ನನಗೆ ನನ್ನ ತುಮಕೂರು ನಗರ ಜನರ ಸಹಕರವೇ ಶ್ರೀರಕ್ಷೆ ನರಸೇಗೌಡ

ನನಗೆ ನನ್ನ ತುಮಕೂರು ನಗರ ಜನರ ಸಹಕರವೇ ಶ್ರೀರಕ್ಷೆ ನರಸೇಗೌಡ

 

 

 

 

ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನದ ಸ್ವಂತಂತ್ರ ಅಭ್ಯರ್ಥಿಯಾಗಿ ಸ್ಪರ್ದಿಸುತ್ತಿರುವ ಜೆಡಿಎಸ್ ಪಕ್ಷದ ಹಿರಿಯ ಮತ್ತು ನಿಷ್ಠಾವಂತ ನಾಯಕ ನರಸೇಗೌಡ ರವರು ಇಂದು ರಂಜಾನ್ ಹಬ್ಬದ ಪ್ರಯುಕ್ತ ವಿವಿಧ ಮುಸ್ಲಿಮ್ ಬಂದವರನ್ನು ಭೇಟಿ ಮಾಡಿ ಪರಸ್ಪರ ಶುಭಾಶಯಗಳು ಕೋರಿದರಲ್ಲದೆ ಈ ಬಾರಿಯ ಚುನಾವಣೆಯಲ್ಲಿ ತನ್ನನ್ನು ಬೆಂಬಲಿಸುವಂತೆ ಕೋರಿದರು

 

 

ಇನ್ನು ತನು ಇಷ್ಟು ವರ್ಷಗಳ ಕಾಲ ನನ್ನ ಜೆಡಿಎಸ್ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಲು ತುಮಕೂರು ನಗರದ ಎಲ್ಲಾ ಸಮುದಾಯದ ಮುಖಂಡರು ಮತ್ತು ನಾಗರಿಕರನ್ನು ಕೋರುತ್ತಿದೆ ಮತ ಯಾಚನೆ ಮಾಡುತ್ತಿದೆ ಆದರೆ ಈ ಭಾರಿ ನನ್ನಾಗಿ ನಾನು ಮತಯಾಚನೆ ಮಾಡುತ್ತಿದ್ದೇನೆ ನನಗೆ ಒಂದು ರೀತಿಯಾದ ರೋಮಾಂಚನ ಉಂಟಾಗುತ್ತಿದೆ ಅಲ್ಲದೆ ನಾನು ಇದುವರೆಗೂ ನಾನಾ ರೀತಿಯ ಚುನಾವಣೆಗಳಲ್ಲಿ ನನ್ನ ಬೆಂಬಲಿಗರು, ನನ್ನ ಹಿತೈಷಿಗಳು, ಸಹೋದರರು, ಸ್ನೇಹಿತರು ಇವರುಗಳನ್ನು ನಿಲ್ಲಿಸಿ ಗೆಲ್ಲಿಸುವಲ್ಲಿ ಶ್ರಮಿಸಿದ್ದೇನೆ ಆದರೆ ಈ ಚುನಾವಣೆ ನನಗಾಗಿ ಸ್ಪರ್ಧೆ ಮಾಡುತ್ತಿದು ಈ ಸಂದರ್ಭದಲ್ಲಿ ನನ್ನ ಅಪಾರ ಸ್ನೇಹಿತರು, ಸಹೋದರ ಮಿತ್ರರು, ಹಿತೈಷಿಗಳು, ಬೆಂಬಲಿಗರು, ನನ್ನ ಸಮಾಜದ ಮುಖಂಡರು, ವಿವಿಧ ಸಮುದಾಯಗಳ ಸ್ನೇಹಿತರು ನನಗೆ ಧೈರ್ಯ ತುಂಬಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಲ್ಲದೆ ತೀವ್ರ ಪೈಪೋಟಿಯನ್ನು ಎಲ್ಲಾ ಪಕ್ಷದ ಸ್ಪರ್ಧಾರ್ಥಿಗಳಿಗೆ ನೀಡುವಲ್ಲಿ ಸಹಕಾರ ಮಾಡುವುದಾಗಿ ಭರವಸೆ ನೀಡುತ್ತಿದ್ದಾರೆ ಅವರ ಆತ್ಮವಿಶ್ವಾಸಕ್ಕೆ ನಾನು ಸದಾ ಋಣಿಯಗಿರುತ್ತೇನೆ ಎಂದರು.

