ತುಮಕೂರು : ತುಮಕೂರು ನಗರದ ಜೆಡಿಎಸ್ ಅಭ್ಯರ್ಥಿಯಾದ ಎನ್.ಗೋವಿಂದರಾಜುರವರು ಇಂದು ತಮ್ಮ ಮತ ಪ್ರಚಾರವನ್ನು ನಗರದ ಎನ್ ಆರ್ ಕಾಲೋನಿ, ಆರ್.ಟಿ.ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರೋಡ್ ಶೋ ಮೂಲಕ ಮತ ಪ್ರಚಾರ ಮಾಡಿದರು.
ಈ ಸಂದರ್ಭದಲ್ಲಿ ಅಪಾರ ಸಂಖ್ಯೆಯ ಜೆಡಿಎಸ್ ಕಾರ್ಯಕರ್ತರು ಮೊದಲ್ಗೊಂಡು ಈ ರೋಡ್ ಶೋನಲ್ಲಿ ಭಾಗವಹಿಸಿದ್ದರು. ಇಲ್ಲಿನ ಭಾಗದ ಜನತೆಗೆ ಜೆಡಿಎಸ್ ನ ಪಂಚರತ್ನ ಯೋಜನೆಗಳ ಕುರಿತಾದ ಮಹತ್ವ ಮತ್ತು ಈ ಯೋಜನೆಗಳು ಸಾಕಾರಗೊಳ್ಳಬೇಕಾದರೆ ಜೆಡಿಎಸ್ ಪಕ್ಷಕ್ಕೆ ಮತ ಚಲಾವಣೆ ಮಾಡುವುದರೊಂದಿಗೆ ನನಗೆ ಮತ ಚಲಾಯಿಸುವುದರ ಮೂಲಕ ಕುಮಾರಣ್ಣನ ನೇತೃತ್ವದ ಜೆಡಿಎಸ್ ಸರ್ಕಾರ ಈ ಭಾರಿ ರಾಜ್ಯದಲ್ಲಿ ಬರುವಂತೆ ಮಾಡಬೇಕಾಗಿರುವ ಕಾರ್ಯ ನಿಮ್ಮಿಂದ ಆಗಬೇಕಾಗಿದೆ ಎಂದರು.
ಇನ್ನು ಎನ್ ಆರ್ ಕಾಲೋನಿಯ ಕೆಲ ಹೆಣ್ಣು ಮಕ್ಕಳು ಗೋವಿಂದರಾಜುರವರು ಮತ ಕೇಳಲು ತಮ್ಮ ಏರಿಯಾಗೇ ಬಂದಿರುವುದು ಖುಷಿ ತಂದಿದೆ ಎಂದು ಆರತಿ ಮಾಡಿ ಬರಮಾಡಿಕೊಂಡರಲ್ಲದೇ ಇನ್ನೂ ಕೆಲವರು ಆರತಿಯೊಂದಿಗೆ ವಿಜಯ ತಿಲಕವನ್ನು ಇಟ್ಟು ತಾವು ಜಯಶೀಲರಾಗಿ ತುಮಕೂರು ನಗರದ ಸೇವೆಯನ್ನು ಮಾಡಿ ಎಂದು ಶುಭ ಹಾರೈಸಿದ್ದು ಬಹಳ ವಿಶೇಷವಾಗಿತ್ತು.