ತುಮಕೂರು : ಮಂಡಿಪೇಟೆ – ಜೆ.ಸಿ.ರಸ್ತೆ, ಗುಬ್ಬಿ ವೀರಣ್ಣ ಕಲಾಕ್ಷೇತ್ರದ ಹಿಂಭಾಗದಲ್ಲಿರುವ ಸ್ಮಾರ್ಟ್ ಸಿಟಿ ವತಿಯಿಂದ ನಿರ್ಮಿಸಲಾಗಿರುವ ವಸತಿ ಸಂಕೀರ್ಣದಲ್ಲಿ ವಾಸಿಸುತ್ತಿರುವ ಮಾರಿಯಮ್ಮ ನಗರದ ನಿವಾಸಿಗಳು, ಸಂವಿಧಾನ ಶಿಲ್ಪಿ ವಿಶ್ವಮಾನವ ಡಾ.ಬಿ.ಆರ್ ಅಂಬೇಡ್ಕರ್ ರವರ 132ನೇ ಜನ್ಮದಿನಚಾರಣೆಯನ್ನು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದರ ಮೂಲಕ ವಿಜೃಂಭಣೆಯಿಂದ ಆಚರಿಸಿದರು.
ಇನ್ನು ಅಂಬೇಡ್ಕರ್ ದಿನಾಚರಣೆಯ ಅಂಗವಾಗಿ ತಮ್ಮ ಬಡಾವಣೆಯ ನಾಮಫಲಕವನ್ನೂ ಸಹ ಅನಾವರಣ ಮಾಡಿ, ಅಂಬೇಡ್ಕರ್ ಮತ್ತು ಅವರ ಗ್ರಾಮದೇವತೆಯಾದ ಮಾರಿಯಮ್ಮ ದೇವಿಗೆ ಪುಷ್ಪಾರ್ಚನೆಯನ್ನು ಮಾಡುವುದರ ಮೂಲಕ ಯಶಸ್ವಿಪೂರ್ಣವಾಗಿ ಅಂಬೇಡ್ಕರ್ ಜನ್ಮದಿನಾಚರಣೆಯನ್ನು ಆಚರಿಸಲಾಯಿತು, ನಾಮ ಫಲಕವನ್ನು ದೊರೈರಾಜು ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯ ಮುಖಂಡ ನರಸಿಂಹಮೂರ್ತಿ, ಅರುಣ್ ಕುಮಾರ್, ಚಕ್ರಪಾಣಿ, ಮಾರಿಯಮ್ಮನಗರದ ನಿವಾಸಿಗಳು ಭಾಗವಹಿಸಿದ್ದರು.