ತುಮಕೂರು ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ಮಾತನಾಡುತ್ತ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ರವರು ದೇಶಕ್ಕೆ ಸ್ವತಂತ್ರ ಬಂದ ನಂತರ ವಿಶೇಷ ಅಭಿವೃದ್ಧಿ ಮಾಡುತ್ತಿದ್ದಾರೆ ಸ್ಮಾರ್ಟ್ ಸಿಟಿ, ಸ್ಮಾರ್ಟ್ ಗ್ರಾಮ, ಸೇರಿದಂತೆ ಹಲವಾರು ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ ಅಲ್ಲದೆ ಬೆಂಗಳೂರು ಇಂದ ಬಳ್ಳಾರಿ ವಿಶೇಷ ರಸ್ತೆ ಮಾರ್ಗ ಕಲ್ಪಿಸುವಲ್ಲಿ ಶ್ರಮ ವಹಿಸಿದ್ದಾರೆ ಎಂದರು.
ತುಮಕೂರು ನಗರ ಇದೀಗ ಸ್ಮಾರ್ಟ್ ಸಿಟಿ ಆಗಿರುವ ಪ್ರಯುಕ್ತ ಸ್ವಚ್ಛ ನಗರವಾಗಿ ಮರ್ಪಟ್ಟಿದೆ ಎಂದು ಹೇಳಿದರಲ್ಲದೆ ತುಮಕೂರು ನಗರಕ್ಕೆ ವಿದೇಶಿ ಕಂಪನಿಗಳು ಕೈಗಾರಿಕಾ ಪ್ರದೇಶಕ್ಕೆ ಬರಲಿದ್ದು ಇದೆಲ್ಲ ಸಾಧ್ಯವಾಗಿದ್ದು ಡಬಲ್ ಇಂಜಿನ್ ಸರ್ಕಾರದ ಕಾರಣದಿಂದ ಅದಕ್ಕೆ ಮತದಾರರು ಬಿಜೆಪಿ ಗೆ ಮತ ಚಲಾಯಿಸಿ ಜ್ಯೋತಿ ಗಣೇಶ್ ಅವರನ್ನು ಗೆಲ್ಲಿಸಬೇಕು ಎಂದು ವಿನಂತಿಸಿದರು.
ಜ್ಯೋತಿ ಗಣೇಶ್ ಒಬ್ಬ ಸರಳ ಸಜ್ಜನಿಕೆಯ ರಾಜಕಾರಣಿ ಆಗಿದ್ದು ಹಾಲಿ ಶಾಸಕರು ಆಗಿರುವ ಇವರು ತುಮಕೂರು ನಗರಕ್ಕೆ ಸ್ಮಾರ್ಟ್ ಸಿಟಿ ಅನುದಾನದಲ್ಲಿ ಅತ್ಯಾದುನಿಕ ಸ್ಟೇಡಿಯಂ, ಲೈಬ್ರರಿ, ರಸ್ತೆ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಇವರು ಶಾಸಕರಗಿದ್ದ ಕಾಲದಲ್ಲಿ ಆಗಿರುವುದು ಎಂದು ಹೇಳುವುದಕ್ಕೆ ಸಂತೋಷವಾಗುತ್ತದೆ ಎಂದರು.
ತುಮಕೂರುನ್ನು ಮತ್ತಷ್ಟು ಅಭಿವೃದ್ಧಿ ಪಥದಲ್ಲಿ ನಿರ್ಮಾಣ ಮಾಡಲು ಬಿಜೆಪಿ ಪಕ್ಷಕ್ಕೆ ಬೆಂಬಲಿಸುವುದಲ್ಲದೆ ಜ್ಯೋತಿ ಗಣೇಶ್ ಅವರನ್ನು ಅತ್ಯಾದಿಕ ಮತಗಳಿಂದ ಗೆಲ್ಲಿಸುವ ಜವಾಬ್ದಾರಿ ತುಮಕೂರಿನ ಜನತೆದು ಎಂದು ಹೇಳಿದರು.
ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದ ಜಿಡಿಪಿ ಮೌಲ್ಯ ಚೆನ್ನಾಗಿದೆ ನಮ್ಮ ಭಾರತ ಮೋದಿ ಅವರ ನೇತೃತ್ವದಲ್ಲಿ ಸಮೃದ್ಧವಾಗಿದೆ ಎಂದರು. ಮೋದಿ ನೇತೃತ್ವದ ಸರ್ಕಾರ ಭಾರತದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಸೇನೆ ಬಲಿಷ್ಠವಾಗಿದೆ ನಾವು ಯಾವುದೇ ಅಭಿವೃದ್ಧಿ ರಾಷ್ಟ್ರಗಳಿಗೆ ಕಮ್ಮಿಯಿಲ್ಲ ಎಂದರು ನಾವು ಒಂದು ಇಂಚು ಭೂಮಿಯನ್ನು ಶತ್ರುಗಳು ವಶಪಡಿಸಿಕೊಳ್ಳಲು ಬಿಡುವುದಿಲ್ಲ ಅಷ್ಟು ಆಧುನಿಕ ತಂತ್ರಜ್ಞಾನ ಹೊಂದಿರುವ ದೇಶ ನಮ್ಮ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಆಗಿದ್ದು ಎಂದು ಹೇಳಲು ಗರ್ವವಾಗಿದೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಜ್ಯೋತಿಗಣೇಶ್, ಜಿಲ್ಲಾಧ್ಯಕ್ಷ ರವಿಶಂಕರ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್, ಸದಾಶಿವಯ್ಯ, ಸುರೇಂದ್ರ ಷಾ, ಚಿದಾನಂದ್ ಗೌಡ, ಟಿ ಎಸ್ ನಿರಂಜನ್ ಜಗದೀಶ್ ಹಾಗೂ ಇತರರು ಉಪಸ್ಥಿತರಿದ್ದರು.