ಮಾದಿಗ ಸಮುದಾಯದ ಇತಿಹಾಸ ಪರಂಪರೆಯುಳ್ಳ ಸಂಪನ್ಮೂಲ ವ್ಯಕ್ತಿಗಳು ನಶಿಸುತ್ತಿರುವುದು ಶೋಚನೀಯ : ನರಸೀಯಪ್ಪ

ತುಮಕೂರು : ದೇಶದಲ್ಲಿ ನೂರಾರು ವರ್ಷಗಳಿಂದ ಶೋಷಣೆ ಮತ್ತು ತುಳಿತಕೊಳ್ಳಗಾಗಿ ಅಸ್ಪೃಶ್ಯರಾಗಿ ಸೌಲಭ್ಯಗಳಿಂದ ವಂಚಿತರಾಗಿರುವ ಮಾದಿಗ ಸಮುದಾಯವು ದೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿದ್ದು ಈ ಸಮುದಾಯಕ್ಕಾಗಿ ಅವರ ಏಳ್ಗೆಗಾಗಿ ಅನೇಕ ವ್ಯಕ್ತಿಗಳು ದುಡಿದಿದ್ದು ಹಿನ್ನೆಲೆಯಲ್ಲಿ ಮಾದಿಗ ಸಮುದಾಯದ ಇತಿಹಾಸ ಪರಂಪರೆಯನ್ನು ಉಳುವಂತಹ ಅನೇಕ ಸಂಪನ್ಮೂಲ ವ್ಯಕ್ತಿಗಳು ಇತ್ತೀಚೆಗೆ ನಶಿಸುತ್ತಿರುವುದುವ ಶೋಚನೀಯವಾಗಿದೆ ಎಂದು ಮಾಜಿ ನಗರ ಸಭಾ ಸದಸ್ಯ ಹಾಗೂ ದಲಿತ ಮುಖಂಡ ನರಸಿಯಪ್ಪ ಅವರು ಕಳವಳ ವ್ಯಕ್ತಪಡಿಸಿದ್ದರು.

 

 

 

ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿರುವ ಜಿಲ್ಲಾಸ್ಪತ್ರೆಯ ಸಭಾಂಗಣದಲ್ಲಿ ಭಾರತೀಯ ಸಾಮಾಜಿಕ ಪರಿವರ್ತನಾ ಚಳುವಳಿಯ ನೇತಾರ ಹಾಗೂ ದಲಿತರ ಅಸ್ಮಿತೆಯಾಗಿದ್ದ ಹೊಡಿ ವೆಂಕಟೇಶ್ ಅವರು ವಿಧಿವಶರಾದ ಹಿನ್ನೆಲೆಯಲ್ಲಿ ಸಭಾಂಗಣದಲ್ಲಿ ನಡೆದ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

 

 

 

 

 

ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟ ಮತ್ತು ಕರ್ನಾಟಕ ರಾಜ್ಯ ಎಸ್ ಸಿ ಎಸ್ ಟಿ ನೌಕರರ ಸಮನ್ವಯ ಸಮಿತಿಯ ಸಹಯೋಗದಲ್ಲಿ ಹೊಡಿ ವೆಂಕಟೇಶ್ ಅವರ ನುಡಿ ನಮನ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ನರಸಿಯಪ್ಪ ಅವರು ತಳ ಸಮುದಾಯಗಳ ಇತಿಹಾಸ ಪರಂಪರೆಯನ್ನು ಹೊಂದಿರುವಂತಹ ಬೆರಳೆಣಿಕೆಯ ವ್ಯಕ್ತಿಗಳಲ್ಲಿ ಹೊಡಿ ವೆಂಕಟೇಶ್ ಅವರು ಒಬ್ಬರಾಗಿದ್ದರು ಇತ್ತೀಚೆಗೆ ಹರಡುತ್ತಿರುವ ಮಾರಣಾಂತಿಕ ಕಾಯಿಲೆಗಳಿಂದ ಸಮುದಾಯದ ಸಂಪನ್ಮೂಲ ವ್ಯಕ್ತಿಗಳನ್ನು ಕಳೆದುಕೊಳ್ಳುತ್ತಿದ್ದೇವೆ ಹೀಗಾಗಿ ಇಂತಹ ರಕ್ಷಣೆಗಾಗಿ ಸಂರಕ್ಷಣಾ ಸಮಿತಿಯನ್ನು ರಚನೆ ಮಾಡಿಕೊಂಡು ಹಣವನ್ನು ಕ್ರೋಢೀಕರಿಸಿ ಇಂತಹವರನ್ನು ರಕ್ಷಿಸಬೇಕು ಎಂದವರು ಹೇಳಿ ತಿಳಿಸಿದರು.

