ತುಮಕೂರು : ಇತ್ತೀಚೆಗೆ ತುಮಕೂರು ಜಿಲ್ಲೆಯಲ್ಲಿ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ಹಲವಾರು ವಿಷಯಗಳಲ್ಲಿ ಸುದ್ಧಿಯಾಗುತ್ತಿದೆ, ಅದಕ್ಕೆ ಸಂಬಂಧಿಸಿದಂತೆ ತುಮಕೂರು ತಾಲ್ಲೂಕು ಅರಿಯೂರು ಗ್ರಾಮದಲ್ಲಿ ಮಾಜಿ ಶಾಸಕರಾದ ಸುರೇಶ್ ಗೌಡರವರು ತಮ್ಮನ್ನು ಕೊಲ್ಲಲು ಹಾಲಿ ಶಾಸಕ ಡಿ.ಸಿ.ಗೌರಿಶಂಕರ್ ಸುಪಾರಿಯನ್ನೂ ನೀಡಿದ್ದಾರೆಂದು ಬಹಿರಂಗ ಹೇಳಿಕೆಯನ್ನು ನೀಡಿರುತ್ತಾರೆ.
ಅದಕ್ಕೆ ಪ್ರತ್ಯುತ್ತರವಾಗಿ ಗೌರಿಶಂಕರ್ ರವರು ತಾನು ಏನೂ ಮಾಡಿಲ್ಲವೆಂದು ಹೇಳುತ್ತಾ, ತಮ್ಮ ರಕ್ಷಣೆಯನ್ನು ಕೋರಿ ಪೊಲೀಸ್ ಇಲಾಖೆಗೆ ದೂರನ್ನೂ ಸಹ ದಾಖಲಿಸಿರುತ್ತಾರೆ.
ಇದರ ಬೆನ್ನಲ್ಲೇ ಮಾಜಿ ಶಾಸಕರಾದ ಬಿ.ಸುರೇಶ್ ಗೌಡರವರು ತಾವು ನೀಡಿರುವ ಹೇಳಿಕೆ ನೂರರಷ್ಟು ಸತ್ಯವಾಗಿದ್ದು ಇದಕ್ಕೆ ಪುಷ್ಠಿ ನೀಡುವಂತೆ ಬೊಮ್ಮನಹಳ್ಳಿ ಬಾಬು (ಅಟ್ಟಿಕಾ ಬಾಬು)ರವರ ಮೂಲಕ ಹಿರೇಹಳ್ಳಿ ಮಹೇಶ್ ರವರಿಗೆ ಸುಮಾರು ಐದು ಕೋಟಿ ಹಣವನ್ನು ನೀಡಿ ಅವರ ಕಡೆಯಿಂದ ನನ್ನನ್ನು ಕೊಲ್ಲಿಸಲು ಜೈಲಿನಲ್ಲಿ ಖೈದಿಯೊಬ್ಬನಿಗೆ ಸುಫಾರಿ ನೀಡಲು ಮುಂದಾಗಿದ್ದಾರೆಂದು ಸುದ್ಧಿಗಾರರೊಂದಿಗೆ ತಿಳಿಸಿರುತ್ತಾರೆ.
ಏನೇ ಆದರೆ ಯಾರೇ ಆಗಲಿ ರಾಜಕೀಯದಲ್ಲಿ ವೈರತ್ವವಿರುತ್ತದೇ, ಅದನ್ನು ಕೊಲೆ ಮಾಡಿಸುವ ಹಂತಕ್ಕೆ ತಲುಪಬಾರದಲ್ಲವೇ, ಇಷ್ಟೊಂದು ಕೀಳು ಮಟ್ಟದ ರಾಜಕರಣ ನಮ್ಮ ತುಮಕೂರು ಜಿಲ್ಲೆಗೆ ಬೇಕೇ !!!!!!