 

 

 

 

 

ಮುಂದುವರೆದು ಇತ್ತೀಚೆಗೆ ಅಂದರೆ ನಾನು ನಾಮಪತ್ರ ಸಲ್ಲಿಸುವ ಹಿಂದಿನ ದಿನ ರಾತ್ರಿ ಗ್ರಾಮಾಂತರ ಶಾಸಕರು, ನಗರ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಮೊದಲಗೊಂಡು ನನ್ನ ಅಪಾರ ಸ್ನೇಹಿತರು ನನ್ನ ಮನೆಗೆ ಬಂದು ಸಹಕರಿಸಲು ಕೋರಿದರು ಆದರೆ ನಾನು ಒಪ್ಪಲಿಲ್ಲ ಆದರೆ ಮಧ್ಯಮಗಳಲ್ಲಿ ಬೇರೆ ರೀತಿಯಾದ ಸಂದೇಶ ರವಾನೆಯಾಗಿದ್ದು ನನಗೆ ತಿಳಿದು ಬಂತು ಅಲ್ಲದೆ ನನ್ನ ಅಸಂಖ್ಯಾತ ಕಾರ್ಯಕರ್ತರಿಗೆ ಗೊಂದಲ ಉಂಟಾಗಿದೆ ಇದರಿಂದ ನಾನು ಅವರುಗಳಿಗೆ ನೀಡುವ ಸಂದೇಶವೇನೆಂದರೆ ನಾನು ಯಾವುದೇ ಕಾರಣಕ್ಕೂ ಚುನಾವಣಾ ಕಣದಿಂದ ಹಿಂದೆ ಸರಿಯುವುದಿಲ್ಲ.

 

 

 

 

ನಾನು ಗೆದ್ದರೆ ಅದು ನನ್ನ ಗೆಲುವಾಗಿರುವುದಿಲ್ಲ ಬದಲಾಗಿ ನನ್ನ ತುಮಕೂರು ನಗರದ ಮತದಾರರಿಗಾಗಿ ನಾನು ಅವರ ಸೇವಕನಂತೆ ಕೆಲಸ ಮಾಡಲು ಸದಾ ಸಿದ್ದನಿದ್ದೇನೆ.

 

 

 

 

 

ನಾನು ಇದುವರೆಗೂ ಸಂಪಾದಿಸರುವುದೆಂದರೆ ಪ್ರೀತಿ ವಿಶ್ವಾಸ ಸ್ನೇಹ ಅದೇ ನನ್ನ ಗೆಲುವಿಗೆ ಮೊದಲ ಹೆಜ್ಜೆ ಎನ್ನಬಹುದು ನನಗೆ ಇದುವರೆಗೂ ಜೆಡಿಎಸ್ ಪಕ್ಷ ಯಾವುದೇ ವಿಧದಲ್ಲೂ ದ್ರೋಹ ಮಾಡಿಲ್ಲ ನಾನು ಸಹ ಪಕ್ಷಕ್ಕೆ ಕಳಂಕ ಬರುವ ರೀತಿ ನಡೆದುಕೊಂಡಿಲ್ಲ ಪಕ್ಷ ನನಗೆ ಟಿಕೆಟ್ ನೀಡಿಲ್ಲ ಎಂಬ ಬೇಸರದಿಂದ ನಾನು ಚುನಾವಣೆಗೆ ಸ್ವಾತಂತ್ರ ಅಭ್ಯರ್ಥಿ ಆಗಿ ಸ್ಪರ್ದಿಸುತ್ತೇದೆನೇ ಹೊರತು ಬೇರೆ ಯಾವುದೇ ಭಿನ್ನಾಭಿಪ್ರಾಯವಿಲ್ಲಾ ಎಂದರು.

 

 

 

 

 

ಚುನಾವಣೆ ಅಧಿಕಾರಿಗಳಿಂದ ಚಿನ್ಹೆ ಬರುವಿಕೆಗಾಗಿ ಕಾಯುತಿರುವೆ ಅದು ಬಂದ ನಂತರ ನಾನು ನನ್ನ ಬೃಹತ್ ಸ್ನೇಹ ಬಳಗ ಮತ್ತು ಆಪ್ತರ ಸಹಕಾರದಿಂದ ತುಮಕೂರು ನಗರದ ಪ್ರತಿಯೊಂದು ಮನೆ ಬಾಗಿಲಿಗೆ ಮತ ಬೀಕ್ಷೆ ಬೇಡಲು ಹೋರಾಡುತ್ತೇನೆ ನಾನು ತುಮಕೂರು ನಗರ ಜನರ ಪ್ರೀತಿ ವಿಶ್ವಾಸ ಗಳಿಸಲು ಸಪಲನಗುತ್ತೇನೆ ಎಂಬ ವಿಶ್ವಾಸ ನನಗಿದೆ ಎಂದರು.

 

 

 

ಮಾಜಿ ಪ್ರಧಾನಿ ದೇವೇಗೌಡ ಅಪ್ಪಾಜಿ ಅವರ ಅಪ್ಪಟ್ಟ ಶಿಷ್ಯರಲ್ಲಿ ನಾನು ಒಬ್ಬ ಮಾಜಿ ಮುಖ್ಯಮಂತ್ರಿ ಕುಮಾರಣ್ಣನ ಗೆಳೆಯರಲ್ಲಿ ನಾನು ಒಬ್ಬ ಎಂದು ಗರ್ವದಿಂದ ನಾನು ಕೊನೆ ಉಸಿರು ಇರುವ ವರೆಗೂ ನೆನಪಿಸಿಕೊಳ್ಳುತೇನೆ ಎಂದರು.

Leave a Reply

Your email address will not be published. Required fields are marked *

error: Content is protected !!