ತುಮಕೂರಿನ ಜ್ಯೋತಿ ಬೆಳಗಲು ಜ್ಯೋತಿ ಗಣೇಶರನ್ನು ಗೆಲ್ಲಿಸಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ತುಮಕೂರು: ಜ್ಯೊತಿಗಣೇಶ ಸಜ್ಜನ ರಾಜಕಾರಣಿ. ಅವರು ಯಾರ ಮನಸಿಗೂ ನೋವಾಗದಂತೆ ನಡೆದುಕೊಂಡಿದ್ದಾರೆ. ತುಮಕೂರಿಗೆ ಸ್ಮಾರ್ಟ್ ಸಿಟಿ ಯೋಜನೆ ಜಾರಿಗೆ ತರಲು ಸಂಸದ ಬಸವರಾಜ ಪ್ರಮುಖ ಪಾತ್ರ ವಹಿಸಿದ್ದಾರೆ. ಶೇ 95%ರಷ್ಟು ಕಾಮಗಾರಿ ಪೂರ್ಣಗೊಳ್ಳಲು ಜ್ಯೊತಿಗಣೇಶ್ ಕಾರಣ. ತುಮಕೂರಿನ ಜ್ಯೋತಿ ಬೆಳಗಲು ಜ್ಯೋತಿ ಗಣೇಶರನ್ನು ಗೆಲ್ಲಿಸಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇಂದು ತುಮಕೂರು ನಗರ ಬಿಜೆಪಿ ಅಭ್ಯರ್ಥಿ ಜ್ಯೋತಿ ಗಣೇಶ್ ಅವರ ಪರ ರೋಡ್ ಶೋ ನಡೆಸಿ ಅವರು ಮತಯಾಚಿಸಿದರು.
ಕೇಂದ್ರದ ಡಬಲ್ ಎಂಜಿನ್ ಸರ್ಕಾರ ಸ್ಮಾರ್ಟ್ ಸಿಟಿ ಯೋಜನೆ ಜಾರಿಗೆ ತಂದಿದೆ. ಅದಕ್ಕೆ ಯಡಿಯೂರಪ್ಪನವರ ನೇತೃತ್ವದಲ್ಲಿ ಸ್ಮಾರ್ಟ್ ಸಿಟಿಗೆ ಶೇ 50% ರಷ್ಟು ಅನುದಾನ ನೀಡಲಾಗುತ್ತಿದೆ. ತುಮಕೂರು ಇನ್ನು ಹತ್ತು ವರ್ಷದಲ್ಲಿ ಬೆಂಗಳೂರು ರೀತಿಯಲ್ಲಿ ಬೃಹತ್ ಮಹಾನಗರವಾಗಿ ಅಭಿವೃದ್ಧಿ ಆಗಲಿದೆ ಎಂದರು.
ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಯಾವುದೇ ಅಭಿವೃದ್ಧಿ ಮಾಡದೇ ಭ್ರಷ್ಟಾಚಾರ ಮಾಡಿದ್ದರು. ಕಾಂಗ್ರೆಸ್ ಅಂದರೆ ಭ್ರಷ್ಟಾಚಾರ, ಅವರನ್ನು ಓಡಿಸಬೇಕು. ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ. ಅವರಿಗೆ ಮತ ಹಾಕಿದರೆ ಕಾಂಗ್ರೆಸ್ ಗೆ ಮತ ಹಾಕಿದಂತೆ, ಅವರಿಗೆ ಮತ ಹಾಕಬೇಡಿ. ಬಿಜೆಪಿಯನ್ನು ಗೆಲ್ಲಿಸಿ ತುಮಕೂರಿನ ಜ್ಯೋತಿ ಬೆಳಗಲು ಜ್ಯೊತಿ ಗಣೇಶರನ್ನು ಗೆಲ್ಲಿಸಿ ಎಂದರು.