ತುಮಕೂರು ನಗರ ಜೆಡಿಎಸ್ ಗೆ ಮಾಸ್ಟರ್ ಸ್ಟ್ರೋಕ್ ಕೊಟ್ಟ ಜೆಡಿಎಸ್ ಮುಖಂಡ ನರಸೇಗೌಡ…..???
ಅಟ್ಟಿಕಾ ಬಾಬು ಅವರನ್ನು ತಮ್ಮ ಎಂದು ಹೇಳಿಕೊಂಡಿರುವ ನರಸೇಗೌಡರು
ಇದುವರೆಗೂ ತುಮಕೂರು ಜಿಲ್ಲಾ ಜೆಡಿಎಸ್ ನಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿ, ಪ್ರಮುಖ ಮುಖಂಡರಾಗಿ ಇದುವರೆಗೂ ಪಕ್ಷಕ್ಕಾಗಿ ಹಗಲಿರುಳು ಸೇವೆ ಸಲ್ಲಿಸಿ, ಪಕ್ಷವನ್ನ ತುಮಕೂರು ನಗರದಲ್ಲಿ ಬಲಿಷ್ಠವಾಗಿ ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜೆಡಿಎಸ್ ಮುಖಂಡ ನರಸೇಗೌಡ ರವರು ಮುಂಬರುವ ಚುನಾವಣೆಯಲ್ಲಿ ಅಟಿಕ ಗೋಲ್ಡ್ ಕಂಪನಿಯ ಮಾಲೀಕ ಬೊಮ್ಮನಹಳ್ಳಿ ಬಾಬು ರವರನ್ನು ಬೆಂಬಲಿಸುವುದಾಗಿ ಘೋಷಿಸುವ ಮೂಲಕ ಜೆಡಿಎಸ್ ಪಕ್ಷಕ್ಕೆ ಮಾಸ್ಟರ್ ಸ್ಟ್ರೋಕ್ ಕೊಟ್ಟಿದ್ದಾರೆ ಎಂದರೆ ತಪ್ಪಾಗಲಾರದು.
ಇನ್ನುಳಿದಂತೆ ಅಟ್ಟಿಕಾ ಬಾಬು ಅವರು ಜೆಡಿಎಸ್, ಕಾಂಗ್ರೆಸ್ ಮತ್ಯಾವುದೇ ಪಕ್ಷದಿಂದ ಟಿಕೇಟ್ ತರಲಿ ಬಿಡಲಿ, ಸ್ವತಂತ್ರ ಅಭ್ಯರ್ಥಿಯನ್ನಾಗಿ ಮಾಡಿದರೂ ಸಹ ತಾನು ಅವರನ್ನು ಈ ಭಾರಿ ತುಮಕೂರು ನಗರಕ್ಕೆ ಎಂ.ಎಲ್.ಎ ಮಾಡುವುದು ಶತಃ ಸಿದ್ಧ ಎಂದು ಘಂಟಾಘೋಷವಾಗಿ ಹೇಳಿರುವ ವಿಡಿಯೋ ಲೀಕ್ ಆಗಿದೆ.
ಇತ್ತೀಚಿಗೆ ನರಸೇಗೌಡರ ಮನೆಗೆ ಹೆಚ್.ಡಿ ಕುಮಾರಸ್ವಾಮಿ ರವರು ಸಹ ಭೇಟಿ ನೀಡಿ ನರಸೇಗೌಡರ ಆರೋಗ್ಯ ಕ್ಷೇಮ ವಿಚಾರಿಸಿ ಪಕ್ಷದಲ್ಲೇ ಉಳಿದುಕೊಳ್ಳುವಂತೆ ಹಾಗೂ ತುಮಕೂರು ನಗರ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಬೆಂಬಲಿಸುವಂತೆ ಮನವಿ ಮಾಡಿದ್ದರು.
ಕೊನೆ ಕ್ಷಣದಲ್ಲಿ ಬೊಮ್ಮನಹಳ್ಳಿ ಬಾಬು ರವರಿಗೆ ತಮ್ಮ ಸಹಕಾರ ನೀಡಿ ಮುಂದಿನ ಚುನಾವಣೆಯಲ್ಲಿ ಬಾಬುರವರನ್ನು ತುಮಕೂರು ನಗರ ಶಾಸಕರನ್ನಾಗಿ ಮಾಡುವ ಗುರಿ ಹೊಂದಲಾಗಿದ್ದು ಜೆಡಿಎಸ್ ಪಕ್ಷದಿಂದ ಟಿಕೆಟ್ ತಂದರು ಸಹ ಸಪೋರ್ಟ್ ಮಾಡುವೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ತಂದರು ಸಹ ಬಾಬುರವರಿಗೆ ತಮ್ಮ ಬೆಂಬಲವನ್ನ ನೀಡುವುದಾಗಿ ವಿಡಿಯೋವನ್ನು ಬಿಡುವ ಮೂಲಕ ಜೆಡಿಎಸ್ ಪಕ್ಷಕ್ಕೆ ಬಹುದೊಡ್ಡ ಶಾಕ್ ನೀಡಿದ್ದಾರೆ.
ಮಾಜಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ರವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ನರಸೇಗೌಡರನ್ನ ಇತ್ತೀಚಿಗೆ ನಗರ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ರವರು ಒಲೈ ಸಿಕೊಳ್ಳುವಲ್ಲಿ ಸಂಪೂರ್ಣ ವಿಫಲರಾಗಿದ್ದರು ಎನ್ನುವ ವಿಷಯ ಸಹ ಪಕ್ಷದ ಆಂತರಿಕ ವಲಯದಲ್ಲಿ ಕೇಳಿ ಬರುತ್ತಿತ್ತು.
ನರಸೆಗೌಡರ ಈ ನಿರ್ಧಾರದಿಂದ ಜೆಡಿಎಸ್ ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು ನರಸೆಗೌಡರ ನಿರ್ಧಾರದಿಂದ ಜೆಡಿಎಸ್ ಪಕ್ಷಕ್ಕೆ ಬಹುದೊಡ್ಡ ಆಘಾತ ಎದುರಾಗಿದ್ದು ಮುಂದೆ ಯಾವ ರೀತಿ ಬೆಳವಣಿಗೆ ಆಗಲಿದೆ ಎಂಬುದನ್ನು ಕಾದು ನೋಡಬೇಕಿದೆ.