ಆಂಜನೇಯನ ಆಶೀರ್ವಾದ ಪಡೆದು ಮತಯಾಚನೆಗೆ ಹೊರಟ ಜೆಡಿಎಸ್‌ ಗೋವಿಂದರಾಜು - Vidyaranjaka

ಆಂಜನೇಯನ ಆಶೀರ್ವಾದ ಪಡೆದು ಮತಯಾಚನೆಗೆ ಹೊರಟ ಜೆಡಿಎಸ್‌ ಗೋವಿಂದರಾಜು

ಇಂದು ತುಮಕೂರು ನಗರ ಜೆಡಿಎಸ್‌ ಶಾಸಕ ಅಭ್ಯರ್ಥಿ ಎನ್.ಗೋವಿಂದರಾಜುರವರು ಆರ್.ಟಿ.ಓ. ಕಛೇರಿ ಹತ್ತಿರದಲ್ಲಿರುವ ಶ್ರೀ ಅಭಯ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ತಮ್ಮ ಚುನಾವಣಾ ಪ್ರಚಾರದ ಹಸ್ತ ಪ್ರತಿಗಳಿಗೆ ಪೂಜೆ ಸಲ್ಲಿಸಿ ತದ ನಂತರ ತಮ್ಮ ಅಪಾರ ಬೆಂಬಲಿಗರೊಂದಿಗೆ ಪ್ರಚಾರ ಕಾರ್ಯಗಳನ್ನು ಆರಂಭಿಸಿದರು.

 

 

 

 

 

ಚುನಾವಣೆಯ ಹಿನ್ನಲೆಯಲ್ಲಿ ಇಷ್ಟು ದಿನ ಕಾರ್ಯಕರ್ತರಲ್ಲಿ ಹಾಗೂ ಮತದಾರರಲ್ಲಿ ಹಲವಾರು ಗೊಂದಲಗಳು ಇದ್ದವು, ಅವುಕ್ಕೆಲ್ಲ ತೆರೆ ಎಳೆದು ಜೆಡಿಎಸ್‌ ಪಕ್ಷದ ಎಲ್ಲಾ ಕಾರ್ಯಕರ್ತರು, ಮುಖಂಡರು ಹಾಗೂ ವಿವಿಧ ಘಟಕಗಳ ಪದಾಧಿಕಾರಿಗಳು ಸೇರಿದಂತೆ ಹಲವಾರು ಜನ ನಾಗರೀಕರ ಸಹಾಯ ಮತ್ತು ಸಹಕಾರದೊಂದಿಗೆ ಇಂದು ಎನ್.ಗೋವಿಂದರಾಜು ತಮ್ಮ ಮತ ಪ್ರಚಾರವನ್ನು ಪ್ರಾರಂಭಿಸಿದರು.

 

 

 

 

 

 

ಮುಂದುವರೆದು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಬಿ.ಹೆಚ್.ರಸ್ತೆ ಮಾರ್ಗವಾಗಿ, ಅಶೋಕ ನಗರ, ಎಸ್.ಐ.ಟಿ, ಸೋಮೇಶ್ವರ ಭಾಗದ ವಿವಿಧ ರಸ್ತೆಗಳಲ್ಲಿ ಬೃಹತ್‌ ಸಂಖ್ಯೆಯ ಕಾರ್ಯಕರ್ತರೊಂದಿಗೆ ಎನ್.ಗೋವಿಂದರಾಜು ಮತಯಾಚನೆ ಮಾಡಿದರು.

 

 

 

 

 

ಪೂಜೆ ನೆರವೇರಿಸುವ ಸಂದರ್ಭದಲ್ಲಿ ತುಮಕೂರು  ಜೆಡಿಎಸ್ ನಗರಾಧ್ಯಕ್ಷರ ಕೆ.ಟಿ.ವಿಜಯ್‌ ಗೌಡ, ಪದಾಧಿಕಾರಿಗಳು ಹಾಗೂ ಮುಖಂಡರುಗಾಳದ ಶ್ರೀನಿವಾಸಮೂರ್ತಿ, ಧರಣೇಂದ್ರ ಕುಮಾರ್‌ (ರಾಜು), ಹೆಚ್.ಡಿ.ಕೆ. ಮಂಜು, ರವಿ, ಲೀಲಾವತಿ, ಜಗದೀಶ್‌ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!