ಕಾಂಗ್ರೆಸ್ ಪಕ್ಷ ದ ಜಿಲ್ಲಾ ಕಚೇರಿಯಲ್ಲಿ ಇಕ್ಬಲ್ ಅಹಮ್ಮದ್ ಅವರು ಮಾತನಾಡುತ್ತ ಚುನಾವಣೆಯ ಪ್ರಯುಕ್ತ ಕಾಂಗ್ರೆಸ್ ಸಕಲ ರೀತಿಯಲ್ಲಿ ಸಾಜ್ಜಗಿದೆ ವಾರ್ಡ್ ವರು ಸಭೆಯಲ್ಲಿ ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರು ನೀಡಿರುವ ಮತ್ತು ನೀಡುತ್ತಿರುವ ಸಲಹೆಗಳನ್ನು ಪಡೆದು ಕೆಲಸ ಮಾಡುತ್ತೇನೆ
ಕೆಲವೊಂದು ಗೊಂದಲಗಳು ಇದ್ದ ಕಾರಣ ನಾನು ತಡವಾಗಿ ಪ್ರಚಾರ ಸಭೆ ಮಾಡಲು ಕಾರಣವಯಿತು ಹಾಗೂ ಚುನಾವಣೆ ಶಾಖೆ ಇಂದ ಕ್ರಮ ಸಂಖ್ಯೆಗಳು ಘೋಷಣೆ ಆಗದೆ ಇರುವ ಕಾರಣ ಈ ರೀತ್ತಿಯಾದ ತಡವಾಗಿದೆ ಎಂದು ಹೇಳುತ್ತಾ ಕಾರ್ಯಕರ್ತರ ಕ್ಷಮೆ ಕೋರುತ್ತೇನೆ ಎಂದರು
ನಾನು ಒಬ್ಬ ಸಾಮಾನ್ಯ ಕಾರ್ಯಕರ್ತ ನನ್ನನು ಗುರುತಿಸಿ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದೆ ನನ್ನನ್ನು ಸಾಮಾನ್ಯ ಕಾರ್ಯಕರ್ತರೊಳಗೊಂಡು ಎಲ್ಲಾ ನಾಯಕರ ವಿಶ್ವಾಸ ಪಡೆದು ಚುನಾವಣೆಯ ಕಾರ್ಯಗಳನ್ನು ಮಾಡುತ್ತೇನೆ ಎಂದರು
ಶೀಘ್ರದಲ್ಲಿಯೇ ಎಲ್ಲಾ ಬೂತ್ ಮಟ್ಟದ ಸಮಿತಿಗಳನ್ನು ಸಭೆ ಕರೆಡು ಪ್ರಚಾರ ಕಾರ್ಯ ಆರಂಭಿಸುತ್ತೇನೆ ಎಂದು ಹೇಳಿದರು. ನಮ್ಮ ಪಕ್ಷದ ಎಲ್ಲಾ ಹಿರಿಯರು ಹಾಗೂ ನಾಯಕರುಗಳ ಮಾರ್ಗದರ್ಶನ ಬೆಂಬಲ ಪಡೆದು ಈ ಭಾರಿ ಚುನಾವಣೆಯಲ್ಲಿ ನಾನು ಗೆಲ್ಲಲು ಸಹಕಾರ ಆಗುತ್ತದೆ ಎಂದರು ಬಿಜೆಪಿ ಸರ್ಕಾರ ಬೆಲೆ ಏರಿಕೆಯ ಸರ್ಕಾರ ಆಗಿದೆ ಅದನ್ನು ಕಿತ್ತು ಹಾಕಲು ಕಾಂಗ್ರೆಸ್ ಪಕ್ಷದ ಕೈ ಹಿಡಿಯ ಬೇಕು ಎಂಬುದು ಜನರ ಅಭಿಪ್ರಾಯವಾಗಿದೆ ಹಾಗಾಗಿ ಪಕ್ಷದ ಎಲ್ಲಾ ಕಾರ್ಯಕರ್ತರು ಕೆಲಸ ಮಾಡಬೇಕಿದೆ ಎಂದರು.
ನಮ್ಮ ಕಾಂಗ್ರೆಸ್ ಸರ್ಕಾರದ ಕಾಲದಲ್ಲೆ ಅಣ್ಣ ಭಾಗ್ಯ, ಶಾಲಾ ಮಕ್ಕಳಿಗೆ ಶೂ ಭಾಗ್ಯ ಸೇರಿದಂತೆ ಹಲವಾರು ಮಹತ್ತರ ಯೋಜನೆಗಳನ್ನು ನೀಡಿದೆ ಅದನ್ನು ನಾವು ಜನರ ಮುಂದೆ ತಂದು ಮತ ಯಾಚನೆ ಮಾಡುತ್ತೇನೆ ಎಂದರು
ನಮ್ಮ ಪಕ್ಷ ಸರ್ಕಾರ ಗ್ಯಾರಂಟಿ ಸರ್ಕಾರ ಆಗಿದ್ದು ನಾವು ಈಗ ನೀಡಿರುವ ಗ್ಯಾರಂಟಿ ಕಾರ್ಡ್ ಉಪಯೋಗಕ್ಕೆ ಬರುತ್ತದೆ ಅದು ನೀವುಗಳು ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸಿದಾಗ ಮಾತ್ರ ಎಂದು ಹೇಳಿದರು
ನಮ್ಮ ಕಾಂಗ್ರೆಸ್ ನಾಯಕರು ಮಾಡಿರುವ ಜನಪರ ಕಾರ್ಯಗಳನ್ನು ಜನರಿಗೆ ತಿಳಿಯುವ ರೀತಿಯಲ್ಲಿ ಪ್ರಚಾರ ಮಾಡಿ ಈ ಭಾರಿ ನಾನು ಪ್ರಚಾರ ಕಾರ್ಯ ಆರಂಭಿಸುತ್ತೇನೆ ಎಂದರು