 

 

 

 

 

 

ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯ ಮಾತಂಗ ಫೌಂಡೇಶನ್ ಅಧ್ಯಕ್ಷ ಆರ್ ಲೋಕೇಶ್ ಅವರು ಹೊಡಿ ವೆಂಕಟೇಶ್ ಅವರು ರಾಜ್ಯದ ವಿವಿಧ ಭಾಗಗಳನ್ನು ತಿರುಗಿ ಸಮುದಾಯದ ಅಸ್ಮಿತೆಯಾಗಿದ್ದರು ಬಿಎಸ್‌ಪಿ ಪಕ್ಷದಲ್ಲಿ ಗುರುತಿಸಿಕೊಂಡು ಕಾನ್ಸಿರಾಮ್ ಅವರಿಂದ ಪ್ರಶಂಸೆಗೊಳಗಾದವರು ಸುಮಾರು 25 ವರ್ಷಗಳಿಂದ ನಾವುಗಳು ಜೊತೆಗೂಡಿಕೊಂಡು ಸಮುದಾಯ ಕಟ್ಟುವ ನಿಟ್ಟಿನಲ್ಲಿ ಅನೇಕ ಕ್ಯಾಂಪುಗಳನ್ನು ಮಾಡಿದ್ದೇವೆ ವೆಂಕಟೇಶ್ ಅವರು ಅನೇಕ ಪುಸ್ತಕಗಳನ್ನು ಓದಿ ಜ್ಞಾನವನ್ನು ಸಂಪಾದಿಸಿಕೊಂಡವರು ಸಮುದಾಯದ ಇತಿಹಾಸ ಮತ್ತು ಪರಂಪರೆಯ ಬಗ್ಗೆ ಗಂಟೆಗಟ್ಟಲೆ ಭಾಷಣ ಮಾಡುತ್ತಿದ್ದರು ತಿಂಗಳುಗಳ ಕಾಲ ಮನೆಯನ್ನ ಬಿಟ್ಟು ಕೇವಲ ಸಮುದಾಯದ ರಕ್ಷಣೆಗಾಗಿ ನಿಂತವರು ಇಂಥವರಿಗೆ ದೇವರು ಒಂದು ಮಾರಣಾಂತಿಕ ಕಾಯಿಲೆಯನ್ನು ನೀಡಿ ಸಮುದಾಯದಿಂದ ದೂರ ಮಾಡಿರುವುದು ಸರಿಯಿಲ್ಲವೆಂದು ಅವರು ಕಳವಳ ವ್ಯಕ್ತಪಡಿಸಿದ್ದರು.

 

 

 

 

 

ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೆಂಚಮಾರಯ್ಯ ದಲಿತ ಸಮುದಾಯಗಳಿಗೆ ನ್ಯಾಯ ಕೊಡಿಸಲು ಓಡಿ ವೆಂಕಟೇಶ್ ಅವರು ಇನ್ನಿಲ್ಲದ ಹೋರಾಟಗಳನ್ನು ನಡೆಸಿ ಸಭೆ ಕ್ಯಾಂಪ್ ಗಳನ್ನ ಮಾಡಿ ಯುವಕರನ್ನ ಒಗ್ಗೂಡಿಸಿ ರಾಜಕೀಯ ಪ್ರಜ್ಞೆ ಮೂಡಿಸಿಕೊಳ್ಳುವಂತೆ ಪ್ರೇರೇಪಿಸುತ್ತಿದ್ದರು ನಾನು ಒಬ್ಬ ರಾಜಕೀಯ ವ್ಯಕ್ತಿಯಾಗಿ ಅವರ ಭಾಷಣಕ್ಕೆ ಮರುಳಾಗಿ ಅವರ ಕ್ಯಾಂಪುಗಳಲ್ಲಿ ಭಾಗವಹಿಸಿದ್ದೇ ಇಂತಹ ವ್ಯಕ್ತಿ ಸಮುದಾಯವನ್ನು ಆಗಲಿರುವುದು ದುಃಖಕರ ಸಂಗತಿ ಎಂದರು.

 

 

 

 

 

 

ಸೂರ್ಯ ಆಸ್ಪತ್ರೆ ಮುಖ್ಯಸ್ಥ ಡಾಕ್ಟರ್ ಲಕ್ಷ್ಮೀಕಾಂತ್ ಅವರು ಮಾತನಾಡಿ ತಳ ಸಮುದಾಯಗಳನ್ನು ಸಂಘಟಿಸುವ ಇಂತಹ ಸಂಪನ್ಮೂಲ ವ್ಯಕ್ತಿಗಳನ್ನು ಕಳೆದುಕೊಂಡು ನಾವು ಹತಾಶರಾಗಿದ್ದೇವೆ ಇಂತಹ ವ್ಯಕ್ತಿಗಳ ಕಷ್ಟ ಸುಖಗಳನ್ನ ಅರಿತು ನಾವು ಹೊಂದಿಸುವ ಮನಸು ಮಾಡಬೇಕು ಬದಲಿಗೆ ನುಡಿ ನಮನದಲ್ಲಿ ನೆನೆಯುವಂತಹ ಕೆಲಸದ ಬದಲು ಬದುಕಿರುವಾಗ ಅವರಿಗೆ ನಮ್ಮ ಕೈಯಲ್ಲೇ ಆದಷ್ಟು ಸಹಾಯ ಮಾಡಬೇಕು ಹೀಗಾಗಿ ಇನ್ನುಳಿದ ನಾಯಕರ ರಕ್ಷಣೆಗಾಗಿ ಸಂಘ ರಚನೆ ಮಾಡಿ ಹಣ ಕ್ರೌಡಿಕರಿಸಿ ಅವರ ರಕ್ಷಣೆಗೆ ಮುಂದಾಗಬೇಕು ಸಮುದಾಯಗಳನ್ನ ಸಂಘಟಿಸುವಂತಹ ವ್ಯಕ್ತಿಗಳ ಬಗ್ಗೆ ಮುಂದಿನ ಪೀಳಿಗೆಗೆ ಪರಿಚಯಿಸುವಂತಹ ಕೆಲಸಗಳನ್ನು ಮಾಡಬೇಕು ಎಂದು ಅವರುಗಳ ತಿಳಿಸಿದರು.

 

 

 

 

 

 

