈಡೇರಲು ಆಗಲ್ಲ ಎಂದರು ಏಕೆಂದರೆ ಸಿಲಿಂಡರ್ ಬೆಲೆ ಜಾಸ್ತಿ ಆಗಿದೆ ಅದುವೇ ನಮ್ಮ ಯು ಪಿ ಎ ಸರ್ಕಾರದಲ್ಲಿದ್ದ ಬೆಳೆಗಿಂತ ಮೂರು ಪಟ್ಟು ಹೆಚ್ಚಾಗಿದೆ ಅಂತಹದರಲ್ಲಿ ವರ್ಷಕ್ಕೆ ಮೂರು ಸಿಲಿಂಡರ್ ಹೇಗೆ ಉಚಿತವಾಗಿ ನೀಡುತ್ತಾರೆ ಎಂದರು.
ಇನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಡಾಲರ್ ಬೆಲೆಯಲ್ಲಿ ಕಮ್ಮಿಯಾಗಿದ್ದರು ಸಹ ಇಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚು ಆಗಿರಿವುದಕ್ಕೆ ಏನು ಹೇಳಬೇಕೋ ಗೊತ್ತಿಲ್ಲ ಇನ್ನು ಉದ್ಯೋಗ ನೀಡುವ ಭರವಸೆ ನೀಡಿದ್ದ ಈ ಸರ್ಕಾರ ಯಾರಿಗೆ ಉದ್ಯೋಗ ನೀಡಿದೆಯೋ ಗೊತ್ತಿಲ ಯಾಕೆ ಎಂದರೆ ಉದ್ಯೋಗ ನೀಡಿರುವ ನಿದರ್ಶನವಿದ್ದರೆ ತೋರಿಸಲಿ ಎಂದರು ಹಾಗಾಗಿ ಬಿಜೆಪಿ ನೀಡಿರುವ ಎಲ್ಲಾ ಭರವಸೆಗಳು ಈಡೇರಿಸಲು ಸಾಧ್ಯವಿಲ್ಲ ಎಲ್ಲಾ ಸುಳ್ಳು ಭಾರವಸೆಗಳು ಎಂದರು.
ಇನ್ನು ನಗರ ಕಾಂಗ್ರೆಸ್ ಶಾಸಕ ಅಭ್ಯರ್ಥಿ ಇಕ್ಬಾಲ್ ಅಹಮ್ಮದ್ ಮಾತನಾಡುತ್ತಾ ತುಮಕೂರು ನಗರದಲ್ಲಿ ತ್ರಿಕೋನ ಸ್ಪರ್ಧೆ ಇದೆ ನಾನು ಗೆಲ್ಲುವ ಅಭ್ಯರ್ಥಿ ಆಗಿದ್ದೇನೆ ನನಗೆ ಉತ್ತಮವಾದ ಸ್ಪಂದನೆ ಜನರಿಂದ ದೊರೆಯುತ್ತಿದೆ ಎಂದರು ನಾನು ನನ್ನದೇ ಆದ ಶೈಲಿಯಲ್ಲಿ ಚುನಾವಣೆ ನಡೆಸುತ್ತಿದ್ದೇನೆ ನನ್ನ ಗೆಲುವು ನೀವೇ ನೋಡುತ್ತೀರಿ ಎಂದು ಹೇಳಿದರು.
ನಾನು ಯಾರೊಂದಿಗೂ ಒಳ ಒಪ್ಪಂದ ಮಾಡಿಕೊಂಡಿಲ್ಲ ನಾನು ಅಟ್ಟಿಕಾ ಬಾಬು ಜೊತೆ ಮಾತುಕತೆ ಮಾತನಾಡಿದ್ದೇನೆ ಅವರು ಮತ್ತು ಅವರ ಬೆಂಬಲಿಗರು ನನ್ನ ಗೆಲುವಿಗೆ ಸರ್ವ ಸಹಕಾರ ನೀಡಲಿದ್ದಾರೆ ಎಂದರು. ಅವರು ಹಾಕಿರುವ ಷರತ್ತು ಒಂದೇ ಗೋವಿಂದರಾಜು ಗೆಲ್ಲಬಾರದು ಹಾಗಾಗಿ ನಾನು ನಿಮ್ಮೊಂದಿಗೆ ಸಹಕಾರ ಮಾಡುತ್ತೇನೆ ಎಂದು ಹೇಳಿದ್ದಾರೆ ಎಂದು ಇಕ್ಬಾಲ್ ಅಹಮ್ಮದ್ ತಿಳಿಸಿದ್ದಾರೆ.
ಇನ್ನು ಪತ್ರಿಕಾಗೋಷ್ಟಿಯಲ್ಲಿ ಎ ಐ ಸಿ ಸಿ ರಾಜೇವ್ ಗೌಡ, ಇಕ್ಬಾಲ್ ಅಹಮ್ಮದ್, ಹನುಮಂತಪ್ಪ, ನರಸೀಯಪ್ಪ, ಗುರುಪ್ರಸಾದ್, ಸಿದ್ದಲಿಂಗೇಗೌಡ್ರು, ಜಿಲ್ಲಾಧ್ಯಕ್ಷ ಚಂದ್ರಶೇಖರ ಗೌಡ ಸೇರಿದಂತೆ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.