ಎಸ್ಸಿ ಎಸ್ಟಿ ನೌಕರರ ಸಮನ್ವಯ ಸಮಿತಿ ಅಧ್ಯಕ್ಷರಾದ ವೈಕೆ ಬಾಲಕೃಷ್ಣಪ್ಪ ಮಾತನಾಡಿ ರಾಜ್ಯದಲ್ಲಿ ಮಾದಿಗ ಸಮುದಾಯವು ಬಹುಸಂಖ್ಯಾತರಾಗಿದ್ದು ಇವರಷ್ಟು ಪ್ರಜಾಪ್ರಭುತ್ವ ವಾದಿಗಳು ಬೇರೊೊಬ್ಬರಿಲ್ಲ ಇಂತಹ ಸಮುದಾಯಗಳಲ್ಲಿ ಹುಟ್ಟಿದಂತಹ ಸಾಂಸ್ಕೃತಿಕ ರಾಯಭಾರಿ ಹೊಡಿ ವೆಂಕಟೇಶ್ ಅವರು ನಮ್ಮನ್ನ ಅಗಲಿರುವುದು ನ್ಯಾಯ ಸಮ್ಮತವಲ್ಲ ನಮ್ಮಲ್ಲಿ ಒಳ್ಳೆಯ ತಜ್ಞರು ವಿದ್ವಾಂಸರು ಇತಿಹಾಸ ಪರಂಪರೆ ಹರಿತಂತಹ ಸಂಪನ್ಮೂಲ ವ್ಯಕ್ತಿಗಳು ಇದ್ದು ವಿವಿಧತೆಯಲ್ಲಿ ಏಕತೆ ಎಂಬಂತೆ ನಮ್ಮ ನಮ್ಮಗಳಲ್ಲಿರುವ ಭಿನ್ನಾಭಿಪ್ರಾಯಗಳನ್ನ ಬಿಟ್ಟು ಒಂದಾಗಿ ಸಮುದಾಯದ ಬೆಳವಣಿಗೆಗೆ ಚಿಂತನೆ ನಡೆಸಬೇಕು ಎಂದು ಅವರು ಹೇಳಿ ಕರೆ ನೀಡಿದರು.

 

 

 

 

ಪ್ರಸ್ತಾವಿಕವಾಗಿ ಮಾತನಾಡಿದ ಪ್ರಾಧ್ಯಾಪಕ ಹಾಗೂ ವಕೀಲ ಜೆಸಿರಂಗದಮಯ್ಯನವರು ಉಡಿ ವೆಂಕಟೇಶ್ ಅವರೊಟ್ಟಿಗೆ ಸ್ನೇಹ ಸಂಬಂಧವನ್ನು ನೆನಪಿಸಿಕೊಂಡು ನುಡಿ ನಮನ ಕಾರ್ಯಕ್ರಮದಲ್ಲಿ ಗದ್ಗದಿತರಾದರು ವೆಂಕಟೇಶ ಅವರ ಸವಿನೆನಪಿಗಾಗಿ ಪುಸ್ತಕವನ್ನು ಮುಂದಿನ ದಿನಗಳಲ್ಲಿ ಮತ್ತು ಮುಂದಿನ ಪೀಳಿಗೆಗೆ ತರಲಾಗುವುದು ಇದಕ್ಕೆ ಎಲ್ಲರ ಸಹಕಾರ ಬೇಕು ಎಂದವರು ತಿಳಿಸಿದರು.

 

 

 

 

 

 

ನುಡಿ ನಮನ ಕಾರ್ಯಕ್ರಮದಲ್ಲಿ ಅರುಣೋದಯ ಗ್ರಾಮಿಣಾಭೀವೃದ್ದೀ ಸಂಸ್ಥಾಪಕಾಧ್ಯಕ್ಷ ಡಾ.ಎಲ್.ಮುಕುಂದ್ ದಲಿತ ಮುಖಂಡರಾದ ಕೊಟ್ಟ ಶಂಕರ್ ಟಿಸಿ ರಾಮಯ್ಯ ಡಾ. ನಾಗರಾಜು,ಡಾ.ಅರುಂಧತಿ, ವಿರೂಪಾಕ್ಷ ಡ್ಯಾಗೇರಹಳ್ಳಿ, ಕುಂದೂರು ಮುರುಳೀ, ಸಾಗರ್ , ಗಂಗಧಾರ್ ಜಿ. ಪ್ರಾಧ್ಯಾಪಕರಾದ ಸುನಿಲ್ ಗಂಗಾಧರ್ ಲಕ್ಷ್ಮಿ ರಂಗಯ್ಯ ಕೆಂಪರಾಜು ಸಿದ್ದೇಶ್ ರವಿಕುಮಾರ್ ಅಮಾರ್ ನಾಗರಾಜು ಸೇರಿದಕ್ಕೆ ವಿವಿಧ ದಲಿತ ಪರ ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರು ಹಾಗೂ ಸ್ನೇಹ ಬಳಗ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!